»   » ಯಾರೀ 'ತಲೆಕೆಟ್ಟ ತಂಗಳಿಟ್ಟು' ಪ್ರಥಮ್? ನಿಮಗೆ ಗೊತ್ತಿಲ್ಲದ ಸತ್ಯ ಸಂಗತಿ

ಯಾರೀ 'ತಲೆಕೆಟ್ಟ ತಂಗಳಿಟ್ಟು' ಪ್ರಥಮ್? ನಿಮಗೆ ಗೊತ್ತಿಲ್ಲದ ಸತ್ಯ ಸಂಗತಿ

Posted By:
Subscribe to Filmibeat Kannada

'ಒಳ್ಳೆ ಹುಡುಗ' ಪ್ರಥಮ್ ಯಾರು ಅಂದ್ರೆ, 'ಖಂಡಿಸ್ತೀನಿ' ಎಂಬ ಡೈಲಾಗ್ ನ ಚಿಕ್ಕ ಮಕ್ಕಳು ಕೂಡ ಹೇಳ್ತಾರೆ. ಅಷ್ಟರಮಟ್ಟಿಗೆ 'ಬಿಗ್ ಬಾಸ್ ಸ್ಟಾರ್' ಪ್ರಥಮ್ ಈಗ 'ಸ್ಯಾಂಡಲ್ ವುಡ್ ಸೆನ್ಸೇಷನ್'.

'ಒಳ್ಳೆ ಹುಡುಗ' ಅಂತ ಸ್ವಯಂ ಬಿರುದು ಕೊಟ್ಟುಕೊಂಡಿರುವ ಪ್ರಥಮ್ ಒಂಥರಾ 'ಉತ್ತರವೇ ಇಲ್ಲದ ಪ್ರಶ್ನೆ', 'ಅರ್ಥವಾಗದ ಪಠ್ಯ ಪುಸ್ತಕ', 'ಡೈಜೆಸ್ಟ್ ಆಗದ ಸಿಲಬಸ್' ಇದ್ಹಂಗೆ.!

ಕೇವಲ ಒಂದು ವಾರದ ಹಿಂದೆ ಈ ಪ್ರಥಮ್ ಯಾರು ಅಂತಲೇ ಕರ್ನಾಟಕದ ಜನತೆಗೆ ಗೊತ್ತಿರ್ಲಿಲ್ಲ. 'ಬಿಜೆಪಿ ನಾಯಕ ಈಶ್ವರಪ್ಪ ನವರ ಮೊಮ್ಮಗ' ಎಂಬ ಬಿಟ್ಟಿ ಬಿಲ್ಡಪ್ ನೊಂದಿಗೆ 'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮಕ್ಕೆ ಎಂಟ್ರಿಕೊಟ್ಟ 'ಬಿಡಿಸಲಾಗದ ಕಗ್ಗಂಟು' ಪ್ರಥಮ್ ಈಗ ಕರುನಾಡ ಮೂಲೆ ಮೂಲೆಯಲ್ಲೂ ಫುಲ್ ಫೇಮಸ್. [ಪ್ರಥಮ್ ಕಾಲಿಟ್ಟ ಕಡೆಯಲ್ಲೆಲ್ಲಾ ಬರೀ ಕಿರಿಕ್ಕೇ.! ಸಾಕ್ಷಿ ಬೇಕಾ?]

ಅಷ್ಟಕ್ಕೂ, ಈ 'ಪಿಟೀಲು' ಪ್ರಥಮ್ ಯಾರು? ಅವರು ನಿಜವಾಗಲೂ ಈಶ್ವರಪ್ಪ ನವರ ಮೊಮ್ಮಗನಾ? ಅವರ ಹಿನ್ನಲೆ ಏನು? ಅವರು 'ಬಿಗ್ ಬಾಸ್' ಮನೆಗೆ ಕಾಲಿಟ್ಟಿದ್ದು ಹೇಗೆ ಅನ್ನೋದರ ಕುರಿತ ಕಂಪ್ಲೀಟ್ ಕಹಾನಿ ಇಲ್ಲಿದೆ ಓದಿರಿ....

ಯಾರೀ ಪ್ರಥಮ್?

