For Quick Alerts
  ALLOW NOTIFICATIONS  
  For Daily Alerts

  'ಬಿಗ್ ಬಾಸ್' ಯಾರಿಗೆ ಶನಿಬಲ, ಯಾರಿಗೆ ಗುರುಬಲ?

  By Rajendra
  |

  ಇನ್ನೊಂದು ವಾರ ಬಂದೇ ಬಿಟ್ಟಿದೆ. ಸುವರ್ಣ ವಾಹಿನಿಯ 'ಬಿಗ್ ಬಾಸ್' ಕಾರ್ಯಕ್ರಮ ಐದನೇ ವಾರಕ್ಕೆ ಅಡಿಯಿಟ್ಟಿದೆ. ಒಂದೊಂದು ವಾರಕ್ಕೆ ಒಬ್ಬೊಬ್ಬರು ಮನೆಯಿಂದ ಹೊರಬೀಳುತ್ತಿದ್ದಾರೆ. ಈ ವಾರ ಮನೆಯಿಂದ ಹೊರ ಬೀಳುತ್ತಾರೆ? ಯಾರಿಗೆ ಗುರುಬಲ ಯಾರಿಗೆ ಶನಿಬಲ ಇದೆ.

  ಇನ್ನೊಂದು ಕಡೆ ಮನೆಗೆ ಹೊಸ ಅತಿಥಿಯ ಆಗಮನವೂ ಆಗಿದೆ. ನಿರ್ದೇಶಕ ಗುರು ಪ್ರಸಾದ್ ಅವರು ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಬಿಗ್ ಬಾಸ್ ಮನೆಗೆ ಬಲಗಾಲಿಟ್ಟು ಒಳ ಬಂದಿದ್ದಾರೆ. 'ಬಿಗ್ ಬಾಸ್'ಗೆ ತಗ್ಗಿಬಗ್ಗಿ ನಡೆಯುತ್ತಿದ್ದವರೆಲ್ಲಾ ಈಗ ಗುರು ಪ್ರಸಾದ್ ಅವರನ್ನು ನೋಡಿ ಮಿಕಮಿಕ ಎಂದು ಕಣ್ಣುಬಿಡುತ್ತಿದ್ದಾರೆ.

  ಸತತ ನಾಲ್ಕು ವಾರಗಳಿಂದ ನಾಮಿನೇಟ್ ಆಗಿಯೂ ಮನೆಯಲ್ಲೇ ಉಳಿಯುವ ಮೂಲಕ ಆರ್ ಜೆ ರೋಹಿತ್ ಪಟೇಲ್ ಅವರು ಹೊಸ ದಾಖಲೆ ನಿರ್ಮಿಸಿದ್ದಾರೆ. ಈ ವಾರ ಅವರು ಕ್ಯಾಪ್ಟನ್ ಆದ ಕಾರಣ ನಾಮಿನೇಟ್ ಆಗದೆ ಬಚಾವ್ ಆದರು.

  ಈ ವಾರ ನಾಮಿನೇಟ್ ಆದವರು

  ಈ ವಾರ ನಾಮಿನೇಟ್ ಆದವರು

  ಈ ವಾರ ಬಿಗ್ ಬಾಸ್ ಮನೆಯಲ್ಲಿರುವ ಪ್ರಬಲ ಅಭ್ಯರ್ಥಿಗಳು ನಾಮಿನೇಟ್ ಆಗಿದ್ದಾರೆ. ಆದಿ ಲೋಕೇಶ್, ನೀತೂ ಶೆಟ್ಟಿ, ಅನುಪಮಾ, ಸಂತೋಷ್, ಸೃಜನ್ ಲೋಕೇಶ್, ಶ್ವೇತಾ ಚೆಂಗಪ್ಪ ಈ ಬಾರಿ ನಾಮಿನೇಟ್ ಆದ ಸದಸ್ಯರು.

  ಈ ಬಾರಿ ಕಾಂಪಿಟೇಷನ್ ತುಂಬಾ ಟಫ್

  ಈ ಬಾರಿ ಕಾಂಪಿಟೇಷನ್ ತುಂಬಾ ಟಫ್

  ಈ ಬಾರಿ ಕಾಂಪಿಟೇಷನ್ ತುಂಬಾ ಟಫ್ ಆಗಿರುವ ಕಾರಣ ಮನೆಯಲ್ಲಿ ಯಾರು ಉಳಿಯುತ್ತಾರೆ ಯಾರು ಹೋಗುತ್ತಾರೆ ಎಂಬ ಕುತೂಹಲ ಕಿರುತೆರೆ ವೀಕ್ಷಕರಲ್ಲಿ ಇದ್ದೇ ಇದೆ. ಶನಿವಾರ ರಾತ್ರಿ (ಆಗಸ್ಟ್ 2) ಸಮಯ ರಾತ್ರಿ 8ಕ್ಕೆ 'ಕಿಚ್ಚಿನ ಕಥೆ ಕಿಚ್ಚನ ಜೊತೆ'ಯಲ್ಲಿ ಮನೆಯಿಂದ ಯಾರಿಗೆ ಗೇಟ್ ಪಾಸ್ ಸಿಗಲಿದೆ ಎಂಬುದು ಗೊತ್ತಾಗಲಿದೆ.

  ಆದಿ ಲೋಕೇಶ್ ಮನೆಯಿಂದ ಹೊರಬೀಳ್ತಾರಾ?

  ಆದಿ ಲೋಕೇಶ್ ಮನೆಯಿಂದ ಹೊರಬೀಳ್ತಾರಾ?

  ಆದಿ ಲೋಕೇಶ್ ಅವರು ಸದಾ ಒಂದಿಲ್ಲೊಂದು ರಹಸ್ಯಗಳನ್ನು ಬಾಯಿಬಿಡುತ್ತಾ, ವಾಹಿನಿಗೆ ಟಿಆರ್ ಪಿಯನ್ನು ತಂದುಕೊಡುವಲ್ಲಿ ಅವರ ಪಾತ್ರ ಗಣನೀಯ ಎಂದು ಹೇಳಬಹುದು. ಅವರು ಈ ಬಾರಿ ಮನೆಯಲ್ಲಿ ಉಳಿದುಕೊಳ್ಳುವ ಚಾನ್ಸಸ್ ಅಧಿಕವಾಗಿವೆ.

  ನೀತೂ ಶೆಟ್ಟಿ ಆಟ ಇನ್ನೂ ನಡೆಯುತ್ತಾ?

  ನೀತೂ ಶೆಟ್ಟಿ ಆಟ ಇನ್ನೂ ನಡೆಯುತ್ತಾ?

  ಇನ್ನು ನೀತೂ ಸಹ ಅಷ್ಟೇ ಆದಿಗೆ ಉತ್ತಮ ಗೆಳತಿ. ಇತ್ತೀಚೆಗೆ ಗುರು ಪ್ರಸಾದ್ ಇವರಿಬ್ಬರ ಬಾಂಧವ್ಯದ ಬಗ್ಗೆ ಕೇಳಿದ್ದಕ್ಕೆ, "ನನ್ನನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿರುವ ವ್ಯಕ್ತಿ ಆದಿ" ಎಂದಿದ್ದರು ನೀತೂ. ಒಂದು ವೇಳೆ ನೀತೂ ಮನೆಯಿಂದ ಹೋದರೆ ಆದಿ ಪರಿಸ್ಥಿತಿ ಶೋಚನೀಯ.

  ಅನುಪಮಾ ಭಟ್ ಕೈಹಿಡೀತಾರಾ ಬಿಗ್ ಬಾಸ್?

  ಅನುಪಮಾ ಭಟ್ ಕೈಹಿಡೀತಾರಾ ಬಿಗ್ ಬಾಸ್?

  ಅನುಪಮಾ ಭಟ್ ಅವರು ತನ್ನದೇ ಆದಂತಹ ಅಭಿಮಾನಿ ಬಳಗ ಇದೆ. ಒಂದು ವೇಳೆ ಅವರು ಕೈಹಿಡಿದರೆ ಈ ಬಾರಿ ಮನೆಯಲ್ಲಿ ಉಳಿದುಕೊಳ್ಳಬಹುದು.

  ಸಂತೋಷ್ ಆಟ ಬಂದ್ ಆಗಲಿದೆಯಾ?

  ಸಂತೋಷ್ ಆಟ ಬಂದ್ ಆಗಲಿದೆಯಾ?

  ಸಂತೋಷ್ ಅವರೂ ಅಷ್ಟೇ ಬಿಗ್ ಬಾಸ್ ಗೆ ಸಿಕ್ಕಿರುವ ಒಳ್ಳೆಯ ಸದಸ್ಯ. ಎಲ್ಲರೊಂದಿಗೆ ಏನೋ ಒಂದು ಕೀಟಲೆ ಮಾಡುತ್ತಲೇ ಸದಾ ನಗುನಗುತ್ತಾ ಕಾಣುವ ಸಂತೋಷ್ ಮನೆಯಿಂದ ಹೊರಬೀಳುವುದು ಸ್ವಲ್ಪ ಡೌಟು.

  ಸೃಜನ್ ಲೋಕೇಶ್ ಕಥೆ ಏನಾಗುತ್ತದೆ?

  ಸೃಜನ್ ಲೋಕೇಶ್ ಕಥೆ ಏನಾಗುತ್ತದೆ?

  ಬಿಗ್ ಬಾಸ್ ಮನೆಯ ಪ್ರಬಲ ಸ್ಪರ್ಧಿಗಳಲ್ಲಿ ಒಬ್ಬರು ಸೃಜನ್ ಲೋಕೇಶ್. ಇವರು ಹೊರಬಿದ್ದರೆ ಬಿಗ್ ಬಾಸ್ ಆಟ ಅರ್ಧ ಮುಗಿದಂತೆ ಎಂಬುದು ವೀಕ್ಷಕರ ಅಭಿಪ್ರಾಯ. ಏನಾಗುತ್ತದೋ ಏನೋ ಯಾವೋನಿಗ್ ಗೊತ್ತು.

  ಶ್ವೇತಾ ಚೆಂಗಪ್ಪ ಈ ವಾರ ಮನೆಯಲ್ಲಿ ಇರ್ತಾರಾ?

  ಶ್ವೇತಾ ಚೆಂಗಪ್ಪ ಈ ವಾರ ಮನೆಯಲ್ಲಿ ಇರ್ತಾರಾ?

  ಬಿಗ್ ಬಾಸ್ ಹೇಳಿದಂತೆ ಶಿರಸಾವಹಿಸಿ ಕೆಲಸ ಮಾಡುತ್ತಿರುವ ಏಕೈಕ ಸದಸ್ಯೆ ಶ್ವೇತಾ ಚೆಂಗಪ್ಪ. ಬಿಗ್ ಬಾಸ್ ಕೈಯಲ್ಲಿ ಒಮ್ಮೆ ಶಹಬಾಸ್ ಎನ್ನಿಸಿಕೊಂಡಿರುವ ಶ್ವೇತಾ ಅವರಿಗೆ ವೀಕ್ಷಕರು ಕೈಹಿಡಿಯಲಿಲ್ಲ ಎಂದರೆ ಯಾರು ಏನು ಮಾಡಲು ಸಾಧ್ಯ?

  English summary
  This week six inmates are nominated for elimination in Bigg Boss Kannada 2 reality show. Aadhi Lokesh, Srujan Lokesh, Neethu Shetty, Anupama Bhat, Santhosh and Shweta Changappa are the nominated members of the house. Who will eliminate from BBK2 on 2nd August, 2014?

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X