For Quick Alerts
  ALLOW NOTIFICATIONS  
  For Daily Alerts

  ಮಕ್ಕಳು ಏನ್ ಓದ್ತಿದ್ದಾರೆ ಅನ್ನೋದೇ ಎಸ್.ಪಿ.ಬಿಗೆ ಗೊತ್ತಿರಲಿಲ್ಲ!

  By Harshitha
  |

  ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದಿ, ತುಳು, ಕೊಂಕಣಿ, ಒರಿಯಾ, ಬೆಂಗಾಲಿ, ಮರಾಠಿ, ಪಂಜಾಬಿ ಸೇರಿದಂತೆ ಸುಮಾರು ಹದಿನೈದು ಭಾಷೆಗಳಲ್ಲಿ ಸರಿಸುಮಾರು ನಲವತ್ತು ಸಾವಿರ ಹಾಡುಗಳನ್ನ ಹಾಡಿರುವ ಭಾರತದ ಹೆಮ್ಮೆಯ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ.

  ಚಿತ್ರರಂಗಕ್ಕೆ ಕಾಲಿಟ್ಟು ಬರೋಬ್ಬರಿ 50 ವರ್ಷಗಳು ಕಳೆದಿದ್ದರೂ ಎಸ್.ಪಿ.ಬಿಗೆ ಇರುವ ಬೇಡಿಕೆ ಮಾತ್ರ ಕಡಿಮೆ ಆಗಿಲ್ಲ.

  ದಿನವೊಂದರಲ್ಲಿ ಹತ್ತಾರು ಗೀತೆಗಳನ್ನ ರೆಕಾರ್ಡ್ ಮಾಡುವಲ್ಲಿ ಬಿಜಿಯಾಗಿರುತ್ತಿದ್ದ ಎಸ್.ಪಿ.ಬಾಲಸುಬ್ರಹ್ಮಣ್ಯಂ, ತಮ್ಮ ಕುಟುಂಬಕ್ಕೆ ಹೆಚ್ಚು ಸಮಯ ನೀಡಲಿಲ್ಲ.

  ತಮ್ಮ ಇಬ್ಬರು ಮಕ್ಕಳು ಚರಣ್ ಮತ್ತು ಪಲ್ಲವಿ ಏನ್ಮಾಡ್ತಿದ್ದಾರೆ? ಏನು ಓದುತ್ತಿದ್ದಾರೆ ಅನ್ನೋದೇ ಎಸ್.ಪಿ.ಬಿಗೆ ಗೊತ್ತಿರಲಿಲ್ಲವಂತೆ.![ಎಸ್.ಪಿ.ಬಾಲಸುಬ್ರಹ್ಮಣ್ಯಂಗೆ ಡಾ.ರಾಜ್ ಕ್ಷಮೆ ಕೇಳಿದ ಗುಟ್ಟು ರಟ್ಟಾಯ್ತು!]

  ಹಾಗಂತ ಖುದ್ದು ಎಸ್.ಪಿ.ಬಾಲಸುಬ್ರಹ್ಮಣ್ಯಂ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಹೇಳಿದರು. ಮುಂದೆ ಓದಿ....

  ತಳ್ಳಗಿದ್ದ ನಾನು ದಢೂತಿ ಆಗ್ಬಿಟ್ಟೆ.!

  ತಳ್ಳಗಿದ್ದ ನಾನು ದಢೂತಿ ಆಗ್ಬಿಟ್ಟೆ.!

  ''ಕಾಲೇಜ್ ಟೈಮ್ ನಲ್ಲಿ ಸಣ್ಣಗೆ ಇದ್ದೆ. ಕೆಲಸದಿಂದಾಗಿ ದಪ್ಪ ಆಗ್ಬಿಟ್ಟೆ. ಬೆಳಗ್ಗೆ 7 ಗಂಟೆಗೆ ಶುರು ಮಾಡಿದರೆ, ರಾತ್ರಿ 12.30ಕ್ಕೆ ಮನೆಗೆ ಬರ್ತಾಯಿದ್ದೆ. ಮಧ್ಯದಲ್ಲಿ ತುಂಬಾ ಕಾಫಿ ಕುಡಿಯುತ್ತಿದ್ದೆ. ಟೈಮ್ ಗೆ ಸರಿಯಾಗಿ ತಿನ್ನುತ್ತಿರಲಿಲ್ಲ. ಸಮಯ ಆದಾಗ ಚೆನ್ನಾಗಿ ತಿಂದುಬಿಡ್ತಾಯಿದ್ದೆ. ಹೀಗಾಗಿ ತೂಕ ಜಾಸ್ತಿ ಆಯ್ತು'' - ಎಸ್.ಪಿ.ಬಾಲಸುಬ್ರಹ್ಮಣ್ಯಂ[ಭಾರತದ ಹೆಮ್ಮೆ ಎಸ್.ಪಿ.ಬಾಲಸುಬ್ರಹ್ಮಣ್ಯಂಗೆ ಆಗಿತ್ತು ಮಹಾ ಮೋಸ!]

  ಮಕ್ಕಳ ಬಗ್ಗೆ ಗೊತ್ತೇಯಿರಲಿಲ್ಲ!

  ಮಕ್ಕಳ ಬಗ್ಗೆ ಗೊತ್ತೇಯಿರಲಿಲ್ಲ!

  ''ನಾನು ಎಷ್ಟು ಬಿಜಿಯಿದ್ದೆ ಅಂದ್ರೆ, ಮಕ್ಕಳು ಏನು ಮಾಡ್ತಿದ್ದಾರೆ ಅನ್ನೋದೇ ಗೊತ್ತಾಗ್ತಿರ್ಲಿಲ್ಲ'' - ಎಸ್.ಪಿ.ಬಾಲಸುಬ್ರಹ್ಮಣ್ಯಂ[ಗಾನ ಕೋಗಿಲೆ ಎಸ್.ಪಿ.ಬಾಲಸುಬ್ರಹ್ಮಣ್ಯಂಗೆ ಕೈ ಕೊಟ್ಟ ಹುಡುಗಿ ಯಾರು?]

  ಸಹಿ ಮಾಡುವುದಷ್ಟೇ ಕೆಲಸ!

  ಸಹಿ ಮಾಡುವುದಷ್ಟೇ ಕೆಲಸ!

  ''ಮಕ್ಕಳು ಯಾವ ಸ್ಕೂಲ್ ನಲ್ಲಿದ್ದಾರೆ. ಯಾವ ಕ್ಲಾಸ್ ಓದುತ್ತಿದ್ದಾರೆ ಅಂತ ಗೊತ್ತಿರ್ಲಿಲ್ಲ. ಅವರ ಪ್ರೋಗ್ರೆಸ್ ರಿಪೋರ್ಟ್ ಗೆ ಮಾತ್ರ ಸಹಿ ಹಾಕುತ್ತಿದ್ದೆ. ಕಮ್ಮಿ ಮಾರ್ಕ್ಸ್ ಬಂದಾಗ ಮಾತ್ರ ಮಾತನಾಡುತ್ತಿದ್ದೆ'' - ಎಸ್.ಪಿ.ಬಾಲಸುಬ್ರಹ್ಮಣ್ಯಂ

  ಫ್ಯಾಮಿಲಿ ಸಪೋರ್ಟ್ ಇರ್ಲಿಲ್ಲ ಅಂದ್ರೆ...

  ಫ್ಯಾಮಿಲಿ ಸಪೋರ್ಟ್ ಇರ್ಲಿಲ್ಲ ಅಂದ್ರೆ...

  ''ನನ್ನ ಫ್ಯಾಮಿಲಿ ನನಗೆ ಸಪೋರ್ಟ್ ಮಾಡ್ಲಿಲ್ಲ ಅಂದ್ರೆ ತುಂಬಾ ಕಷ್ಟ ಆಗ್ತಿತ್ತು'' - ಎಸ್.ಪಿ.ಬಾಲಸುಬ್ರಹ್ಮಣ್ಯಂ

  ಹೆಂಡತಿ ಗ್ರೇಟ್!

  ಹೆಂಡತಿ ಗ್ರೇಟ್!

  ''ನನ್ನ ಹೆಂಡತಿಗೆ ತುಂಬಾ ಚಿಕ್ಕವಯಸ್ಸು ಮದುವೆ ಆದಾಗ. ನನಗೆ ತುಂಬಾ ಸಪೋರ್ಟ್ ಮಾಡಿದಳು. ಇಡೀ ಕುಟುಂಬವನ್ನ ಮ್ಯಾನೇಜ್ ಮಾಡಿದಳು. ಅವಳು ತುಂಬಾ ಕಷ್ಟ ಪಟ್ಟಿದ್ದಾರೆ. ನಮ್ಮ ನಡುವೆ ಕೂಡ ತುಂಬಾ ಜಗಳ ಆಗಿತ್ತು. ಎಲ್ಲವನ್ನೂ ಮೀರಿ ನಾನು ಇಷ್ಟು ಸಾಧಿಸುವುದಕ್ಕೆ ಕಾರಣ ನನ್ನ ಫ್ಯಾಮಿಲಿ'' - ಎಸ್.ಪಿ.ಬಾಲಸುಬ್ರಹ್ಮಣ್ಯಂ

  ಈಗಲೂ ಸಮಯ ಇಲ್ಲ!

  ಈಗಲೂ ಸಮಯ ಇಲ್ಲ!

  ''ಈಗಲೂ ಕುಟುಂಬದ ಜೊತೆ ಕಾಲ ಕಳೆಯೋಕೆ ಸಮಯ ಸಿಗಲ್ಲ. ಟೈಮ್ ಸಿಕ್ಕಾಗ ಮೊಮ್ಮಕ್ಕಳ ಜೊತೆ ಆಟವಾಡುತ್ತೇನೆ'' - ಎಸ್.ಪಿ.ಬಾಲಸುಬ್ರಹ್ಮಣ್ಯಂ

  English summary
  Multilingual Singer S.P.Balasubrahmanyam was so busy that he din't know what his children are studying. Read the Article to know S.P.Balasubrahmanyam's detached life because of his Profession.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X