'ಪಿಟೀಲು' ಪ್ರಥಮ್ ಮೂಲತಃ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಹಲಗಪುರ ನಿವಾಸಿ. [ಬಿಗ್ ಬಾಸ್ 4: ಪ್ರಥಮ್ ಆವಾಜ್, ಮೈಕ್ ಬಿಟ್ಟು ಮನೆ ಬಿಡ್ತೀನಿ ಎಂದ ಕೀರ್ತಿ]

ಅನುಕೂಲಸ್ಥ ಕುಟುಂಬದಲ್ಲಿ ಹುಟ್ಟಿದ ಪ್ರಥಮ್

ಕೊಳ್ಳೇಗಾಲದಲ್ಲಿ ಇರುವ ಹಲಗಪುರ ಪುಟ್ಟ ಹಳ್ಳಿ ಆದರೂ, ಅಲ್ಲಿ ಜಮೀನು ಹಾಗೂ ತೋಟದ ಮನೆ ಹೊಂದಿರುವ ಅನುಕೂಲಸ್ಥ ಕುಟುಂಬದಲ್ಲಿ ಹುಟ್ಟಿ ಬೆಳೆದ ಹುಡುಗ ಪ್ರಥಮ್.

ಪ್ರಥಮ್ ತಂದೆ-ತಾಯಿ ಯಾರು?

ಸರ್ಕಾರಿ ಕೆಲಸದಲ್ಲಿ ಇರುವ ಸಿ.ಮಲ್ಲಣ್ಣ ಹಾಗೂ ಗೃಹಿಣಿ ಲಕ್ಷ್ಮಿ ದಂಪತಿಯ ಪುತ್ರ ಪ್ರಥಮ್.

ಈಶ್ವರಪ್ಪನವರಿಗೆ ಸಂಬಂಧಿ ಅಲ್ಲ.!

ಹಲಗಪುರದ ಸಿ.ಮಲ್ಲಣ್ಣ ಹಾಗೂ ಲಕ್ಷ್ಮಿ ದಂಪತಿಗೂ, ಬಿಜೆಪಿ ನಾಯಕ ಈಶ್ವರಪ್ಪನವರಿಗೂ ಯಾವುದೇ ರಕ್ತ ಸಂಬಂಧ ಇಲ್ಲ. ವಿಡಿಯೋ ಬೈಟ್ ನಲ್ಲಿ ಹೇಳಿರುವ ಹಾಗೆ, 'ಪ್ರಥಮ್...ಈಶ್ವರಪ್ಪನವರ ಮೊಮ್ಮಗ ಅಲ್ಲ'. ಅದೆಲ್ಲ ಗಿಮಿಕ್ ಅಷ್ಟೆ. ['ಪ್ರಥಮ್' ಬಿಗ್ ಬಾಸ್ ಎಂಟ್ರಿಗೆ ರಾಜಕಾರಣಿಗಳೆ ಕಾರಣವೇ ?]

ಪ್ರಥಮ್ ರಿಯಾಲಿಟಿ.!

'ಬಿಗ್ ಬಾಸ್' ರಿಯಾಲಿಟಿ ಶೋನಲ್ಲಿ ಪ್ರಥಮ್ ಹೇಗಿದ್ದಾರೋ, ನಿಜ ಜೀವನದಲ್ಲೂ ಹಾಗೆಯೇ...ತಂಟೆಗೆ ಬಂದವರನ್ನ ತರಾಟೆಗೆ ತೆಗೆದುಕೊಳ್ಳುವ ಕಿರಿಕ್ ಹುಡುಗ.

'ಕವಿ' ಪ್ರಥಮ್

ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಅಭಿಮಾನ ಹೊಂದಿರುವ ಪ್ರಥಮ್, ಚಿಕ್ಕವಯಸ್ಸಿನಲ್ಲಿಯೇ ಆಶು ಕವಿತೆ ಬರೆದು ಅನೇಕ ಬಾರಿ ಬಹುಮಾನ ಗಿಟ್ಟಿಸಿದ್ದಾರೆ.

ಪ್ರಥಮ್ ಓದಿದ್ದು ಎಲ್ಲಿ?

ಮೈಸೂರಿನ ಟಿ.ನರಸೀಪುರದಲ್ಲಿ ಹೈಸ್ಕೂಲ್ ಮತ್ತು ಕಾಲೇಜು ವಿದ್ಯಾಭ್ಯಾಸ ಮುಗಿಸಿದ್ದಾರೆ ಪ್ರಥಮ್.

ಸಿನಿಮಾ ಕನಸು ಯಾವಾಗಿನಿಂದ.?

ಆರನೇ ತರಗತಿ ಓದುವಾಗ್ಲಿಂದ್ಲೂ ಪ್ರಥಮ್ ಗೆ 'ಸಿನಿಮಾ ನಿರ್ದೇಶಕ'ನಾಗುವ ಬಯಕೆ. ಆದ್ರೆ, ಪ್ರಥಮ್ ರವರ ಬಣ್ಣದ ಬದುಕಿನ ಆಸೆಗೆ ತಂದೆ-ತಾಯಿ ನೀರೆರೆಯಲಿಲ್ಲ.

ತಂದೆ ಜೊತೆ ಮಾತು ಬಿಟ್ಟಿದ ಪ್ರಥಮ್

'ಮೊದಲು ಓದು, ನಂತರ ಸಿನಿಮಾ' ಅಂತ ಬುದ್ಧಿವಾದ ಹೇಳಿದ್ದಕ್ಕೆ ತಂದೆ ಸಿ.ಮಲ್ಲಣ್ಣ ಜೊತೆಗೆ ಪ್ರಥಮ್ ಮಾತು ಬಿಟ್ಟಿದ್ದರು. ಅದು ಬರೀ ಒಂದೋ ಅಥವಾ ಎರಡು ದಿನ ಅಲ್ಲ. ಬರೋಬ್ಬರಿ 8 ವರ್ಷಗಳ ಕಾಲ ಅಂದ್ರೆ ನೀವೇ ಊಹಿಸಿ ಪ್ರಥಮ್ ಎಂಥ ಹಠಮಾರಿ ಅಂತ.

ಊರು ಬಿಟ್ಟು ಸಿಟಿ ಸೇರಿದ ಪ್ರಥಮ್

ತಂದೆ ಜೊತೆ ಮಾತು ಬಿಟ್ಟು, ಬೆಂಗಳೂರಿಗೆ ಬಂದ ಪ್ರಥಮ್ 'ಡೈರೆಕ್ಟರ್ ಕ್ಯಾಪ್' ತೊಡಲು ಸಕಲ ತಯಾರಿ ಮಾಡಿಕೊಂಡರು. ಗಾಂಧಿನಗರದ ಟಾಪ್ ತಾರೆಯರ ಜೊತೆ ತೀರಾ ಆಪ್ತರಂತೆ ನಿಂತು ಫೋಟೋ ಹಿಡಿಸಿಕೊಂಡಿರುವ ಪ್ರಥಮ್ ಸದ್ಯಕ್ಕೆ ಒಂದು ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಇನ್ನೊಂದು ಚಿತ್ರದ ಪ್ರೀ ಪ್ರೊಡಕ್ಷನ್ ಕೆಲಸಕ್ಕೆ ಚಾಲನೆ ನೀಡಿದ್ದಾರೆ.

ಯಾವುದು ಆ ಸಿನಿಮಾ?

ಸ್ವತಃ ಪ್ರಥಮ್ ಹೇಳಿಕೊಂಡಿರುವ ಹಾಗೆ, ಇನ್ನೂ ಶೂಟಿಂಗ್ ಹಂತದಲ್ಲಿ ಇರುವ 'ಬಿಗ್ ಬಾಸ್ ಕನ್ನಡ -2' ವಿಜೇತ ಅಕುಲ್ ಬಾಲಾಜಿ ಮುಖ್ಯಭೂಮಿಕೆಯಲ್ಲಿ ನಟಿಸಿರುವ 'ದೇವ್ರವ್ನೆ ಬುಡು ಗುರು' ಚಿತ್ರದ ನಿರ್ದೇಶಕ. ಇದರ ಜೊತೆಗೆ 'ಒಳ್ಳೆ ಹುಡುಗ' ಎಂಬ ಚಿತ್ರಕ್ಕೆ ಆಕ್ಷನ್ ಕಟ್ ಹೇಳುವ ಪ್ಲಾನ್ ಕೂಡ ಪ್ರಥಮ್ ತಲೆಯಲ್ಲಿದೆ.

ಫೋಟೋ ಕ್ರೇಜ್.!

'ಒಳ್ಳೆ ಹುಡುಗ' ಪ್ರಥಮ್ ರವರ ಫೇಸ್ ಬುಕ್ ಪೇಜ್ ಓಪನ್ ಮಾಡಿದರೆ, ಕನ್ನಡ ತಾರೆಯರ ಜೊತೆ ಕ್ಲಿಕ್ ಮಾಡಿಕೊಂಡಿರುವ ಫೋಟೋಗಳು ಬೇಜಾನ್ ಇವೆ.

ಕನ್ನಡ ಪ್ರೇಮಿ ಪ್ರಥಮ್

'ಬಿಗ್ ಬಾಸ್' ಮನೆಯಲ್ಲಿ ಸ್ಪಷ್ಟವಾಗಿ ಕನ್ನಡ ಮಾತನಾಡುವ ಕುರಿತು ಪ್ರಥಮ್ ರಂಪಾಟ ಮಾಡಿದ್ದನ್ನ ನೀವೆಲ್ಲಾ ನೋಡಿದ್ದೀರಾ. ''ಪ್ರಥಮ್ ವ್ಯಕ್ತಿತ್ವ ನಿಜ ಜೀವನದಲ್ಲೂ ಸೇಮ್ ಟು ಸೇಮ್ ಹೀಗೆಯೇ'' ಎನ್ನುತ್ತಾರೆ ಪ್ರಥಮ್ ರೂಮ್ ಮೇಟ್ ವಿವೇಕ್. ಕನ್ನಡ ಭಾಷೆ ಗೊತ್ತಿದ್ದರೂ ಮಾತನಾಡದವರಿಗೆ ಛೀಮಾರಿ ಹಾಕಿ, ಅನೇಕ ಬಾರಿ ಗಲಾಟೆ ಮಾಡಿಕೊಂಡಿದ್ದಾರಂತೆ ಪ್ರಥಮ್.

'ಬಿಗ್ ಬಾಸ್' ಮನೆಗೆ ಪ್ರಥಮ್ ಎಂಟ್ರಿ ಹೇಗೆ?

ಕರ್ನಾಟಕದಲ್ಲಿ ಜನಪ್ರಿಯತೆ ಪಡೆಯಬೇಕು ಅಂದ್ರೆ 'ಬಿಗ್ ಬಾಸ್' ಒಳ್ಳೆಯ ಪ್ಲಾಟ್ ಫಾರ್ಮ್ ಎಂಬ ಸತ್ಯ ಸಂಗತಿ ಪ್ರಥಮ್ ಗೆ ಗೊತ್ತು. ಹೀಗಾಗಿ, ಏನಾದರೂ ಮಾಡಿ ಈ ಬಾರಿಯ 'ಬಿಗ್ ಬಾಸ್' ಕಾರ್ಯಕ್ರಮಕ್ಕೆ ಎಂಟ್ರಿಕೊಡಬೇಕು ಎಂಬ ಪಣತೊಟ್ಟು, ಕಲರ್ಸ್ ವಾಹಿನಿಯ ಪರಮೇಶ್ವರ ಗುಂಡ್ಕಲ್ ರವರನ್ನ ಪ್ರಥಮ್ ಭೇಟಿ ಮಾಡಿದ್ದಾರೆ. ಆಗ ಪರಮೇಶ್ವರ ಗುಂಡ್ಕಲ್ ಒಂದು ಸವಾಲು ಹಾಕಿದ್ದಾರೆ.

ಏನು ಆ ಸವಾಲು?

''ಬಿಗ್ ಬಾಸ್' ಮನೆ ಒಳಗೆ ಹೋಗಲು ಏನು ಬೇಕಾದರೂ ಮಾಡ್ತೀನಿ'' ಎಂದ ಪ್ರಥಮ್ ಗೆ ಪರಮೇಶ್ವರ ಗುಂಡ್ಕಲ್, ''ರಾಜಕಾರಣಿಗಳನ್ನು ಮಾತನಾಡಿಸಿಕೊಂಡು ಬಾ' ಎಂಬ ಸವಾಲ್ ಹಾಕಿದರು. [ಎಕ್ಸ್ ಕ್ಲೂಸಿವ್: 'ಬಿಗ್ ಬಾಸ್ ಕನ್ನಡ-4' ನಿರ್ದೇಶಕ ಪರಮೇಶ್ವರ ಗುಂಡ್ಕಲ್ ಸಂದರ್ಶನ]

ಹೇಳಿದ್ದನ್ನ ಮಾಡಿ ತೋರಿಸಿದ ಪ್ರಥಮ್

ಕೊಟ್ಟ ಸವಾಲಿನಂತೆ...ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಬಿಜೆಪಿ ನಾಯಕ ಈಶ್ವರಪ್ಪ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಸಂಸದೆ ಶೋಭಾ ಕರಂದ್ಲಾಜೆ ರವರ ವಿಡಿಯೋ ಬೈಟ್ ಗಳನ್ನ ತಂದು ಪರಮೇಶ್ವರ ಗುಂಡ್ಕಲ್ ಮುಂದೆ ಇಟ್ಟಿದ್ದಾರೆ ಪ್ರಥಮ್. ಆಗಲೇ, 'ಬಿಗ್ ಬಾಸ್' ಮನೆಗೆ ಪ್ರಥಮ್ ಎಂಟ್ರಿ ಟಿಕೆಟ್ ಪಡೆದದ್ದು.

ಎಲ್ಲಾ ಗಿಮಿಕ್ ಶಿವಾ.!

ರಾಜಕಾರಣಿಗಳಿಂದ 'ಪ್ರಥಮ್ ನಮ್ಮ ಹುಡುಗ, ನಮ್ಮ ಮೊಮ್ಮಗ' ಅಂತ ಹೇಳಿಸಿದ್ದು ಟಿ.ಆರ್.ಪಿಗಾಗಿ ಪ್ರಥಮ್ ಮಾಡಿದ ಗಿಮಿಕ್.

ಸುದೀಪ್ ಗೆ ಮಾವ ಅಂದಿದ್ದು ನೆನಪಿದೆ ತಾನೆ?

''ನಾವು ಚಿತ್ರರಂಗದವರೆಲ್ಲಾ ಒಂದು ಕುಟುಂಬ ಇದ್ದಂತೆ ಅಂತ ಶಿವರಾಜ್ ಕುಮಾರ್ ಹೇಳಿದರು. ಶಿವರಾಜ್ ಕುಮಾರ್ ನನಗೆ ದೊಡ್ಡಪ್ಪ, ಪುನೀತ್ ರಾಜ್ ಕುಮಾರ್ ನನಗೆ ಚಿಕ್ಕಪ್ಪ ಇದ್ದಂತೆ. ನೀವು ಯಾಕೆ ನನಗೆ ಮಾವ ಆಗ್ಬಾರ್ದು'' ಅಂತ ಕಿಚ್ಚ ಸುದೀಪ್ ಗೆ ಹೇಳಿದ ಮಹಾನುಭಾವ ಈ ಪ್ರಥಮ್.

ತಂದೆ-ತಾಯಿಗೆ ನಂಬಿಕೆ ಇರ್ಲಿಲ್ಲ.!

ಸೆಲೆಬ್ರಿಟಿ ಅಲ್ಲದೇ ಇದ್ದರೂ, ಸೆಲೆಬ್ರಿಟಿಗಳಿಂದ ವಿಡಿಯೋ ಬೈಟ್ಸ್ ತಂದ ಪ್ರಥಮ್ 'ಬಿಗ್ ಬಾಸ್' ಸ್ಪರ್ಧಿ ಅಂದ್ರೆ, ಸ್ವತಃ ಪ್ರಥಮ್ ತಂದೆ-ತಾಯಿಗೆ ನಂಬಿಕೆ ಬರಲಿಲ್ಲ. 'ಬಿಗ್ ಬಾಸ್ ಗ್ರ್ಯಾಂಡ್ ಓಪನ್ನಿಂಗ್' ಶೂಟಿಂಗ್ ಗೆ ಬಂದಾಗಲೇ ಅವರಿಗೆ ಸರ್ ಪ್ರೈಸ್ ಮತ್ತೆ ಶಾಕ್...ಎರಡೂ ಒಟ್ಟೊಟ್ಟಿಗೆ ಆಗಿದೆ.

'ಬಿಗ್ ಬಾಸ್' ಮನೆಯ ಟಿ.ಆರ್.ಪಿ ಕಾ ಮಾಮ್ಲ ಪ್ರಥಮ್.!

ಪ್ರಥಮ್ ಪಿಟೀಲು ಕೇಳಿ ಕೇಳಿ 'ಬಿಗ್ ಬಾಸ್' ಸ್ಪರ್ಧಿಗಳ ತಲೆ ಕೆಟ್ಟು ತಂಗಳಿಟ್ಟು ಆಗಿರಬಹುದು. ಆದ್ರೆ, ಪ್ರಥಮ್ ರಿಂದ 'ಬಿಗ್ ಬಾಸ್ ಕನ್ನಡ-4'ಗೆ ಟಿ.ಆರ್.ಪಿ ಬರ್ತಿರೋದು ಮಾತ್ರ ಸುಳ್ಳಲ್ಲ.

English summary
'Olle Huduga' Pratham is Sandalwood Sensation now. But who is Pratham? What is his background? Read the article to know the life story of a Director Pratham.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X