»   » ರಿಯಾಲಿಟಿ ಶೋ 'ರಿಯಲ್' ಮುಖ ಬಯಲು: ನೊಂದ ಯುವತಿ ಬಿಚ್ಚಿಟ್ಟ ಸ್ಫೋಟಕ ಸತ್ಯ ಏನು.?

ರಿಯಾಲಿಟಿ ಶೋ 'ರಿಯಲ್' ಮುಖ ಬಯಲು: ನೊಂದ ಯುವತಿ ಬಿಚ್ಚಿಟ್ಟ ಸ್ಫೋಟಕ ಸತ್ಯ ಏನು.?

Posted By:
Subscribe to Filmibeat Kannada
ರಿಯಾಲಿಟಿ ಶೋ 'ರಿಯಲ್' ಮುಖ ಬಯಲು: ನೊಂದ ಯುವತಿ ಬಿಚ್ಚಿಟ್ಟ ಸ್ಫೋಟಕ ಸತ್ಯ ಏನು.? | Filmibeat Kannada

ಕಿರುತೆರೆ ಲೋಕದಲ್ಲಿ ಹೊಸ ಸಂಚಲನ ಉಂಟು ಮಾಡಿದ ರಿಯಾಲಿಟಿ ಶೋಗಳ ಪೈಕಿ 'ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು' ಕೂಡ ಒಂದು. ಈಗಾಗಲೇ ಮೂರು ಆವೃತ್ತಿಗಳನ್ನು ಯಶಸ್ವಿಯಾಗಿ ಪೂರೈಸಿರುವ 'ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು' ಕಾರ್ಯಕ್ರಮದ ನಾಲ್ಕನೇ ಆವೃತ್ತಿಯ ಆಡಿಷನ್ಸ್ ಇಂದು ಬೆಂಗಳೂರಿನ ಮಲ್ಲೇಶ್ವರಂ ನಲ್ಲಿ ಇರುವ ಮಹಾರಾಣಿ ಲಕ್ಷ್ಮಿ ಅಮ್ಮಣ್ಣಿ ಕಾಲೇಜಿನಲ್ಲಿ ನಡೆಯುತ್ತಿತ್ತು.

ಆಡಿಷನ್ ನಲ್ಲಿ ಭಾಗವಹಿಸಲು ಸುಮಾರು ಸಾವಿರಕ್ಕೂ ಹೆಚ್ಚು ಯುವತಿಯರು ಕಾಲೇಜ್ ಮುಂದೆ ನೆರೆದಿದ್ದರು. ಒಳ್ಳೆತನದಿಂದ ಮುಗಿಯಬೇಕಿದ್ದ ಆಡಿಷನ್ಸ್ ನಲ್ಲಿ ಕೆಲ ಯುವತಿಯರು ರೊಚ್ಚಿಗೆದ್ದ ಪರಿಣಾಮ ಅರ್ಧಕ್ಕೆ ಸ್ಥಗಿತಗೊಂಡಿತು.

''ನನಗೆ ಕಿಸ್ ಕೊಡು, ನನ್ನ ಮುಂದೆ ಬಟ್ಟೆ ಬದಲಿಸು, ಸೆಕ್ಸ್ ಅಂದ್ರೆ ಏನು ಅಂತ ಗೊತ್ತಾ.?'' ಎಂಬೆಲ್ಲ ಅಶ್ಲೀಲ, ಅಸಂಬದ್ಧ ಪ್ರಶ್ನೆಗಳನ್ನು ಆಯೋಜಕರು ಆಡಿಷನ್ಸ್ ವೇಳೆ ಕೇಳಿದ್ದಾರೆ ಅಂತ ಕೆಲ ಯುವತಿಯರು ಆರೋಪ ಮಾಡಿದ್ದಾರೆ.

'ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು' ಅಶ್ಲೀಲ ಆಡಿಷನ್: ರೊಚ್ಚಿಗೆದ್ದ ಯುವತಿಯರು!

ಹಾಗಾದ್ರೆ, ಆಡಿಷನ್ಸ್ ನಲ್ಲಿ ನಡೆದಿದ್ದು ಏನು.? ಅಯೋಜಕರು ಕೇಳಿದ ಪ್ರಶ್ನೆ ಏನು.? ಎಂಬ ಪ್ರಶ್ನೆಗಳಿಗೆ ಮಾಧ್ಯಮಗಳ ಮುಂದೆ ನೊಂದ ಯುವತಿ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾಳೆ. ಮಾಧ್ಯಮಗಳಿಗೆ ನೊಂದ ಯುವತಿ ನೀಡಿರುವ ಹೇಳಿಕೆ ಇಲ್ಲಿದೆ. ಓದಿರಿ...

ನೊಂದ ಯುವತಿ ಏನಂತಾರೆ.?

''ಪ್ರೋಮೋ ನೋಡಿ ಆಡಿಷನ್ ಗೆ ಬಂದೆ. ಬೆಳಗ್ಗೆ 9 ಗಂಟೆಗೆ ಆಡಿಷನ್ ಶುರು ಆಯ್ತು. ಕಾಲೇಜು ಒಳಗೆ ಹೋಗುವಷ್ಟರಲ್ಲೇ 10 ಗಂಟೆ ಆಗೋಯ್ತು. ಒಳಗೆ ಹೋದ್ಮೇಲೆ, ಎರಡು ಪೇಜ್ ಇರುವ ಫಾರ್ಮ್ ಕೊಟ್ಟರು. ಅದನ್ನ ಭರ್ತಿ ಮಾಡಿದ್ಮೇಲೆ ಆಡಿಷನ್ ನಡೆಯುವ ಜಾಗಕ್ಕೆ ಹೋದ್ವಿ'' - ನೊಂದ ಯುವತಿ

'ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು' ಅಶ್ಲೀಲ ಆಡಿಷನ್: ರೊಚ್ಚಿಗೆದ್ದ ಯುವತಿಯರು!

ಗಲಾಟೆ ಶುರು ಆಗಿದ್ದು ಹೇಗೆ.?

''ಆಡಿಷನ್ ಮುಗಿಸಿಕೊಂಡು ಬಂದ ಯುವತಿಯರು ಬೇಜಾರು ಮಾಡಿಕೊಳ್ತಿದ್ರು. ''ನನ್ನ ಮುಂದೆ ಡ್ರೆಸ್ ಚೇಂಜ್ ಮಾಡು. ನನಗೆ ಕಿಸ್ ಮಾಡು'' ಅಂತೆಲ್ಲ ಆಡಿಷನ್ ನಲ್ಲಿ ಕೆಟ್ಟದಾಗಿ ಮಾತನಾಡುತ್ತಿದ್ದಾರೆ ಅಂತ ಕೆಲವು ಹುಡುಗಿಯರು ಹೇಳಿದರು. ನಾನು ಒಳಗೆ ಆಡಿಷನ್ ಗೆ ಹೋದ್ಮೇಲೆ ''ಎಷ್ಟು ಬಾಯ್ ಫ್ರೆಂಡ್ಸ್ ಇದ್ದಾರೆ.? ಎಷ್ಟು ಜನ ಲವ್ವರ್ಸ್ ಇದ್ದಾರೆ.? ಸೆಕ್ಸ್ ಅಂದ್ರೆ ಏನು ಗೊತ್ತಾ.? ಸ್ಮೋಕ್ ಮಾಡ್ತೀರಾ.? ಡ್ರಿಂಕ್ಸ್ ಮಾಡ್ತೀರಾ.?'' ಅಂತೆಲ್ಲ ಕೇಳ್ತಿದ್ರು. ನಾನು ಹೊರಗೆ ಬಂದು ಬಿಟ್ಟೆ, ಅಷ್ಟರಲ್ಲಿ ಗಲಾಟೆ ಶುರು ಆಯ್ತು'' - ನೊಂದ ಯುವತಿ

ಮೈಕ್ ಕೊಡಲಿಲ್ವಂತೆ

''ಸ್ಟೇಜ್ ಮೇಲೆ ಹೋಗಿ ಮೈಕ್ ನಲ್ಲಿ ಮಾತನಾಡಬೇಕು. ಈ ವಿಚಾರವನ್ನ ಎಲ್ಲರಿಗೂ ಹೇಳಬೇಕು ಅಂತ ಹೋದರೆ, ನನಗೆ ಮೈಕ್ ಕೊಡಲಿಲ್ಲ. ಮಾತನಾಡಲು ಬಿಡಲಿಲ್ಲ'' - ನೊಂದ ಯುವತಿ

ಡೈರೆಕ್ಟ್ ಆಗಿ ಹೇಗೆ ಸೆಲೆಕ್ಟ್ ಆಗಬಹುದು.?

''ಪಕ್ಕದಲ್ಲಿ ಇರುವ ಹುಡುಗನಿಗೆ ಕಿಸ್ ಮಾಡಿದರೆ ಡೈರೆಕ್ಟ್ ಆಗಿ ಸೆಲೆಕ್ಟ್ ಮಾಡ್ತೀವಿ'' ಅಂತೆಲ್ಲ ಆಡಿಷನ್ ನಲ್ಲಿ ಹೇಳಿದ್ದಾರಂತೆ'' - ನೊಂದ ಯುವತಿ

ಬಟ್ಟೆ ನೋಡಿ ಮಣೆ ಹಾಕ್ತಿದ್ರು

''ಫಾರ್ಮ್ ಫಿಲ್ ಮಾಡೋಕೆ ಕೊಟ್ಟಿದ್ರಲ್ಲ ಅದು ವೇಸ್ಟ್. ಫಾರ್ಮ್ ನೋಡಿ ಅವರು ಸೆಲೆಕ್ಟ್ ಮಾಡ್ತಿರ್ಲಿಲ್ಲ. ನಮ್ಮನ್ನ ಮೇಲಿಂದ ಕೆಳಗೆ ನೋಡ್ತಿದ್ರು. ಶಾರ್ಟ್ಸ್, ಫ್ರಾಕ್ ಹಾಕೊಂಡ್ ಬಂದಿದ್ರೆ ಸೆಲೆಕ್ಟ್ ಮಾಡ್ತಿದ್ರು. ತೀರ್ಪುಗಾರರ ಸ್ಥಾನದಲ್ಲಿ ಮಹಿಳೆಯರು ಇರಲಿಲ್ಲ'' - ನೊಂದ ಯುವತಿ

English summary
What exactly happened in Pyate Hudgeer Halli Lifu auditions.? A girl explains to a TV Channel. Read the complete report here.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada