twitter
    For Quick Alerts
    ALLOW NOTIFICATIONS  
    For Daily Alerts

    ಜನಮನ ಸೂರೆಗೊಂಡ 'ವೀಕೆಂಡ್ ವಿತ್ ರಮೇಶ್'

    By Rajendra
    |

    ಕಿರುತೆರೆ ವಾಹಿನಿಗಳಲ್ಲಿ ಇತ್ತೀಚೆಗೆ ರಿಯಾಲಿಟಿ ಶೋಗಳದ್ದೇ ಕಾರುಬಾರು, ಹೊಸ ಹೊಸ ರೀತಿಯ ರಿಯಾಲಿಟಿ ಶೋಗಳನ್ನು ಆರಂಭಿಸಿ ಛಾನಲ್ ಗಳು ತನ್ನ ಟಿ.ಆರ್.ಪಿ.ಯನ್ನು ಸ್ಪರ್ಧಾತ್ಮಕವಾಗಿ ಹೆಚ್ಚಿಸಿಕೊಳ್ಳುತ್ತಿವೆ.

    ಅದರಲ್ಲೂ ಜೀ ಕನ್ನಡವಾಹಿನಿ ತಾನು ವೀಕ್ಷಕರಿಗೆ ತೋರಿಸುವ ಪ್ರತಿಯೊಂದು ಕಾರ್ಯಕ್ರಮವೂ ವಿಭಿನ್ನವಾಗಿ ಮೂಡಿಬರಲೆಂದು ನಿರಂತರವಾಗಿ ಪ್ರಯತ್ನ ನಡೆಸುತ್ತಿದೆ. ಇಂಥ ಪ್ರಯತ್ನಗಳಲ್ಲೊಂದು 'ವೀಕೆಂಡ್ ವಿತ್ ರಮೇಶ್'.

    ಕಳೆದ ಆಗಸ್ಟ್ 2 ರಿಂದ ಆರಂಭವಾದ ಈ ರಿಯಾಲಿಟಿ ಶೋನಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಕರೆತಂದು ಅವರು ನಡೆದು ಬಂದ ಹಾದಿಯುನ್ನೊಮ್ಮೆ ಹಿಂದಿರುಗಿ ನೋಡುವಂತೆ ಮಾಡುವುದು. ಅವರ ಹಾದಿಯಲ್ಲಿ ಜೊತೆಗಿದ್ದವರೆನ್ನೆಲ್ಲ ಸಂಪರ್ಕಿಸಿ ಮಾಹಿತಿ ಸಂಗ್ರಹಿಸಿ ತೋರಿಸುವುದು ಈ ಕಾರ್ಯಕ್ರಮದ ಉದ್ದೇಶ.

    ರಮೇಶ್ ಅರವಿಂದ್ ಅಚ್ಚುಕಟ್ಟಾದ ನಿರೂಪಣೆ

    ರಮೇಶ್ ಅರವಿಂದ್ ಅಚ್ಚುಕಟ್ಟಾದ ನಿರೂಪಣೆ

    ಈ ಕಾರ್ಯಕ್ರಮವನ್ನು ನಟ ರಮೇಶ್ ಅರವಿಂದ ಅವರು ಅಚ್ಚುಕಟ್ಟಾಗಿ ನಿರೂಪಿಸಿಕೊಡುತ್ತಿದ್ದು ಜೀ ಕನ್ನಡದಲ್ಲಿ ಪ್ರತಿ ಶನಿವಾರ ಹಾಗೂ ಭಾನುವಾರ ರಾತ್ರಿ 9 ಗಂಟೆಯಿಂದ 10 ಗಂಟೆಯವರೆಗೆ ಪ್ರಸಾರವಾಗುತ್ತಿದೆ.

    ಇದುವರೆಗೂ ಹಾಟ್ ಸೀಟ್ ಗೆ ಬಂದ ಸಾಧಕರು

    ಇದುವರೆಗೂ ಹಾಟ್ ಸೀಟ್ ಗೆ ಬಂದ ಸಾಧಕರು

    ನಟ ಪುನೀತ್ ರಾಜ್ ಕುಮಾರ್ ರಿಂದ ಆರಂಭಗೊಂಡ ಈ ಕಾರ್ಯಕ್ರಮದಲ್ಲಿ ರವಿಚಂದ್ರನ್, ಯಶ್, ದ್ವಾರಕೀಶ್ ಸೇರಿದಂತೆ ಚಿತ್ರರಂಗದ ಹಲವಾರು ಗಣ್ಯರು ಅಲ್ಲದೆ ಪತ್ರಕರ್ತರಾದ ರಂಗನಾಥ್, ಒಬ್ಬ ಸಾಮಾನ್ಯ ವ್ಯಕ್ತಿ ಹಾಗೂ ಅಂಗವಿಕಲನಾದ ಅಶ್ವಿನ್ ರಂಥವರೂ ಬಂದು ಹೋಗಿದ್ದಾರೆ.

    ಶೀಘ್ರದಲ್ಲೇ ಬರಲಿದ್ದಾರೆ ಶಿವರಾಜ್ ಕುಮಾರ್

    ಶೀಘ್ರದಲ್ಲೇ ಬರಲಿದ್ದಾರೆ ಶಿವರಾಜ್ ಕುಮಾರ್

    ಕಳೆದ ಭಾನುವಾರ ನಟ ಶಿವರಾಜ್ ಕುಮಾರ್ ಅವರ ಕಾರ್ಯಕ್ರಮದ ಶೂಟಿಂಗ್ ಅಬ್ಬಾಯಿನಾಯ್ಡು ಸ್ಟುಡಿಯೋದಲ್ಲಿ ನಡೆಯುತ್ತಿತ್ತು. ಚಿತ್ರೀಕರಣ ವೀಕ್ಷಣೆಗೆ ಬಂದಿದ್ದ ಪತ್ರಕರ್ತರೊಂದಿಗೆ ಮಾತನಾಡಿದ ಜೀ ಕನ್ನಡ ಕಾರ್ಯಕ್ರಮ ಮುಖ್ಯಸ್ಥ ರಾಘವೇಂದ್ರ ಹುಣಸೂರು, "ಸೆಲಬ್ರಟಿಗಳ ಸಾಧನೆಯ ಬಗ್ಗೆ ಹಲವಾರು ಮಾಧ್ಯಮಗಳಲ್ಲಿ ಬಂದಿರುತ್ತೆ. ಆದರೆ ನಾವೇನು ಮಾಡುತ್ತೇವೆ ಎಂಬ ಪ್ರಶ್ನೆ ಬಂದಾಗ ಸಾಧಕರ ಈಗಿರುವ ಸ್ಥಿತಿಯನ್ನು ಬಿಟ್ಟು ಒಬ್ಬ ಸಾಮಾನ್ಯ ಮನುಷ್ಯನನ್ನಾಗಿ ತೋರಿಸುವ ಪ್ರಯತ್ನ ಮಾಡುತ್ತೇವೆ..."

    ಪ್ರತಿ ಸಾಧಕನ ಕಥೆ ಕೇಳುತ್ತ ಹೋದಾಗ...

    ಪ್ರತಿ ಸಾಧಕನ ಕಥೆ ಕೇಳುತ್ತ ಹೋದಾಗ...

    "ಪ್ರತಿ ಸಾಧಕನ ಕಥೆ ಕೇಳುತ್ತ ಹೋದಾಗ ಅವರ ಹಿಂದಿನ ಹಾದಿಯಲ್ಲಿ ಒಬ್ಬ ಸಾಮಾನ್ಯ ಮನುಷ್ಯ ಕಾಣಿಸುತ್ತಾನೆ. ನಾವು ಆತನನ್ನು ತೋರಿಸುತ್ತೇವೆ. ಸಾಧಕನು ಹುಟ್ಟಿದ ಕ್ಷಣದಿಂದ ಸಾಧಕರ ಸೀಟಿನಲ್ಲಿ ಕುಳಿತಿರುವವರೆಗೆ ಅವರ ಹಾದಿಯನ್ನು ತೆರೆದಿಡುವ ಪ್ರಯತ್ನ ಈ ಕಾರ್ಯಕ್ರಮದ್ದು" ಎಂದು ಹೇಳಿಕೊಂಡರು.

    ಈ ಶೋನ ಸಕ್ಸಸ್ ಗೆ ಕಾರಣ ರೀಸರ್ಚ್ ತಂಡ

    ಈ ಶೋನ ಸಕ್ಸಸ್ ಗೆ ಕಾರಣ ರೀಸರ್ಚ್ ತಂಡ

    ತದನಂತರ ಕಾರ್ಯಕ್ರಮದ ನಿರೂಪಕ ರಮೇಶ್ ಅರವಿಂದ್ ಮಾತನಾಡಿ, "ಈ ಶೋನ ಸಕ್ಸಸ್ ಗೆ ಮುಖ್ಯಕಾರಣ ಇದರ ರೀಸರ್ಚ್ ತಂಡ. ಸುಮಾರು 80 ಜನರ ಈ ತಂಡ ಆ ವ್ಯಕ್ತಿಗೆ ಸಂಬಂಧಪಟ್ಟವರನ್ನೆಲ್ಲ ಸಂಪರ್ಕಿಸಿ ಮಾಹಿತಿ ಸಂಗ್ರಹಿಸುತ್ತಾರೆ. ಅಲ್ಲದೆ ಅವರನ್ನು ಕರೆದುಕೊಂಡು ಬರುತ್ತಾರೆ. ಹಾಗಾಗಿ ನನಗೆ ಈ ಕಾರ್ಯಕ್ರಮ ನಡೆಸುವುದು ತುಂಬಾ ಸುಲಭ..."

    ಅಶ್ವಿನ್ ಸಂಚಿಕೆ ನನ್ನ ಹೃದಯವನ್ನು ಕಲಕಿತು

    ಅಶ್ವಿನ್ ಸಂಚಿಕೆ ನನ್ನ ಹೃದಯವನ್ನು ಕಲಕಿತು

    "ಪ್ರತಿ ಶೋ ನನಗೆ ವಿಶೇಷವಾಗಿತ್ತು. ಆದರೆ ಅಶ್ವಿನ್ ಸಂಚಿಕೆ ಮಾತ್ರ ನನ್ನ ಹೃದಯವನ್ನು ಕಲಕಿತು. ಕರ್ನಾಟಕದ ಮೂಲೆ ಮೂಲೆಗಳಲ್ಲೂ ಈ ತರಹದ ಸಾಧಕರಿದ್ದಾರೆ. ಅವರನ್ನು ಹುಡುಕಿ ತಂದು ಕೂರಿಸಿ ಎಂದು ವಾಹಿನಿಯವರಿಗೆ ಹೇಳಿದ್ದೇನೆ ಎಂದು ಹೇಳಿದರು.

    ಸಾಧಕರ ಸಹಕಾರ ಬಹುಮುಖ್ಯ: ರಾಘವೇಂದ್ರ

    ಸಾಧಕರ ಸಹಕಾರ ಬಹುಮುಖ್ಯ: ರಾಘವೇಂದ್ರ

    ಕೊನೆಯಲ್ಲಿ ಮಾತನಾಡಿದ ರಾಘವೇಂದ್ರ, "ಈ ಕಾರ್ಯಕ್ರಮ ಯಶಸ್ವಿಯಾಗಲು ಸಾಧಕರ ಸಹಕಾರ ಬಹುಮುಖ್ಯ. ಆರಂಭದಲ್ಲಿ ಇಲ್ಲಿಗೆ ಬರಲು ಹಿಂದೆ ಮುಂದೆ ನೋಡಿದವರು ಕಾರ್ಯಕ್ರಮ ಮುಗಿದ ಮೇಲೆ ನಮ್ಮನ್ನು ಮನಃಪೂರ್ವಕವಾಗಿ ಹೊಗಳಿದ್ದಾರೆ.

    ಪ್ರಕಾಶ್ ರೈ, ಅಂಬರೀಶ್, ಲಕ್ಷ್ಮಿ ಬರಲಿದ್ದಾರೆ

    ಪ್ರಕಾಶ್ ರೈ, ಅಂಬರೀಶ್, ಲಕ್ಷ್ಮಿ ಬರಲಿದ್ದಾರೆ

    ಮುಂದಿನ ಸಂಚಿಕೆಗಳಲ್ಲಿ ಅಂಬರೀಶ್, ಪ್ರಕಾಶ್ ರೈ, ಲಕ್ಷ್ಮಿ ಅವರೂ ಕೂಡ ಬರಲಿದ್ದಾರೆ. ಆದರೆ 24 ಸಂಚಿಕೆಗಳಲ್ಲು ಈ ಶೋ ಮುಗಿಸಬೇಕಾಗಿದೆ. ಮತ್ತು ಹೊಸಹೊಸ ಮಾಹಿತಿಗಳೊಂದಿಗೆ ಸೀಜನ್-2 ಆರಂಭಿಸುತ್ತೇವೆ. ಅದರಲ್ಲಿ ವೀಕ್ಷಕರಿಂದ ಆಯ್ಕೆಯಾದ ಸಾಧಕರನ್ನೂ ಕೂಡ ಕರೆಸುತ್ತೇವೆ ಎಂದರು.

    ಕೊನೇ ಸಂಚಿಕೆಯಲ್ಲಿ ಧರ್ಮಸ್ಥಳದ ವೀರೇಂದ್ರ ಹೆಗ್ಗಡೆ

    ಕೊನೇ ಸಂಚಿಕೆಯಲ್ಲಿ ಧರ್ಮಸ್ಥಳದ ವೀರೇಂದ್ರ ಹೆಗ್ಗಡೆ

    ಮುಖ್ಯಮಂತ್ರಿ ಸಿದ್ದರಾಮಯ್ಯ, ದರ್ಶನ್, ರಮ್ಯಾ ಅವರ ಹೆಸರೂ ಕೂಡ ಲಿಸ್ಟ್ ನಲ್ಲಿತ್ತು. ಆದರೆ ಕಾರಣಾಂತರಗಳಿಂದ ಅವರು ಬರಲಾಗುತ್ತಿಲ್ಲ. ಕೊನೇ ಸಂಚಿಕೆಯಲ್ಲಿ ಧರ್ಮಸ್ಥಳದ ವೀರೇಂದ್ರ ಹೆಗ್ಗಡೆಯವರು ಬಂದು ಮಾತನಾಡಲಿದ್ದಾರೆ ಎಂಬುದಾಗಿಯೂ ರಾಘವೇಂದ್ರ ಹೇಳಿದರು.

    English summary
    Zee Kannada's popular TV show "Weekend With Ramesh" wins viewers heart. The show hosted by the popular actor director Ramesh Aravind. The first season will have 24 episodes said the programme head Raghavendra Hunsur.
    Wednesday, September 24, 2014, 9:43
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X