»   » ಕಿಚ್ಚ ಸುದೀಪ್ ತಂದೆಗೆ ಅಮಿತಾಬ್ ಬಚ್ಚನ್ ಹೇಳಿದ ಮುತ್ತಿನಂಥ ಮಾತು

ಕಿಚ್ಚ ಸುದೀಪ್ ತಂದೆಗೆ ಅಮಿತಾಬ್ ಬಚ್ಚನ್ ಹೇಳಿದ ಮುತ್ತಿನಂಥ ಮಾತು

Posted By:
Subscribe to Filmibeat Kannada

''You are too lucky to have a son like him. He is an extraordinary performer'' - ಹೀಗಂತ ಬಾಲಿವುಡ್ ನ ಬಿಗ್ ಬಿ ಅಮಿತಾಬ್ ಬಚ್ಚನ್ ಬೆಂಗಳೂರಿಗೆ ಬಂದಿದ್ದಾಗ, ಕಿಚ್ಚ ಸುದೀಪ್ ರವರ ತಂದೆ ಸಂಜೀವ್ ರವರನ್ನ ಭೇಟಿ ಮಾಡಿ ಹೇಳಿದ್ರಂತೆ.

ಇಂದು ಇಡೀ ಭಾರತ ಹಾಡಿ ಹೊಗಳುವ ಪ್ರಸಿದ್ಧ ನಟ ಆಗಿರುವ ಸುದೀಪ್ ನಟನೆ ಬಗ್ಗೆ ಒಂದ್ಕಾಲದಲ್ಲಿ ಅವರ ತಂದೆ ಸಂಜೀವ್ ರವರಿಗೆ ನಂಬಿಕೆ ಇರ್ಲಿಲ್ಲ ಅಂದ್ರೆ ನೀವು ನಂಬಲೇಬೇಕು.[ನಾಗತಿಹಳ್ಳಿ ಚಂದ್ರಶೇಖರ್ ರಿಜೆಕ್ಟ್ ಮಾಡಿದ ನಟ ಸುದೀಪ್.! ನಿಮ್ಗೊತ್ತಾ?]

ಕಿಚ್ಚ ಸುದೀಪ್ ಬಗ್ಗೆ ನಿಮಗೆ ಯಾರಿಗೂ ಗೊತ್ತಿಲ್ಲದ ಕೆಲ ವಿಷಯಗಳನ್ನ ಸುದೀಪ್ ಕುಟುಂಬದವರು 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಹೇಳಿದರು. ಅದನ್ನೆಲ್ಲಾ ಕೆಳಗಿರುವ ಸ್ಲೈಡ್ ಗಳಲ್ಲಿ ಓದಿರಿ....

ಸುದೀಪ್ ಗೆ ತಂದೆಯೇ ಸ್ಫೂರ್ತಿ!

''ನಮ್ಮ ತಂದೆ ಬಿಜಿನೆಸ್ ಶುರು ಮಾಡಿ, ಶಿವಮೊಗ್ಗದಿಂದ ಬೆಂಗಳೂರಿಗೆ ಬಂದರು. ಇಲ್ಲಿ ಸರೋವರ ಹೋಟೆಲ್ ಮಾಡಿದರು. ಅವರು ತುಂಬ ಕಷ್ಟ ಪಟ್ಟಿದ್ದಾರೆ. ನನಗೆ ಅವರೇ ಸ್ಫೂರ್ತಿ'' - ಸುದೀಪ್ [ಇಂದು 'ವೀಕೆಂಡ್ ವಿತ್ ರಮೇಶ್' ನಲ್ಲಿ ಸುದೀಪ್.! ಮಿಸ್ ಮಾಡಲ್ಲ ತಾನೆ?]

ತಂದೆಯಿಂದ ಕಲಿತದ್ದು?

''ಸಾಧಿಸಿ ತೋರಿಸಬೇಕು ಅಂತ ಡಿಸೈಡ್ ಮಾಡಿದ್ರೆ, ಯಾರೂ ಯಾರನ್ನೂ ನಿಲ್ಲಿಸಲು ಸಾಧ್ಯ ಇಲ್ಲ. ಎಲ್ಲದಕ್ಕೂ ಮನಸ್ಸು ಮಾಡಬೇಕು. ಇದು ನಾನು ನನ್ನ ತಂದೆಯನ್ನ ನೋಡಿ ಕಲಿತಿದ್ದು'' - ಸುದೀಪ್ [ವಿಡಿಯೋ ನೋಡಿ; ನಟ ದರ್ಶನ್ ಕೋಪದ ಬಗ್ಗೆ ಸುದೀಪ್ ಕಾಮೆಂಟ್.!]

