For Quick Alerts
  ALLOW NOTIFICATIONS  
  For Daily Alerts

  ಕುಡಿದ ಮತ್ತಿನಲ್ಲಿ ಸುದೀಪ್ ಕೆನ್ನೆಗೆ ರಪ-ರಪ ಅಂತ ಬಾರಿಸಿದವರಾರು?

  By Suneetha
  |

  ಕಿಚ್ಚ ಸುದೀಪ್ ಅವರು ಕನ್ನಡ ಚಿತ್ರರಂಗದಲ್ಲಿ ಗಟ್ಟಿಯಾಗಿ ನೆಲೆವೂರಲು ಪ್ರಯತ್ನಿಸುತ್ತಿರುವ ಸಂದರ್ಭದಲ್ಲಿ ಅನೇಕ ಕಷ್ಟ-ನಷ್ಟಗಳನ್ನು ಎದುರಿಸಿದ್ದಾರೆ. ಮಾತ್ರವಲ್ಲದೇ ಅದಕ್ಕಾಗಿ ಎಷ್ಟೋ ದಿನಗಳು ನಿದ್ದೆಗೆಟ್ಟು ಕೆಲಸ ಮಾಡಿದ್ದಾರೆ.

  ಆವಾಗ ಅವರಿಗೆ ಇಬ್ಬರು ಸ್ನೇಹಿತರು ತುಂಬಾನೇ ಸಹಾಯ ಮಾಡಿದ್ದಾರೆ. ಸದ್ಯಕ್ಕೆ ಅವರೂ ಕೂಡ ಕನ್ನಡ ಚಿತ್ರರಂಗದಲ್ಲಿ ಸ್ವಲ್ಪ ಮಟ್ಟಿಗೆ ಖ್ಯಾತಿ ಗಳಿಸಿದ್ದು, ಅನೇಕ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಮಾತ್ರವಲ್ಲದೇ, ಸುದೀಪ್ ಮತ್ತು ಅವರು ಈಗಲೂ ಕೂಡ ಕುಚಿಕು ಗೆಳೆಯರಾಗಿಯೇ ಇದ್ದಾರೆ.[ಕಿಚ್ಚ ಸುದೀಪ್ ಬಗ್ಗೆ ಕನ್ನಡ ನಿರ್ದೇಶಕರ ಉವಾಚ]

  ಇನ್ನು ಕಿಚ್ಚ ಸುದೀಪ್ ಅವರು ಆಗಿನ ಕಾಲದಲ್ಲಿ ಮಾಡಿದ ಮೋಜು-ಮಸ್ತಿ ಮತ್ತು ಈಗಲೂ ಶೂಟಿಂಗ್ ಸೆಟ್ ನಲ್ಲಿ ಇವರೂ ಮೂರು ಜನ ಕುಚಿಕು ಗೆಳೆಯರು ಸೇರಿ ಮಾಡುವ ಗೌಜು-ಗಮ್ಮತ್ತುಗಳನ್ನು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಹಂಚಿಕೊಳ್ಳುವ ಮೂಲಕ ಮತ್ತೆ ಹಳೇ ನೆನಪಿಗೆ ಜಾರಿದ್ದಾರೆ.[ಮೇನಕಾ ಚಿತ್ರಮಂದಿರದಲ್ಲಿ ಸುದೀಪ್ ಗಳಗಳನೇ ಅತ್ತಿದ್ದೇಕೆ?]

  ಅಂದಹಾಗೆ ಯಾರಿಗೆ ಇಷ್ಟೆಲ್ಲಾ ಬಿಲ್ಡಪ್ ಮತ್ತು ಅಷ್ಟಕ್ಕೂ ಅವರು ಯಾರು ಎಂಬ ಕುತೂಹಲ ನಿಮಗೂ ಇದ್ಯಾ ಹಾಗಿದ್ದರೆ ಕೆಳಗಿನ ಸ್ಲೈಡ್ಸ್ ಕ್ಲಿಕ್ ಮಾಡಿ...

  ಅರುಣ್ ಸಾಗರ್ ಮತ್ತು ಧರ್ಮೇಂದ್ರ

  ಅರುಣ್ ಸಾಗರ್ ಮತ್ತು ಧರ್ಮೇಂದ್ರ

  ಹೌದು ಚಿತ್ರರಂಗಕ್ಕೆ ಕಾಲಿಟ್ಟಾಗಿನಿಂದ ಇಲ್ಲಿಯವರೆಗೂ ಕಿಚ್ಚ ಸುದೀಪ್ ಅವರ ಆತ್ಮೀಯ ಗೆಳೆಯರಾಗಿರುವ ನಟ ಅರುಣ್ ಸಾಗರ್ ಮತ್ತು ನಟ ಧರ್ಮೇಂದ್ರ ಅವರು ಪ್ರತಿ ಕ್ಷಣ ಕೂಡ ಸುದೀಪ್ ಅವರ ಜೊತೆ ಹೆಜ್ಜೆ ಹಾಕಿದ್ದಾರೆ.[ಕಡೆಗೂ 'ವೀಕೆಂಡ್ ವಿತ್ ರಮೇಶ್-2' ನಲ್ಲಿ 'ಇವರನ್ನೆಲ್ಲ' ನೋಡಲೇ ಇಲ್ಲ.!]

  ಸುದೀಪ್ ನಂಬಿಕೆಗೆ ಅರ್ಹರಾಗಿರುವ ಧರ್ಮೇಂದ್ರ

  ಸುದೀಪ್ ನಂಬಿಕೆಗೆ ಅರ್ಹರಾಗಿರುವ ಧರ್ಮೇಂದ್ರ

  ಸುದೀಪ್ ಅವರ ಅತ್ಯಂತ ನಂಬಿಕಸ್ಥ ಖಾಸ ದೋಸ್ತ್ ಅಂದರೆ ಅದು ನಟ ಧರ್ಮೇಂದ್ರ ಅವರು. ಧರ್ಮೇಂದ್ರ ಅವರನ್ನು ಸುದೀಪ್ ಅವರು ತುಂಬಾನೇ ನಂಬುತ್ತಾರೆ. ಮಾತ್ರವಲ್ಲದೇ ಧರ್ಮೇಂದ್ರ ಅಂದ್ರೆ ಸುದೀಪ್ ಅವರಿಗೆ ತುಂಬಾ ಇಷ್ಟವಂತೆ.

  ನಂಬಿಕಸ್ಥ ಧರ್ಮೇಂದ್ರ

  ನಂಬಿಕಸ್ಥ ಧರ್ಮೇಂದ್ರ

  "ನಾನು ನನ್ನ ಜೀವನದಲ್ಲಿ ಕಂಡ ಅತ್ಯಂತ ಮುಗ್ದ, ಅತ್ಯಂತ ನಂಬಿಕೆಗೆ ಅರ್ಹ ವ್ಯಕ್ತಿ, ಬಹಳ ನಂಬುವ ವ್ಯಕ್ತಿ ಅಂದರೆ ಅದು ಧರ್ಮೇಂದ್ರ, ಯಾಕೆಂದರೆ ಅವನು ತುಂಬಾ ಸತ್ಯವಂತ ಹಾಗೂ ತುಂಬಾ ಒಳ್ಳೆ ಜನ. ಅವನಲ್ಲಿ ತುಂಬಾ ಮನುಷ್ಯತ್ವ ಇದೆ. ಹಾಗೂ ಬೇರೆಯವರ ಮನಸ್ಸಿಗೆ ನೋವು ಮಾಡಲ್ಲ ಅವನು. ಯಾರಾದ್ರೂ ಬಂದು ಸರ್ ಧರ್ಮೇಂದ್ರ ಅವರು ನಿಮಗೆ ಹೀಗೆ ಹೇಳಿದ್ರು, ಹಾಗೆ ಹೇಳಿದ್ರು, ಅಂದ್ರೆ ನಾನು ಖಂಡಿತ ನಂಬೋದಿಲ್ಲ", ಎನ್ನುತ್ತಾರೆ ಸುದೀಪ್ ಅವರು.

  'ಆ'ದಿನಗಳ ಬಗ್ಗೆ ಸುದೀಪ್ ಮಾತು

  'ಆ'ದಿನಗಳ ಬಗ್ಗೆ ಸುದೀಪ್ ಮಾತು

  'ಹುಚ್ಚ' ಚಿತ್ರದ ಶೂಟಿಂಗ್ ಆಗುತ್ತಿದ್ದ ಸಂದರ್ಭದಲ್ಲಿ ನನಗೆ ಆಕ್ಸಿಡೆಂಟ್ ಆಗಿ ಕಾಲು ಮುರಿದುಕೊಂಡಿದ್ದೆ ಆವಾಗ ನನಗೆ ಆ ಕಡೆ, ಈ ಕಡೆ ಓಡಾಡಲು ಆಗುತ್ತಿರಲಿಲ್ಲ. ಆವಾಗ ಧರ್ಮೇಂದ್ರ ನನಗೆ ದಿನಾ ಬ್ಯಾಂಡೇಜ್ ಮಾಡುತ್ತಿದ್ದ, ನನ್ನನ್ನು ಎಲ್ಲಾ ಕಡೆ ಎತ್ಕೊಂಡು ಓಡಾಡಿ ತುಂಬಾ ಆರೈಕೆ ಮಾಡಿದ. ನಾನು ಅವನು ಆವಾಗ ಒಂದೇ ರೂಮ್ ನಲ್ಲಿ ಇದ್ವಿ. ನನ್ನನ್ನು ತುಂಬಾ ಚೆನ್ನಾಗಿ ನೋಡಿಕೊಂಡ, ನನ್ನ ಪ್ರತೀ ಕೆಲಸದಲ್ಲಿ ಕೈ ಜೋಡಿಸಿದ ಗೆಳೆಯ ಧರ್ಮೇಂದ್ರ '- ಸುದೀಪ್.

  ಅರುಣ್ ಸಾಗರ್ ಬಗ್ಗೆ

  ಅರುಣ್ ಸಾಗರ್ ಬಗ್ಗೆ

  'ನನ್ನ ಶೂಟಿಂಗ್ ಕೆಲಸಗಳಲ್ಲಿ ಹಾಗೂ ಸಿನಿಮಾದ ಎಲ್ಲಾ ಕೆಲಸಗಳಲ್ಲಿ ಅರುಣ್ ಸಾಗರ್ ತುಂಬಾ ಸಹಾಯ ಮಾಡಿದ್ದ. ನಾನು ಎಲ್ಲೇ ಹೊರಗಡೇ ಹೋದ್ರು ನನ್ನ ಜೊತೆ ಬರ್ತಾ ಇದ್ದ'. ಸುದೀಪ್

  ಸುದೀಪ್ ಕೆನ್ನೆಗೆ ಬಾರಿಸಿದ ಅರುಣ್

  ಸುದೀಪ್ ಕೆನ್ನೆಗೆ ಬಾರಿಸಿದ ಅರುಣ್

  'ಒಂದಿನಾ ಕುಡಿದ ಅಮಲಿನಲ್ಲಿ ಮಾತಾಡ್ತಾ-ಮಾತಾಡ್ತಾ ನನ್ನ ಕೆನ್ನೆಗೆ ರಪ-ರಪ ಅಂತ ಬಾರಿಸಿದ್ದ. ಎರಡು ದಿನ ಕಳೆದ ಮೇಲೆ ತಲೆಯಿಂದ ಕುಡಿದ ನಶೆ ಇಳಿದ ಮೇಲೆ ನನಗೆ ಹೊಡೆದಿದ್ದನ್ನು ನೆನೆಸಿಕೊಂಡು ಜೋರಾಗಿ ಗೋಳೋ ಅಂತ ಅತ್ತಿದ್ದ. ಅವನ ಪರಿಸ್ಥಿತಿ ನೋಡಿ ನನಗೆ ನಗಬೇಕೋ ಅಳಬೇಕೋ ಅಂತ ಕನ್ ಫ್ಯೂಶನ್ ಆಗಿತ್ತು. - ಸುದೀಪ್

  ಧರ್ಮೇಂದ್ರರನ್ನು ಗೋಳಾಡಿಸುವ ಸುದೀಪ್

  ಧರ್ಮೇಂದ್ರರನ್ನು ಗೋಳಾಡಿಸುವ ಸುದೀಪ್

  'ಸೆಟ್ ನಲ್ಲಿ ಧರ್ಮೇಂದ್ರನನ್ನು ಗೋಳಾಡಿಸೋದು ಅಂದ್ರೆ ನನಗೆ ಮತ್ತು ಅರುಣ್ ಸಾಗರ್ ಗೆ ತುಂಬಾ ಇಷ್ಟ. ಅವನು ಶಾಟ್ ಗೆ ರೆಡಿಯಾಗಿ ಬರೋವಾಗ ನಾವು ಅವನಿಗೆ 'ರಾಜ ರಾಜೇಂದ್ರ, ಸ್ಲೋ ಮೋಷನ್ ಧರ್ಮೇಂದ್ರ, ಧರ್ಮೇಂದ್ರ ಮಹಾ ಪ್ರಭುಗಳಿಗೆ, ಬಹುಪರಾಕ್' ಅಂತ ಘೋಷಣೆ ಕೂಗಿ ಬರಮಾಡಿಕೊಳ್ಳುತ್ತೇವೆ. - ಸುದೀಪ್

  ಸುದೀಪ್ ಅಂದ್ರೆ ತುಂಬಾ ಇಷ್ಟ-ಧರ್ಮೇಂದ್ರ

  ಸುದೀಪ್ ಅಂದ್ರೆ ತುಂಬಾ ಇಷ್ಟ-ಧರ್ಮೇಂದ್ರ

  'ನನ್ನನ್ನು ಇಡೀ ಇಂಡಸ್ಟ್ರಿಯಲ್ಲಿ ತುಂಬಾ ಗೋಳಾಡಿಸೋದು ಅಂದ್ರೆ ಅದು ಸುದೀಪ್ ಮಾತ್ರ. ನಾನು ಈಗಲೂ ಸುದೀಪ್ ಅವರನ್ನು ಹೋಗೋ ಬಾರೋ ಅನ್ನಲು ಮುಖ್ಯ ಕಾರಣ ಅಂದ್ರೆ, ಅವರು 'ಕಿಚ್ಚ', 'ಹುಚ್ಚ' ಆಗೋಕೆ ಮುಂಚೆ ನಾನು ಧರ್ಮೇಂದ್ರ ಅವನು ಸುದೀಪ್ ಅಷ್ಟೇ. ಆವಾಗ ನಮ್ಮ ನಡುವೆ ಸಂಬಂಧ ಹೇಗಿತ್ತೋ, ಸುಮಾರು 18 ವರ್ಷದ ನಂತರ ಈಗಲೂ ಅದು ಹಾಗೇ ಇದೆ.- ಧರ್ಮೇಂದ್ರ.

  English summary
  Kannada Actor-Director Kiccha Sudeep spoke about his friends Actor Dharma and Actor Arun Sagar in Zee Kannada channel's popular show Weekend With Ramesh season 2.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X