For Quick Alerts
  ALLOW NOTIFICATIONS  
  For Daily Alerts

  ಕನ್ನಡ ನಟಿ ಸುಧಾರಾಣಿ ಪತಿ ಬೇರಾರೂ ಅಲ್ಲ, 'ಇವರೇ'.!

  By Harshitha
  |

  ಲವ್ ಫೇಲ್ಯೂರ್ ಆದ್ರೆ, ಸಂಬಂಧಗಳಲ್ಲಿ ಕೊಂಚ ಏರುಪೇರು ಆದ್ರೆ, ಮಾನಸಿಕ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಳ್ಳುವ ಮನಃಸ್ಥಿತಿ ಈಗಿನ ಯುವ ಜನಾಂಗದ್ದು. ಇಂತಹ ಪ್ರಕರಣಗಳನ್ನ ನೀವು ಪ್ರತಿನಿತ್ಯ ನೋಡಿರ್ತೀರಿ. ಕಿರುತೆರೆ ನಟಿ ಪ್ರತ್ಯೂಷ ಆತ್ಮಹತ್ಯೆ ಮಾಡಿಕೊಂಡಿದ್ದೂ ಕೂಡ ಇಂತಹ ಕಾರಣಕ್ಕೆ ಅಂತ ಹೇಳಲಾಗ್ತಿದೆ. ['ಬಾಲಿಕಾ ವಧು' ಪ್ರತ್ಯೂಷಾ ಆತ್ಮಹತ್ಯೆಗೆ ಏನು ಕಾರಣ?]

  ಆದರೆ, ಯಶಸ್ಸಿನ ಉತ್ತುಂಗದಲ್ಲಿ ಇರಬೇಕಾದರೆ, ನಟನೆ ಬಿಟ್ಟು ಮದುವೆ ಆಗಿ ಅಮೇರಿಕಾ ಸೇರಿದ ನಟಿ ಸುಧಾರಾಣಿಗೆ ದಾಂಪತ್ಯದ ಸುಖ ಸಿಗಲೇ ಇಲ್ಲ. ಬದಲಾಗಿ ಪತಿ ಡಾ.ಸಂಜಯ್ ರಿಂದಲೇ ಪ್ರಾಣ ಬೆದರಿಕೆ ಇತ್ತು.

  ಸುಖದ ಸುಪ್ಪತ್ತಿಗೆಯಲ್ಲಿ ಬೆಳೆದ ಸುಧಾರಾಣಿ ತಿನ್ನೋಕೆ ಏನೂ ಇಲ್ಲದೆ, ಬೇರೆಯವರ ಮನೆಯಲ್ಲಿ ಎಷ್ಟೋ ದಿನಗಳನ್ನು ಕಳೆದಿದ್ದರು. ಆದರೂ, ಕುಗ್ಗದೆ, ಮಾನಸಿಕ ಖಿನ್ನತೆಗೆ ಒಳಗಾಗದೆ ಎಲ್ಲಾ ಸಂಕಷ್ಟಗಳನ್ನು ಎದುರಿಸಿದ ನಟಿ ಸುಧಾರಾಣಿಯವರ ಮಾನಸಿಕ ಸ್ಥೈರ್ಯವನ್ನ ಮೆಚ್ಚಲೇಬೇಕು. [ಸುಧಾರಾಣಿ ವೈಯುಕ್ತಿಕ ಜೀವನದ ಬಗ್ಗೆ ಯಾರಿಗೂ ಗೊತ್ತಿಲ್ಲದ ಕಠೋರ ಸತ್ಯ!]

  ಅಮೇರಿಕಾದಲ್ಲಿ ಚಿತ್ರಹಿಂಸೆ ನೀಡಿದ ಡಾ.ಸಂಜಯ್ ಗೆ ವಿಚ್ಛೇದನ ನೀಡಿದ ನಟಿ ಸುಧಾರಾಣಿ ಭಾರತಕ್ಕೆ ಮರಳಿದ ಮೇಲೆ ಹೊಸ ಜೀವನ ಆರಂಭಿಸಿದರು. ತಮ್ಮ ಕುಟುಂಬಕ್ಕೆ ತೀರಾ ಆಪ್ತರಾಗಿದ್ದ, ತಮಗೆ ಮಾನಸಿಕ ಸ್ಥೈರ್ಯ ತುಂಬಿದ್ದ ಗೋವರ್ಧನ್ ಎಂಬುವರನ್ನ ನಟಿ ಸುಧಾರಾಣಿ ಮದುವೆ ಆದರು. ನಿಧಿ ಎಂಬ ಮುದ್ದಾದ ಮಗಳಿದ್ದಾಳೆ. [ಏಳನೇ ಕ್ಲಾಸ್ ಗೆ ನಾಯಕಿಯಾದ ಸುಧಾರಾಣಿ ಪಟ್ಟ ಹಿಂಸೆ! ಯಾಕ್ಕೇಳ್ತೀರಾ!]

  ''ನನ್ನ ಫ್ಯಾಮಿಲಿ ನನಗೆ ಸ್ಟ್ರಾಂಗ್ ಫೌಂಡೇಶನ್ ನೀಡಿದ್ರೆ, ಅದರ ಮೇಲೆ ಅರಮನೆ ಕಟ್ಟಿದವರು ಗೋವರ್ಧನ್. ಅಮೇರಿಕಾದಿಂದ ವಾಪಸ್ ಬಂದಮೇಲೆ ಅವರೇ ನನಗೆ ತುಂಬಾ ಸಪೋರ್ಟ್ ಮಾಡಿದ್ದು. ಎಷ್ಟೋ ವಿಷಯಗಳು ನನ್ನ ಫ್ಯಾಮಿಲಿಯವರಿಗೆ ಹೇಳಿಕೊಳ್ಳಲಿಲ್ಲ. ಅಂತಹ ವಿಷಯಗಳನ್ನ ನಾನು ಗೋವರ್ಧನ್ ಗೆ ಹೇಳಿದ್ದೆ. ಸಪೋರ್ಟ್ ಎಂಬ ಪದ ತುಂಬಾ ಚಿಕ್ಕದು ವರ್ಣಿಸುವುದಕ್ಕೆ''

  ''ಸಂಬಂಧಗಳ ಬಗ್ಗೆ ನನಗೆ ನಂಬಿಕೆ ಹೊರಟು ಹೋಗಿತ್ತು. ಆಗ ಎಲ್ಲವನ್ನೂ ನನಗೆ ವಾಪಸ್ ಕಲ್ಪಿಸಿದ್ದು ಗೋವರ್ಧನ್. I'm lucky to have him as my husband'' ಅಂತ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ನಟಿ ಸುಧಾರಾಣಿ ಹೇಳಿದರು. [ನಟಿ ಸುಧಾರಾಣಿ ಮಾಡಿರುವ ಸಾಧನೆ ಬಗ್ಗೆ ನಿಮಗೆಷ್ಟು ಗೊತ್ತು?]

  ನಟಿ ಸುಧಾರಾಣಿ -ಗೋವರ್ಧನ್ ದಂಪತಿಯ ಫೋಟೋ ಕಲೆಕ್ಷನ್ ಇಲ್ಲಿದೆ. ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ಕಿಸಿ....

  English summary
  Kannada Actress Sudha Rani spoke about her husband Govardhan in Zee Kannada Channel's popular show Weekend With Ramesh season 2.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X