ಸುದೀಪ್ ಕಿತಾಪತಿ ಜಾಸ್ತಿ!

''ತುಂಬ ತೀಟೆ ಜಾಸ್ತಿ. ಎಲ್ಲರಿಗೂ ಜಾಸ್ತಿ ತೊಂದರೆ ಕೊಡುತ್ತಿದ್ದ. ಚಿಕ್ಕಂದಿನಲ್ಲಿ ಬಹಳ ಕಿತಾಪತಿ ಜಾಸ್ತಿ ಇತ್ತು. ಹಾಗಾದ್ರೂ, ಒಂದು ದಿನವೂ ನಾನು ಅವನಿಗೆ ಒಂದು ಪೆಟ್ಟು ಕೊಟ್ಟಿದ್ದು ಇಲ್ಲ'' ಸಂಜೀವ್, ಸುದೀಪ್ ತಂದೆ ['ವೀಕೆಂಡ್ ವಿತ್ ರಮೇಶ್'ನಲ್ಲಿ ಕಿಚ್ಚ ಸುದೀಪ್; ವೀಕ್ಷಕರ ಅಭಿಪ್ರಾಯವೇನು?]

ಒರಟ!

''ತುಂಬಾ ತುಂಟ. ಗಾಯ ಆದ್ರೂ ಕೇರ್ ಮಾಡುತ್ತಿರಲಿಲ್ಲ. ತುಂಬಾ ಒರಟಾಗಿ ಬೆಳೆದಿದ್ದಾನೆ'' - ಸರೋಜಾ, ಸುದೀಪ್ ತಾಯಿ

ಸೂಪರ್ ಸ್ಟಾರ್ ಅಲ್ಲ!

''ನನಗೆ, ನನ್ನ ಮಕ್ಕಳಿಗೆ ತುಂಬಾ ಸಪೋರ್ಟ್ ಮಾಡಿದ್ದಾನೆ. ನಮ್ಮ ಮನೆಯಲ್ಲಿ ಅವನು ಸೂಪರ್ ಸ್ಟಾರ್ ಅಲ್ಲ. ದೀಪು ಆಗಿ ಇರ್ತಾನೆ'' - ಸುಜಾತಾ, ಸುದೀಪ್ ಅಕ್ಕ

ಸುದೀಪ್ ಗೆ ಹಠ

''ನಾನು ಮಾಡುವ ಕೆಲವು ಅಡುಗೆ ಅವನಿಗೆ ಇಷ್ಟ. ಕೇಕ್ ಮಾಡಿದರೆ ಅವನಿಗೆ ಹಾಗೇ ಕೊಡಬೇಕು, ಕಟ್ ಮಾಡಿ ಕೊಡುವ ಹಾಗಿಲ್ಲ. ಈಗಲೂ ಅವನಿಗೆ ಮಗು ತರಹ ಹಠ ಇದೆ'' - ಸುರೇಖ, ಸುದೀಪ್ ಅಕ್ಕ

ಮಗಳ ಹಾಗೆ ನೋಡಿಕೊಂಡಿದ್ದೀರಾ

''ನನ್ನನ್ನ ನಿಮ್ಮ ಮಗಳ ತರಹ ನೋಡಿಕೊಂಡಿದ್ದೀರಾ. ನಾವು ಕಷ್ಟದಲ್ಲಿ ಇದ್ದಾಗ ನಮಗೆ ಸಹಾಯ ಮಾಡಿದ್ದೀರಾ. ಅದಕ್ಕಿಂತ ಹೆಚ್ಚೇನು ಬೇಕು'' ಶ್ರೇಯಾ, ಸುದೀಪ್ ಅಕ್ಕನ ಮಗಳು

ರಾತ್ರಿ ಮಲಗುವುದೇ ಇಲ್ಲ!

''ತುಂಬಾ ಡೆಡಿಕೇಟೆಡ್. ನನಗೆ ಒಂದೊಂದು ಬಾರಿ ಅನುಮಾನ ಬರುತ್ತೆ. ಹಗಲು ಮಲಗುವುದಿಲ್ಲ. ರಾತ್ರಿ ಕೂಡ ಮಲಗುವುದಿಲ್ಲ. ರಾತ್ರಿ ಎಲ್ಲಾ ಕೆಲಸ ಮಾಡುತ್ತಿರುತ್ತಾನೆ'' - ಸಂಜೀವ್, ಸುದೀಪ್ ತಂದೆ

ಸುದೀಪ್ ಬೇಜಾರಾಗಿದ್ದು?

''ಹುಚ್ಚ' ಸಿನಿಮಾ ನೋಡಿದಾಗ, ನಾನು ಅವನಿಗೆ ಡೈರೆಕ್ಟಾಗಿ ಹೊಗಳಲಿಲ್ಲ. ಡೈರೆಕ್ಟರ್ ನಿನ್ನ ಬಳಿ ಚೆನ್ನಾಗಿ ಕೆಲಸ ತೆಗೆದುಕೊಂಡಿದ್ದಾರೆ ಅಂದೆ. ಅವನಿಗೆ ಅದು ಸ್ವಲ್ಪ ಬೇಜಾರಾಗಿತ್ತು'' - ಸಂಜೀವ್, ಸುದೀಪ್ ತಂದೆ

'ಹುಚ್ಚ' ಆಕ್ಟಿಂಗ್

''ಹುಚ್ಚ' ಸಿನಿಮಾದಲ್ಲಿ ಎಕ್ಸ್ ಟ್ರಾಡಿನರಿ ಪರ್ಫಾಮೆನ್ಸ್ ಕೊಟ್ಟ. ಎಷ್ಟೋ ಜನ ಐಪಿಎಸ್ ಆಫೀಸರ್ ಗಳು ಫೋನ್ ಮಾಡಿ ಹೇಳಿದ್ರು ಪರ್ಫಾಮೆನ್ಸ್ ಚೆನ್ನಾಗಿದೆ ಅಂತ'' - ಸಂಜೀವ್, ಸುದೀಪ್ ತಂದೆ

ಕಮಲ್ ಹಾಸನ್ ಹೊಗಳಿದ್ರು!

''ಸ್ವಾತಿಮುತ್ತು' ಚಿತ್ರದಲ್ಲಿನ ಅಭಿನಯ ನೋಡಿ ಕಮಲ್ ಹಾಸನ್ ಅಪ್ರೀಶಿಯೇಟ್ ಮಾಡಿದ್ರು'' - ಸಂಜೀವ್, ಸುದೀಪ್ ತಂದೆ

ಅಮಿತಾಬ್ ಬಚ್ಚನ್ ಹೇಳಿದ ಮುತ್ತಿನಂಥ ಮಾತು

''ಅಮಿತಾಬ್ ಬಚ್ಚನ್ ಬೆಂಗಳೂರಿಗೆ ಬಂದಿದ್ದಾಗ, ''You are too lucky to have a son like him. He is an extraordinary performer'' ಅಂತ ಹೇಳಿ ಬೆನ್ನು ತಟ್ಟಿದ್ದರು. ಆಗ ನನಗೆ ತುಂಬಾ ಖುಷಿ ಆಯ್ತು'' - ಸಂಜೀವ್, ಸುದೀಪ್ ತಂದೆ

ಕೋಟಿ ಸಂಪಾದನೆ ಮಾಡುವುದು ಬೇಡ

''ನನಗೆ ನೀನು ಕೋಟಿ ಕೋಟಿ ಸಂಪಾದನೆ ಮಾಡಿ ಕೊಡುವುದು ಬೇಕಾಗಿಲ್ಲ. ನಿನ್ನ ಒಳ್ಳೆತನ ಹಾಗೂ ಚಿತ್ರರಂಗದಲ್ಲಿ ಮಾಡುವ ಸಾಧನೆ ಮಾತ್ರ ಮುಖ್ಯ. ಅದೇ ನನ್ನ ಆಸೆ'' - ಸಂಜೀವ್, ಸುದೀಪ್ ತಂದೆ

ಅಪ್ಪನಿಗೆ ನಂಬಿಕೆ ಇರ್ಲಿಲ್ಲ!

''ಹುಚ್ಚ' ಸಿನಿಮಾ ಬರೋವರೆಗೂ ನನ್ನ ಮೇಲೆ ಅಪ್ಪನಿಗೆ ನಂಬಿಕೆ ಇರ್ಲಿಲ್ಲ. ಸಿನಿಮಾ ನೋಡಿದ್ಮೇಲೆ, ಅವರು ಕಣ್ಣೀರು ಹಾಕಿದರು'' - ಸುದೀಪ್

English summary
Kiccha Sudeep's father Sanjeev revealed in Zee Kannada channel's popular show Weekend With Ramesh season2, that Bollywood Actor Amitabh Bachchan had appreciated Kiccha Sudeep when he visited Bengaluru.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada