»   » 'ಈಶ್ವರ್ ಗೌಡ'ಗೆ ಜಗ್ಗೇಶ್ ಅಂತ ನಾಮಕರಣ ಮಾಡಿದ್ದು ಯಾರು.?

'ಈಶ್ವರ್ ಗೌಡ'ಗೆ ಜಗ್ಗೇಶ್ ಅಂತ ನಾಮಕರಣ ಮಾಡಿದ್ದು ಯಾರು.?

Posted By:
Subscribe to Filmibeat Kannada

ಮೂರ್ನಾಲ್ಕು ದಶಕಗಳಿಂದ ಕನ್ನಡ ಚಿತ್ರರಂಗದಲ್ಲಿ ಜಗ್ಗೇಶ್ ಎಂಬ ನಾಮಾಂಕಿತದಿಂದ ಜನಪ್ರಿಯರಾಗಿರುವ 'ನವರಸ ನಾಯಕ'ನ ನಿಜನಾಮ ಈಶ್ವರ್ ಗೌಡ.

ಬೆಂಗಳೂರಿನ ಶ್ರೀರಾಂಪುರದಲ್ಲಿ ಹುಟ್ಟಿ ಬೆಳೆದ 'ಈಶ್ವರ್ ಗೌಡ'ಗೆ ಜಗ್ಗೇಶ್ ಅಂತ ನಾಮಕರಣ ಮಾಡಿದ್ದು ಅವರ ತಾತ. ಹೀಗಂತ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಜಗ್ಗೇಶ್ ಬಹಿರಂಗ ಪಡಿಸಿದರು.['ದಾರಿ ತಪ್ಪಿದ ಮಗ' ಜಗ್ಗೇಶ್ ಗೆ ಅಮ್ಮ ನಂಜಮ್ಮ ಬುದ್ಧಿ ಕಲಿಸಿದ್ದು ಹೇಗೆ?]

Who named Eshwar Gowda as Jaggesh.?

''ನನ್ನ ತಾತ ನನಗೆ ಫೇವರಿಟ್. ಯಾವಾಗಲೂ ಅವರ ಬಾಯಲ್ಲಿ ಬರುತ್ತಿದ್ದ ಒಂದು ಮಾತು ಏನು ಅಂದ್ರೆ... 'ಈಶ್ವರ ಒಳ್ಳೆಯವನೇ... ಆದ್ರೆ ಅವನು ಜಗತ್ತಿಗೆಲ್ಲ ಒಡೆಯನಾಗಬೇಕು, ಜಗ್ಗೇಶನಾಗಬೇಕು' ಅಂತ ಹೇಳ್ತಿದ್ರು. ನನಗೆ ಜಗ್ಗೇಶ್ ಅಂತ ನಾಮಕರಣ ಮಾಡಿದ್ದೇ ನಮ್ಮ ತಾತ'' ಎಂದು 'ವೀಕೆಂಡ್ ವಿತ್ ರಮೇಶ್-3' ಶೋನಲ್ಲಿ ಜಗ್ಗೇಶ್ ಹೇಳಿದರು.[ಕಲಾಕುಂಚದಲ್ಲಿ ಅರಳಿತ್ತು ಜಗ್ಗೇಶ್ ತಾಯಿಯ ಬಹುದೊಡ್ಡ ಕನಸು]

ತಾತನ ಬಯಕೆಯಂತೆ ಇಂದು ಕರುನಾಡ ಜಗತ್ತಿನ ಕಲಾಭಿಮಾನಿಗಳ ಹೃದಯ ಸಿಂಹಾಸನದ ಒಡೆಯನಾಗಿದ್ದಾರೆ ನಟ ಜಗ್ಗೇಶ್. ಸಾಧನೆ ಅಂದ್ರೆ ಇದೇ ಅಲ್ಲವೇ.!

English summary
Kannada Actor Jaggesh's grandfather was the one who named his as Jaggesh. His original name was Eshwar Gowda.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada