For Quick Alerts
  ALLOW NOTIFICATIONS  
  For Daily Alerts

  ವೀಕೆಂಡ್ ಸಾಧಕರ ಸೀಟಿನಲ್ಲಿ ಈ ವಾರ ಕನ್ನಡದ ಖ್ಯಾತ ನಟ

  |
  Weekend With Ramesh Season 4: ವೀಕೆಂಡ್ ವಿತ್ ಕಾರ್ಯಕ್ರಮದ ಈ ವಾರದ ವೀಕೆಂಡ್‍ನ ಸಾಧಕರಾರು ಗೊತ್ತಾ?

  ಕಳೆದ ವಾರ ಮಂಡ್ಯ ನೂತನ ಸಂಸದೆ ನಟಿ ಸುಮಲತಾ ಮತ್ತು ಪ್ರಖ್ಯಾತ ನಿರ್ದೇಶಕ ಟಿ.ಎಸ್ ನಾಗಾಭರಣ ಅವರು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಸಾಧಕರಾಗಿ ಭಾಗವಹಿಸಿದ್ದರು. ಇವರಿಬ್ಬರ ನಂತರ ಮುಂದಿನ ವಾರ ಯಾರು ಬರಬಹುದು ಎಂಬ ನಿರೀಕ್ಷೆಗೆ ಜೀ ಕನ್ನಡ ಉತ್ತರ ಕೊಟ್ಟಿದೆ.

  ಈ ವಾರದ ಸಾಧಕರ ಭಾವಚಿತ್ರವನ್ನ ಬಿಡುಗಡೆ ಮಾಡಿರುವ ಜೀ ಕನ್ನಡ ವಾಹಿನಿ, ಮುಖವನ್ನ ಬ್ಲರ್ ಮಾಡಿ 'ಈ ವಾರದ ಸಾಧಕ ಯಾರೆಂದು ಗುರುತಿಸಿ' ಎಂದು ಕೇಳಿದ್ದಾರೆ.

  ಮಂಡ್ಯ ಜನರಿಗಾಗಿ ರಾಕ್ ಲೈನ್ ವೆಂಕಟೇಶ್ ಕೈಗೊಂಡ ಹೊಸ ನಿರ್ಧಾರ

  ಸಿನಿಮಾ ಆಸಕ್ತಿಯಿರುವ ಬಹುತೇಕರಿಗೆ ಆ ಭಾವಚಿತ್ರ ಯಾರದ್ದು ಗೊತ್ತಾಗಿದೆ. ಹೌದು, ಕಾಮಿಡಿ ಕಿಂಗ್ ಶರಣ್ ಅವರು ಈ ವಾರ ಸಾಧಕರ ಸೀಟಿನಲ್ಲಿ ಕುಳಿತುಕೊಳ್ಳುತ್ತಿದ್ದಾರೆ.

  ಈಗಾಗಲೇ ಶರಣ್ ಅವರ ಎಪಿಸೋಡ್ ರೆಕಾರ್ಡ್ ಮುಗಿದಿದೆ. ಶರಣ್ ಸಂಚಿಕೆಯ ರೆಕಾರ್ಡಿಂಗ್‌ ದಿನದ ಕೆಲವು ಫೋಟೋಗಳು ಕೂಡ ಬಹಿರಂಗವಾಗಿತ್ತು. ಶರಣ್ ಮಕ್ಕಳು, ಸಹೋದರಿ ಶ್ರುತಿ ಮಗಳು ಸೇರಿದಂತೆ ಹಲವರು ಈ ಶೋನಲ್ಲಿ ಭಾಗವಹಿಸಿದ್ದರು.

  ಚೆನ್ನಮ್ಮ ಸರ್ಕಲ್ ನಲ್ಲಿ 'ಆಕಸ್ಮಿಕ' ಹಾಡನ್ನು ಶೂಟ್ ಮಾಡಿದ್ದೇ ರೋಚಕ ಕಥೆ!

  ಸದ್ಯಕ್ಕೆ ಶರಣ್ ಅವರ ಸಂಚಿಕೆ ಶನಿವಾರ ಒಂದೇ ದಿನ ಇರುತ್ತಾ ಅಥವಾ ಭಾನುವಾರವೂ ಮುಂದುವರಿಯುತ್ತಾ ಎಂಬುದರ ಬಗ್ಗೆ ಸುಳಿವು ನೀಡಿಲ್ಲ. ಒಂದು ವೇಳೆ ಶನಿವಾರ ಮಾತ್ರ ಪ್ರಸಾರವಾಗುವುದಾದರೇ, ಭಾನುವಾರದ ಅತಿಥಿ ಯಾರು ಎಂಬುದು ಕುತೂಹಲ.

  English summary
  Weekend with ramesh 4: Kannada actor sharan episode will telecast on this week. zee kannada shared sharan's photo with audience.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X