»   » ಸುಧಾರಾಣಿಗೆ ಡಾ.ರಾಜ್ ಸಲುಗೆ ಕೊಟ್ಟಿದ್ರು.! ಮತ್ತೊಬ್ಬರು ಹೀಯಾಳಿಸಿದ್ರು.!

ಸುಧಾರಾಣಿಗೆ ಡಾ.ರಾಜ್ ಸಲುಗೆ ಕೊಟ್ಟಿದ್ರು.! ಮತ್ತೊಬ್ಬರು ಹೀಯಾಳಿಸಿದ್ರು.!

Posted By:
Subscribe to Filmibeat Kannada

12ನೇ ವಯಸ್ಸಿಗೆ ಕನ್ನಡ ಚಿತ್ರರಂಗಕ್ಕೆ 'ನಾಯಕಿ' ಆಗಿ ನಟಿ ಸುಧಾರಾಣಿ ಪರಿಚಯ ಆಗಲು ಕಾರಣ ನಟ ಸಾರ್ವಭೌಮ ಡಾ.ರಾಜ್ ಕುಮಾರ್ ಪತ್ನಿ ಪಾರ್ವತಮ್ಮ ರಾಜ್ ಕುಮಾರ್.

'ಆನಂದ್', 'ಮನ ಮೆಚ್ಚಿದ ಹುಡುಗಿ' ಚಿತ್ರಗಳಲ್ಲಿ ಶಿವರಾಜ್ ಕುಮಾರ್ ಗೆ ಜೋಡಿ ಆಗಿ ಅಭಿನಯಿಸಿದ ನಟಿ ಸುಧಾರಾಣಿ ದೊಡ್ಮನೆ ಕುಟುಂಬಕ್ಕೆ ಹತ್ತಿರವಾದರು. ಸುಧಾರಾಣಿ ಕಂಡರೆ ಅಪ್ಪಾಜಿಗಂತೂ ಎಲ್ಲಿಲ್ಲದ ಅಕ್ಕರೆ. [ಸುಧಾರಾಣಿ ವೈಯುಕ್ತಿಕ ಜೀವನದ ಬಗ್ಗೆ ಯಾರಿಗೂ ಗೊತ್ತಿಲ್ಲದ ಕಠೋರ ಸತ್ಯ!]

ಸೌಮ್ಯ ಸ್ವಭಾವದ ಹುಡುಗಿ ಸುಧಾರಾಣಿಗೆ ಡಾ.ರಾಜ್ ಕುಮಾರ್ ಸಲುಗೆ ನೀಡಿದ್ರೆ, ಮತ್ತೊಬ್ಬರು ಹೀಯಾಳಿಸಿದ್ದರು.! [ಕನ್ನಡ ನಟಿ ಸುಧಾರಾಣಿ ಪತಿ ಬೇರಾರೂ ಅಲ್ಲ, 'ಇವರೇ'.!]

ಈ ಘಟನೆಗಳ ಕುರಿತು ನಟಿ ಸುಧಾರಾಣಿ, ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಮನಬಿಚ್ಚಿ ಮಾತನಾಡಿದರು. ಅದನ್ನೆಲ್ಲಾ ಕೆಳಗಿರುವ ಸ್ಲೈಡ್ ಗಳಲ್ಲಿ ಓದಿ.....

ನಾಲ್ಕನೇ ಚಿತ್ರಕ್ಕೆ ಅದೃಷ್ಟ.!

ಕನ್ನಡ ಚಿತ್ರರಂಗಕ್ಕೆ 'ನಾಯಕಿ' ಆಗಿ ಪರಿಚಯಗೊಂಡ ಎರಡೇ ವರ್ಷಗಳಲ್ಲಿ ಅಂದ್ರೆ, 1988 ರಲ್ಲಿ ತೆರೆಕಂಡ 'ದೇವತಾ ಮನುಷ್ಯ' ಚಿತ್ರದಲ್ಲಿ ಡಾ.ರಾಜ್ ಕುಮಾರ್ ಗೆ ಮಗಳಾಗಿ ಅಭಿನಯಿಸುವ ಅದೃಷ್ಟ ನಟಿ ಸುಧಾರಾಣಿಗೆ ಲಭಿಸ್ತು. 'ದೇವತಾ ಮನುಷ್ಯ' ನಟಿ ಸುಧಾರಾಣಿ ಅಭಿನಯದ ನಾಲ್ಕನೇ ಚಿತ್ರ. [ನಟಿ ಸುಧಾರಾಣಿ ಮಾಡಿರುವ ಸಾಧನೆ ಬಗ್ಗೆ ನಿಮಗೆಷ್ಟು ಗೊತ್ತು?]

ಸಲುಗೆ ಕೊಟ್ಟಿದ್ದ ಅಪ್ಪಾಜಿ!

''ಅಪ್ಪಾಜಿ ನನಗೆ ಎಷ್ಟು ಸಲುಗೆ ಕೊಟ್ಟಿದ್ದರು ಅಂದ್ರೆ, ಸಾಂಗ್ ಶೂಟಿಂಗ್ ಆಗುವಾಗ ನಾನು ಅವರಿಗೆ ಹೇಳಿಕೊಡುತ್ತಿದೆ 'ಹೀಗೆ ಮಾಡಿ' ಅಂತ. ಅದನ್ನ ನೋಡಿ ನಮ್ಮ ಅಮ್ಮ ನನ್ನ ಕರೆದು ಸರಿಯಾಗಿ ಕೊಟ್ಟರು. 'ತಲೆ ಬೇಡ್ವಾ. ನೀನು ಅವರಿಗೆ ಹೇಳಿಕೊಡ್ತೀಯಾ' ಅಂತ. ಆ ಲೆವೆಲ್ ಗೆ ಕಮ್ಫರ್ಟ್ ಇತ್ತು ಅಪ್ಪಾಜಿ ಜೊತೆ'' - ಸುಧಾರಾಣಿ [ಏಳನೇ ಕ್ಲಾಸ್ ಗೆ ನಾಯಕಿಯಾದ ಸುಧಾರಾಣಿ ಪಟ್ಟ ಹಿಂಸೆ! ಯಾಕ್ಕೇಳ್ತೀರಾ!]

ರಾಜ್ ಕುಮಾರ್ ರವರೇ ಸೂಚಿಸಿದ್ದು!

''ದೇವತಾ ಮನು‍ಷ್ಯ' ಸಿನಿಮಾ ಮಾಡುವಾಗ, ಮಗಳ ಪಾತ್ರಕ್ಕೆ ಅಪ್ಪಾಜಿ ಅವರೇ ನನ್ನ ಹೆಸರನ್ನ ಸೂಚಿಸಿದ್ದಂತೆ. ಅದನ್ನ ಕೇಳಿ ತುಂಬಾ ಖುಷಿ ಆಯ್ತು'' - ಸುಧಾರಾಣಿ

ಸುಧಾರಾಣಿಗೆ ಬೇಜಾರು!

''ಕೆಲವೊಂದು ಸಿನಿಮಾಗಳಲ್ಲಿ, ನಾನು ಹೀರೋಗಿಂತ ಚೆನ್ನಾಗಿ ಪರ್ಫಾಮ್ ಮಾಡಿದ್ದೀನಿ ಅನ್ನೋ ಕಾರಣಕ್ಕೆ ರೀಟೇಕ್ ಮಾಡಿದ್ದಾರೆ. ಅಂತಹ ಟೈಮ್ ನಲ್ಲಿ ತುಂಬಾ ಬೇಜಾರಾಗ್ತಿತ್ತು'' - ಸುಧಾರಾಣಿ

ಸುಧಾರಾಣಿಗೆ ಅವಮಾನ ಮಾಡಿದವರು ಯಾರು?

''ಕೆಲ ವರ್ಷಗಳ ಹಿಂದೆಯಷ್ಟೆ, ನನ್ನ ಜೊತೆ ಆಕ್ಟ್ ಮಾಡಿರುವವರು (ಹೆಸರು ಬೇಡ) ಬಂದು 'ಮೂತಿ ಯಾಕೆ ಹೀಗೆ ಮಾಡಿದ್ದೀಯಾ? ಸ್ಕ್ರೀನ್ ಮೇಲೆ ತುಂಬಾ ಅಸಹ್ಯವಾಗಿದೆ' ಅಂತ ಹೇಳಿದ್ರು'' - ಸುಧಾರಾಣಿ

ಇಡೀ ದಿನ ಅತ್ತಿದ್ದೇನೆ!

''ಆಗ ನಾನು ಎಷ್ಟು ಕುಗ್ಗಿ ಹೋದೆ ಅಂದ್ರೆ, ನನಗೆ ಅವತ್ತು ಶೂಟಿಂಗ್ ಮಾಡೋಕೆ ಇಷ್ಟ ಇರ್ಲಿಲ್ಲ. ಮನೆಗೆ ಬಂದು ತುಂಬಾ ಅತ್ತಿದ್ದೇನೆ'' - ಸುಧಾರಾಣಿ

ನೋವಾಗುವುದು....

''ನೆಗೆಟಿವ್ ಕಾಮೆಂಟ್ ಗಳು ತುಂಬಾ ಹರ್ಟ್ ಮಾಡುತ್ತೆ ನನಗೆ. ಮುಂಚೆ ಆಗಿದ್ರೆ, ದಿನಗಟ್ಟಲೆ ಮೂಡ್ ಔಟ್ ಆಗ್ತಿದ್ದೆ. ಈಗ ಅಂದ್ರೆ ಕೆಲವೇ ನಿಮಿಷಗಳು ಅಷ್ಟೆ. ಆಮೇಲೆ ಸರಿ ಹೋಗ್ತೀನಿ'' - ಸುಧಾರಾಣಿ

ನನ್ನ ವಾಯ್ಸ್ ನನಗೆ ಇಷ್ಟ ಇಲ್ಲ!

''ನನಗೆ ನನ್ನ ವಾಯ್ಸ್ ಕೇಳುವುದಕ್ಕೆ ಇಷ್ಟ ಇಲ್ಲ. ನನ್ನ ಸಿನಿಮಾಗಳಿಗೆ ನಾನು ಡಬ್ಬಿಂಗ್ ಮಾಡಿಕೊಂಡರೂ, ನನ್ನ ವಾಯ್ಸ್ ನನಗೆ ಯಾವತ್ತೂ ಇಷ್ಟ ಆಗಿಲ್ಲ. ಆದರೂ, ಎಷ್ಟೊಂದು ಜನ ನನ್ನಿಂದ ಬೇರೆ ನಾಯಕಿಯರಿಗೆ ಡಬ್ಬಿಂಗ್ ಮಾಡಿಸಿದ್ದಾರೆ. ಅಯ್ಯೋ, ಅದು ಯಾಕೆ ಅಂತ ನನಗೆ ಗೊತ್ತಿಲ್ಲ'' - ಸುಧಾರಾಣಿ

English summary
Kannada Actress Sudha Rani spoke about Dr.Rajkumar in Zee Kannada Channel's popular show Weekend With Ramesh season 2.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada