»   » ಶ್ರುತಿ ಅಮ್ಮ ಮನೆಯಲ್ಲಿ ಕುರಿ ಮಂದೆ ಸಾಕುತ್ತಿದ್ದಾರಂತೆ..!

ಶ್ರುತಿ ಅಮ್ಮ ಮನೆಯಲ್ಲಿ ಕುರಿ ಮಂದೆ ಸಾಕುತ್ತಿದ್ದಾರಂತೆ..!

Posted By:
Subscribe to Filmibeat Kannada

'ಕಳ್ಳ ಪೊಲೀಸ್' ಟಾಸ್ಕ್ ನಿಂದ ಮಾತಿಗೆ ಶುರುವಿಟ್ಟುಕೊಂಡ ಕಿಚ್ಚ 'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ವೇದಿಕೆಗೆ ಕಾಲಿಟ್ಟ ಕೂಡಲೇ ಈ ಬಾರಿ ಮೊದಲಿಗೆ ಇಡೀ ಒಂದು ಟೀಂ ಎಲಿಮಿನೇಷನ್ ಗೆ ನಾಮಿನೇಟ್ ಆಗಿದೆ ಎಂಬ ವಿಷಯವನ್ನು ತಿಳಿಸಿ, ಬಿಗ್ ಬಾಸ್ ಮನೆಯ ಸ್ಪರ್ಧಿಗಳ ಜೊತೆ ಮಾತು ಶುರು ಹಚ್ಚಿಕೊಂಡರು.[ಬಿಗ್ ಬಾಸ್ ಮನೆಯಿಂದ ಆರ್.ಜೆ ನೇತ್ರ ಔಟ್ ಆಗಲು ಕಾರಣವೇನು?]

ನೇರವಾಗಿ ಮೊದಲಿಗೆ ಹೊಸದಾಗಿ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟ ಸುಷ್ಮಾ ಜೊತೆ ಮಾತು ಅರಂಭಿಸಿದರು. ಮನೆಯಲ್ಲಿ ನಿಮಗೆ ಯಾರು ಇಷ್ಟ ಅಂತ ಸುಷ್ಮಾ ಅವರನ್ನು ಸುದೀಪ್ ಪ್ರಶ್ನಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ಸುಷ್ಮಾ, ಪೂಜಾ ಮತ್ತು ರೆಹಮಾನ್ ಎಂದು ಉತ್ತರಿಸಿದರು.

ಅದೇ ತರ ಚಂದನ್ ನನ್ನನ್ನು ದೊಡ್ಡಮ್ಮ ಎಂದು ಕರೀತಾನೆ, ನನಗೆ ಸಂಬಂಧಗಳೆಲ್ಲಾ ಇಷ್ಟ ಇಲ್ಲ. ಹಾಗೆ ಸಂಬಂಧದ ಬಗ್ಗೆ ಒಲವು ಇದ್ದಿದ್ರೆ, ಇಷ್ಟೊತ್ತಲ್ಲಿ ನಾನು ಮದುವೆ ಮಾಡಿಕೊಂಡು ಮಕ್ಕಳನ್ನು ಸಾಕಿಕೊಂಡು ಇರುತ್ತಿದ್ದೆ ಎಂದು ಸುಷ್ಮಾ ಅವರು ವ್ಯಂಗವಾಡಿದರು. ಮುಂದೆ ಓದಿ...

ನಟಿ ಶ್ರುತಿ-ಸುಷ್ಮಾ ನಡುವೆ ಚರ್ಚೆ

ವಾರದ ಕಥೆ ಕಿಚ್ಚನ ಜೊತೆ ಕಾರ್ಯಕ್ರಮದಲ್ಲಿ ಸುದೀಪ್ ಸ್ಪರ್ಧಿಗಳ ಜೊತೆ ಮಾತನಾಡುತ್ತಿದ್ದ ಸಂದರ್ಭದಲ್ಲಿ ಈ ನಡುವೆ ನಟಿ ಶ್ರುತಿ ಅವರು ಬಿಗ್ ಮನೆಯಲ್ಲಿ ಅಮ್ಮ ಆಗಿರೋ ವಿಚಾರ ಕುರಿತಂತೆ ಶ್ರುತಿ ಮತ್ತು ಸುಷ್ಮಾ ನಡುವೆ ಸ್ವಲ್ಪ ಹೊತ್ತು ಬಿಸಿ ಬಿಸಿ ಚರ್ಚೆ ನಡೆಯಿತು.['ಬಿಗ್ ಬಾಸ್' ಮನೆಯಿಂದ ಆರ್.ಜೆ ನೇತ್ರ ಔಟ್?]

ಶ್ರುತಿ-ಸುಷ್ಮಾ ಜಗಳಕ್ಕೆ ಸುದೀಪ್ ತುಪ್ಪ ಸುರಿದ್ರು

ವಾರದ ಕಥೆ ಕಿಚ್ಚನ ಜೊತೆ ಕಾರ್ಯಕ್ರಮದಲ್ಲಿ ಸುದೀಪ್ ಅವರು ಶ್ರುತಿ ಮತ್ತು ಸುಷ್ಮಾ ನಡುವೆ ಇರುವ ಭಿನ್ನಾಭಿಪ್ರಾಯದ ಬಗ್ಗೆ ಪ್ರಶ್ನಿಸಿದರು, ಅದಕ್ಕೆ ಉತ್ತರಿಸಿದ ಸುಷ್ಮಾ ಶ್ರುತಿ ಮನೆಯಲ್ಲಿ ಕುರಿ ಮಂದೆ ಸಾಕೋಳಾಗಿದ್ದಾಳೆ. ಇಲ್ಲಿ ಗೇಮ್ ಆಡಬೇಕು. ಅದು ಬಿಟ್ಟು ಅಮ್ಮ ಆಗೋದಲ್ಲ. ಶ್ರುತಿ ಇಲ್ಲಿ ಆಡೋದು ಬಿಟ್ಟು ಮದರ್ ಅಡ್ವೈಸ್ ನೀಡೋಕೆ ಆರಂಭಿಸಿದ್ದಾಳೆ. ಎಂದು ಆಕ್ರೋಶ ವ್ಯಕ್ತಪಡಿಸಿದರು.['ಬಿಗ್ ಬಾಸ್' ಮನೆಗೆ ಸುಷ್ಮಾ ವೀರ್.! ನಟಿ ಶ್ರುತಿಗೆ ಕಷ್ಟಕಷ್ಟ!]

ಕೃತಿಕಾ ಕಿಡ್ ಅಂತೆ

ಕೃತಿಕಾ ಕೂಡ ಶ್ರುತಿ ಭುಜ ಹಿಡಿದು ಮೇಲೆ ಬರುತ್ತಿದ್ದಾಳೆ. ನಾವು ಮೇಲೆ ಬರಬೇಕು ಅಂದ್ರೆ ನಮ್ಮ ಭುಜದ ಶಕ್ತಿಯಿಂದಾನೇ ಮುಂದೆ ಬರಬೇಕು. ಬೇರೆಯವರ ಭುಜದ ಸಹಾಯದಿಂದಲ್ಲ. ಕೃತಿಕಾ ಇನ್ನು ಕಿಡ್ ತರ ಆಡುತ್ತಿದ್ದಾಳೆ ಎಂದು ಸುಷ್ಮಾ ಅವರು ಬಹಳ ಖಾರವಾಗಿಯೇ ಟೀಕಿಸಿದ್ರು.

ನಾನು ಕಿಡ್ ಅಲ್ಲ ಎಂದ ಕೃತಿಕಾ

ನಾನು ಈ ಮನೆಯಲ್ಲಿ ಕಿಡ್ ಅಲ್ಲ. ನಾನು ಯಾರು? ನಾನು ಹೇಗೆ? ಅಂತ ನನಗೆ ಚೆನ್ನಾಗಿ ಗೊತ್ತು. ಶ್ರುತಿ ಅವರನ್ನು ನಾನು ಅಮ್ಮಾ ಅಂತಾನೇ ಕರಿತೀನಿ. ಶ್ರುತಿ ಅವರನ್ನು ಅಮ್ಮನಾಗಿಯೇ ನೋಡುತ್ತೇನೆ. ಅದು ನನ್ನ ಇಷ್ಟ ಇದು ನನ್ನ ಅನಿಸಿಕೆ ಎಂದು ಕೃತಿಕಾ ಅವರು ತಮ್ಮ ಅಭಿಪ್ರಾಯವನ್ನು ಕಿಚ್ಚನ ಹತ್ತಿರ ತಿಳಿಸಿದರು.

ನಾನು ಕುರಿ ಸಾಕೋಳು ಅಲ್ಲ-ಶ್ರುತಿ

ಇತ್ತ ಶ್ರುತಿ ಅವರು ಮನೆಯವರೆಲ್ಲರ ವಿಭಿನ್ನ ಅನಿಸಿಕೆ ಸಂಗ್ರಹಿಸಿ, ಈ ಮನೆಯಲ್ಲಿ ಯಾರು ಕುರಿ ಅಲ್ಲ. ನಾನು ಈ ಮನೆಯಲ್ಲಿ ಕುರಿ ಸಾಕೋಕೆ ಬಂದಿಲ್ಲ. ನಾನು ಕುರಿ ಸಾಕೋಳು ಅಲ್ಲ. ಹಾಗೆ ಅಮ್ಮ, ಅಕ್ಕ ಅಂತೆಲ್ಲಾ ಕರೆಯಿರಿ ಎಂದು ಯಾರಿಗೂ ತಿಳಿಸಿಲ್ಲ. ಅಮ್ಮನ ಜಾಗ ಕೊಟ್ಟಿರೋದು ಅವರೇ, ಈಗ ಅವರೇ ಅವರ ಮುಂದೆ ಪ್ರಶ್ನೆ ಹಾಕಿಕೊಂಡಿದ್ದಾರೆ ಎಂದು ಸ್ವಲ್ಪ ಬೇಸರ ಆದರೂ ಖಾರವಾಗಿಯೇ ಉತ್ತರ ನೀಡಿದರು.

ಅಯ್ಯಪ್ಪ ಅವರನ್ನು ಪುಶ್ ಮಾಡೋದು ಅಂದ್ರೆ ಹೇಗೆ?

ಈ ಬಾರಿ ಬಿಗ್ ಮನೆಯ ಸದಸ್ಯರೊಡನೆ ಮಾತನಾಡಲು ಬೆಂಗಳೂರಿನ ನಾಗರಾಜ್ ಎಂಬವರು ಕರೆ ಮಾಡಿದ್ದರು. ಅಯ್ಯಪ್ಪ ಅವರನ್ನು ಪುಶ್ ಮಾಡೋದು ನಾನೇ ಎಂದು ಈ ಮೊದಲಿನಿಂದಲೂ ಹೇಳುತ್ತಾ ಬಂದಿದ್ದೀರಿ, ಅದು ಹೇಗೆ ಎಂದು ನೇರವಾಗಿ ಚಂದನ್ ಗೆ ಪ್ರಶ್ನೆ ಹಾಕಿದರು. ಅದಕ್ಕೆ ಚಂದನ್ ಪುಶ್ ಅಂದ್ರೆ ಸಪೋರ್ಟ್ ಅಂತ ಅಲ್ಲ. ಅವನ ಜೊತೆ ಪ್ರತಿಯೊಂದು ಟಾಸ್ಕ್ ನಲ್ಲೂ ಜೊತೆಯಾಗಿಯೇ ಆಡಿದ್ದೇವೆ. ಅದಕ್ಕೆ ಆ ತರ ಹೇಳಿದ್ದು ಹೊರತು ನನ್ನ ಸಪೋರ್ಟ್ ನಿಂದ ಎಂಬ ಅರ್ಥ ಬರೋದಿಲ್ಲ ಎಂದು ಉತ್ತರಿಸಿದರು.

300 ವಿಕೆಟ್ ಉರುಳಿಸಿದ ಅಯ್ಯಪ್ಪ

ಅಯ್ಯಪ್ಪ ಈಗಾಗಲೇ ಬಹಳಷ್ಟು ಹುಡುಗಿಯರನ್ನು ಬೀಳಿಸಿದ್ದಾರೆ ಹಾಗೂ 300 ವಿಕೆಟ್ ಗಳನ್ನು ಬೀಳಿಸಿ ಇನ್ನು ಮುಂದುವರೆಯುತ್ತಿದ್ದಾರೆ ಎಂದು ಚಂದನ್ ಪರೋಕ್ಷವಾಗಿ ಕಿಚ್ಚ ಸುದೀಪ್ ಬಳಿ ಶನಿವಾರ ಸಂಚಿಕೆಯಲ್ಲಿ ಬಿಚ್ಚಿಟ್ಟರು. ಅಯ್ಯಪ್ಪ ಅವರ ಕೃಷ್ಣ ಲೀಲೆಯಲ್ಲಿ ಕೆಲವು ತುಂಬಾ ಸೀರಿಯಸ್, ಇನ್ನು ಕೆಲವು ಹಾರ್ಟ್ ಬ್ರೇಕಿಂಗ್ ಅಲ್ಲದೇ ಮನೆಯಲ್ಲಿಯೂ ಅಯ್ಯಪ್ಪಗೆ ಮೂರು ಹುಡುಗಿಯರು ಫಿದಾ ಆಗಿದ್ದಾರೆ ಎಂದು ಚಂದನ್ ಹಾಸ್ಯ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಯ್ಯಪ್ಪ ಬಿಗ್ ಬಾಸ್ ಮನೆಯಲ್ಲಿ ಇಷ್ಟೆಲ್ಲಾ ನಡೆಯುತ್ತಿರುವಾಗಲೂ ಯಾವುದನ್ನೂ ಗಂಭೀರವಾಗಿ ತೆಗೆದುಕೊಳ್ಳಬಾರದು. ನಾನು ಪಕ್ಷಿ ವೀಕ್ಷಣೆ ಮಾಡಿ ಕಣ್ಣು ತಂಪು ಮಾಡಿಕೊಳ್ಳುತ್ತೇನೆ ಎಂದರು.

ನೇತ್ರಗೆ ಅಧಿಕಾರ ನೀಡಿದ ಬಿಗ್ ಬಾಸ್

ಮನೆಯಿಂದ ಹೊರಬಂದ ನೇತ್ರಗೆ ಬಿಗ್ ಬಾಸ್ ಒಂದು ವಿಶೇಷ ಅಧಿಕಾರ ನೀಡಿದ್ದರು. ಅದೇನಪ್ಪಾ ಅಂದ್ರೆ ಈ ಬಾರಿ ಬಿಗ್ ಬಾಸ್ ಮನೆಯ ಗಾಜಿನ ರೂಮ್ ನಲ್ಲಿ ಇಬ್ಬರು ಇರುವಂತೆ ಟಾಸ್ಕ್ ನೀಡಿದ್ದು, ಅದಕ್ಕೆ ಕ್ಯಾಪ್ಟನ್ ಭಾವನಾ ಅವರನ್ನು ಬಿಟ್ಟು ಇಬ್ಬರ ಹೆಸರನ್ನು ಸೂಚಿಸಲು ತಿಳಿಸಿದರು. ಅದಕ್ಕೆ ನೇತ್ರ ಅವರು ಸುಷ್ಮಾ ಮತ್ತು ಅಯ್ಯಪ್ಪ ಅವರ ಹೆಸರನ್ನು ಆಯ್ಕೆ ಮಾಡಿದರು.

    English summary
    Bigg Boss Kannada 3: Weekend with Sudeep: RJ Nethra got eliminated. Day 50 Actress Shruthi and Sushma veer fight in bigg boss house.

    ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada