»   » ಸುದೀಪ್ ಜೀವನದ 'ಬೆಸ್ಟ್ ಫ್ರೆಂಡ್ಸ್' ಯಾರು ಅಂದ್ಕೊಂಡ್ರೀ.? 'ಇವರೇ'.!

ಸುದೀಪ್ ಜೀವನದ 'ಬೆಸ್ಟ್ ಫ್ರೆಂಡ್ಸ್' ಯಾರು ಅಂದ್ಕೊಂಡ್ರೀ.? 'ಇವರೇ'.!

Posted By:
Subscribe to Filmibeat Kannada

ಎದುರಿಗೆ ವಿಲನ್ ಇದ್ರೆ, ಹೊಡೆದಾಡುವುದು ಸುಲಭ. ಅದೆಂಥ ಸ್ಟಂಟ್ ಆಗಿರ್ಲಿ, ನೀರು ಕುಡಿದಷ್ಟೇ ಸಲೀಸಾಗಿ ಮಾಡಬಹುದು. ಆದ್ರೆ, ಇಲ್ಲದೇ ಇರುವುದನ್ನ ಊಹಿಸಿಕೊಂಡು ನಟಿಸುವುದು ಸಿಕ್ಕಾಪಟ್ಟೆ ಕಷ್ಟ. ಈ ಅನುಭವ ಕಿಚ್ಚ ಸುದೀಪ್ ರವರಿಗೆ 'ಈಗ' ಚಿತ್ರದಲ್ಲಾಗಿದೆ.

ತೆಲುಗಿನ ಸೂಪರ್ ಡ್ಯೂಪರ್ ಹಿಟ್ 'ಈಗ' ಚಿತ್ರದಲ್ಲಿ ನೊಣವನ್ನು ಕಲ್ಪನೆ ಮಾಡಿಕೊಂಡು ಕಿಚ್ಚ ಸುದೀಪ್ ಅದ್ಭುತ ಅಭಿನಯ ನೀಡಿದ್ದಾರೆ. ಇದೇ ಕಾರಣಕ್ಕೆ ಈ ಸಿನಿಮಾಗಾಗಿ ಸುದೀಪ್ ಹಲವಾರು ಪ್ರಶಸ್ತಿಗಳನ್ನ ಮುಡಿಗೇರಿಸಿಕೊಂಡಿದ್ದಾರೆ.[ಕಿಚ್ಚ ಸುದೀಪ್ ತಂದೆಗೆ ಅಮಿತಾಬ್ ಬಚ್ಚನ್ ಹೇಳಿದ ಮುತ್ತಿನಂಥ ಮಾತು]

ಅಷ್ಟು ಸಲೀಸಾಗಿ ಕಲ್ಪನೆ ಮಾಡಿಕೊಂಡು ಸುದೀಪ್ ನಟಿಸಲು ಕಾರಣ, ಅವರ ಬೆಸ್ಟ್ ಫ್ರೆಂಡ್ಸ್.! ಯಾರು ಆ ಬೆಸ್ಟ್ ಫ್ರೆಂಡ್ಸ್ ಅಂದ್ರೆ 'ಇಲಿಗಳು'.

ಹೌದು, ನಟನೆ ಕಲಿಯುವುದಕ್ಕೆ ಅಂತ ಸುದೀಪ್ ಮುಂಬೈಗೆ ಹೋಗಿದ್ದಾಗ, ಅವರು ಉಳಿದುಕೊಂಡಿದ್ದ ಸಣ್ಣ ರೂಮ್ ನಲ್ಲಿ 'ಇಲಿ'ಗಳ ಜೊತೆ ಫ್ರೆಂಡ್ ಶಿಪ್ ಮಾಡಿಕೊಂಡಿದ್ದರಂತೆ.[ನಾಗತಿಹಳ್ಳಿ ಚಂದ್ರಶೇಖರ್ ರಿಜೆಕ್ಟ್ ಮಾಡಿದ ನಟ ಸುದೀಪ್.! ನಿಮ್ಗೊತ್ತಾ?]

ಆ ಮಜವಾದ ಘಟನೆ ಕುರಿತು ಕಿಚ್ಚ ಸುದೀಪ್ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಹೇಳಿದರು. ಕೆಳಗಿರುವ ಸ್ಲೈಡ್ ಗಳಲ್ಲಿ ಓದಿ....

ನಿರ್ದೇಶಕ ಆಗ್ಬೇಕು ಅಂತ ಆಸೆ.!

''ಇಂಡಸ್ಟ್ರಿಗೆ ಎಂಟ್ರಿ ಕೊಟ್ಟಾಗ ನಾನು ಆಕ್ಟರ್ ಆಗ್ಬೇಕು ಅಂತ ಬರಲಿಲ್ಲ. ಡೈರೆಕ್ಟರ್ ಆಗ್ಬೇಕು ಅಂತ ಆಸೆ ಇತ್ತು. ಉಪೇಂದ್ರ ನನಗೆ ಪರಿಚಯ ಇದ್ರು. ಆ ಸಮಯಕ್ಕೆ ನನಗೆ ಭಗವಾನ್ ಸಿಕ್ಕಿದ್ರು. ಆಮೇಲೆ ನಾನು ಮುಂಬೈಗೆ ಹೋಗಿ ರೋಷನ್ ತನೇಜ ಸ್ಕೂಲ್ ಆಫ್ ಆಕ್ಟಿಂಗ್ ಗೆ ಸೇರಿಕೊಂಡೆ'' - ಸುದೀಪ್

ಹೆಮ್ಮೆ ಇದೆ!

''ಭಗವಾನ್ ಮೂಲಕ ನನಗೆ ಸುದೀಪ್ ಪರಿಚಯ ಆಗಿದ್ದು. ನನಗೆ ಇನ್ನೂ ನೆನಪಿದೆ, ಅವನಲ್ಲಿ ಕಲಿಯುವ ಆಸಕ್ತಿ ತುಂಬಾ ಇತ್ತು. ಇವತ್ತು ತುಂಬಾ ಹೆಮ್ಮೆ ಇದೆ ಸುದೀಪ್ ಇಷ್ಟೆಲ್ಲಾ ಸಾಧನೆ ಮಾಡಿರುವುದಕ್ಕೆ'' - ರೋಷನ್ ತನೇಜ

ಅಲ್ಲಿನ ರೂಮ್ ಚಿಕ್ಕದು!

''ಅಲ್ಲಿ ರೂಮ್ ತುಂಬಾ ಚಿಕ್ಕದು. ತುಂಬಾ ಕೆಟ್ಟದ್ದಾಗಿತ್ತು. ನನಗೆ ಇಲಿ ಸಹವಾಸ ಇರ್ಲಿಲ್ಲ. ರೂಮ್ ನಲ್ಲಿ ಇಲಿಗಳನ್ನ ನೋಡಿ ಗಾಬರಿ ಆಗ್ಬಿಟ್ಟಿತ್ತು. ಅಷ್ಟೊಂದು ಇಲಿಗಳು ಇತ್ತು. ರಾತ್ರಿ ಮಲಗುವುದಕ್ಕೆ ಭಯ ಆಗ್ತಿತ್ತು'' - ಸುದೀಪ್

ಶಾಕ್ ಆದ ಘಟನೆ

''ಒಂದು ದಿನ ಇಲಿ ಹಿಡಿದು ಆಚೆ ಹಾಕ್ಬಿಟ್ಟೆ. ತಕ್ಷಣ ಅದನ್ನ ಕಾಗೆ ಎತ್ತುಕೊಂಡು ಹೋಯ್ತು. ಆ ಘಟನೆ ನನಗೆ ಶಾಕ್ ಆಯ್ತು. ಅದರ ಬಗ್ಗೆ ನಾನು ಯೋಚನೆ ಮಾಡಿರ್ಲಿಲ್ಲ. ತುಂಬಾ ಡಿಸ್ಟರ್ಬ್ ಆಯ್ತು. ನಂತರ ಇಲಿಗೆ ಕೇಕ್ ಇಡಲು ಶುರು ಮಾಡಿದೆ'' - ಸುದೀಪ್

ಇಲಿ ಜೊತೆ ಫ್ರೆಂಡ್ ಶಿಪ್

''ಬರ್ತಾ ಬರ್ತಾ, ಇಲಿ ನನಗೆ ಫ್ರೆಂಡ್ಸ್ ಆಯ್ತು. ನನ್ನ ಜೊತೆ ಅದೂ ಕೂತ್ಕೊಂಡು ಊಟ ಮಾಡ್ತಿತ್ತು. ಇಲಿಗಳು ಹೊರಗಡೆ ಬರ್ಲಿಲ್ಲ ಅಂದ್ರೆ ಮಿಸ್ ಮಾಡ್ಕೊತ್ತಿದ್ದೆ'' - ಸುದೀಪ್

ನನ್ನ ಬೆಸ್ಟ್ ಫ್ರೆಂಡ್ಸ್.!

''Rats were the biggest and the best friends I have ever had in my whole life'' - ಸುದೀಪ್

ಕಲ್ಪನೆ ಮಾಡಿಕೊಂಡು ನಟಿಸುವುದು ಕಷ್ಟ!

''ಇಲ್ಲದ ನೊಣ ಕಲ್ಪನೆ ಮಾಡಿಕೊಂಡು ನಟಿಸುವುದು ಇದ್ಯಲ್ಲ ಅದೇ ಗ್ರೇಟ್'' - ಸುಧಾಕರ್ ಭಂಡಾರಿ

ನಟಿಸುವುದು ಸುಲಭ!

''ಇಲಿಗಳ ಜೊತೆಗೆ ಫ್ರೆಂಡ್ ಶಿಪ್ ಮಾಡಿದ್ದೀರಾ ಅಂದ್ಮೇಲೆ, ನೊಣವನ್ನು ಕಲ್ಪನೆ ಮಾಡಿಕೊಂಡು ನಟಿಸುವುದು ಕಷ್ಟ ಅಲ್ಲ'' - ರಮೇಶ್ ಅರವಿಂದ್

English summary
Kiccha Sudeep's friendship with rats was revealed in Zee Kannada channel's popular show Weekend With Ramesh season2.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada