For Quick Alerts
  ALLOW NOTIFICATIONS  
  For Daily Alerts

  ಈ ವಾರದ 'ಬಿಗ್ ಬಾಸ್' ಎಲಿಮಿನೇಷನ್: ವೀಕ್ಷಕರಿಗೆ ಭಾರಿ ಕನ್ ಫ್ಯೂಶನ್

  |
  Bigg Boss kannada 7 : Who might get eliminated this week ? | FILMIBEAT KANNADA

  ವೀಕೆಂಡ್ ಬಂತಂದ್ರೆ ಈಗ ಬಿಗ್ ಬಾಸ್ ಎಲಿಮಿನೇಷನ್ ಬಗ್ಗೆ ಚರ್ಚೆ ಸಾಮಾನ್ಯವಾಗಿದೆ. ಬಿಗ್ ಬಾಸ್ ನೋಡೋರು, ನೋಡದೆ ಇರೋರು ಕೂಡ 'ಅರೇ ಈ ವಾರ ಬಿಗ್ ಬಾಸ್ ಮನೆಯಿಂದ ಯಾರು ಎಲಿಮಿನೇಟ್ ಆದ್ರು' ಎಂಬ ಪ್ರಶ್ನೆ ಕೇಳುವಂತಾಗಿದೆ.

  ಈ ವಾರದ ಬಿಗ್ ಬಾಸ್ ಎಲಿಮಿನೇಷನ್ ಬಗ್ಗೆ ವೀಕ್ಷಕರಿಗೂ ಭಾರಿ ಕನ್ ಫ್ಯೂಶನ್ ಉಂಟಾಗಿದೆ. ಈ ವಾರ ದೊಡ್ಮನೆಯಿಂದ ಹೊರಹೋಗಲು ಒಟ್ಟು ಐದು ಜನ ನಾಮಿನೇಟ್ ಆಗಿದ್ದಾರೆ. ಈ ಐವರಲ್ಲಿ ಹೆಚ್ಚು ಕಡಿಮೆ ವೋಟಿಂಗ್ ಯಾರಿಗೆ ಸಿಕ್ಕಿರುತ್ತೆ ಅವರು ಶೋನಿಂದ ಹೊರಹೋಗ್ತಾರೆ.

  'ಬಿಗ್ ಬಾಸ್': ಅಚ್ಚರಿ ತಂದ ಈ ವಾರದ ನಾಮಿನೇಷನ್'ಬಿಗ್ ಬಾಸ್': ಅಚ್ಚರಿ ತಂದ ಈ ವಾರದ ನಾಮಿನೇಷನ್

  ಅಷ್ಟಕ್ಕೂ, ಈ ವಾರ ಟಾರ್ಗೆಟ್ ಆಗಿರುವ ಆ ಐದು ಜನ ಸ್ಪರ್ಧಿಗಳು ಯಾರು? ಯಾವ ನಾಲ್ಕು ಜನ ಉಳಿದುಕೊಳ್ಳುತ್ತಾರೆ? ಯಾರಿಗೆ ಈ ವಾರ ಗೇಟ್ ಪಾಸ್ ಸಿಗಲಿದೆ? ಮುಂದೆ ಓದಿ....

  ರಶ್ಮಿಗೆ ಅಳುವೇ ಮುಳುವಾಗುತ್ತಾ?

  ರಶ್ಮಿಗೆ ಅಳುವೇ ಮುಳುವಾಗುತ್ತಾ?

  ದುನಿಯಾ ರಶ್ಮಿ ಅವರಿಗೆ ಮೂಗು ತುದಿಯಲ್ಲಿ ಕೋಪ. ಯಾರಾದರೂ ತಮಾಷೆಗಾಗಿ ರೇಗಿಸಿದ್ರು ಅಥವಾ ಕಾಲೆಳೆದ್ರು ಥಟ್ ಕೋಪ ಮಾಡಿಕೊಳ್ಳುತ್ತಾರೆ. ಜೊತೆಗೆ ಹೆಚ್ಚು ಅಳುತ್ತಾರೆ ಎಂಬ ಅಭಿಪ್ರಾಯ ರಶ್ಮಿ ಮೇಲಿದೆ. ರಶ್ಮಿ ಈ ಮನೆಗೆ ಅರ್ಹವಲ್ಲ, ಸೋ ರಶ್ಮಿ ಹೋಗಲಿ ಎನ್ನುವವರು ಇದ್ದಾರೆ.

  ಓಹ್.. ವಾಸುಕಿ ವೈಭವ್ ಮದುವೆ ಆಗುವ ಹುಡುಗಿ ಭೂಮಿ ಶೆಟ್ಟಿ ತರಹ ಇರ್ಬೇಕು.!ಓಹ್.. ವಾಸುಕಿ ವೈಭವ್ ಮದುವೆ ಆಗುವ ಹುಡುಗಿ ಭೂಮಿ ಶೆಟ್ಟಿ ತರಹ ಇರ್ಬೇಕು.!

  ವಾಸುಕಿ ವೈಭವ್ ಗುಂಪುಗಾರಿಕೆ ಆರೋಪ

  ವಾಸುಕಿ ವೈಭವ್ ಗುಂಪುಗಾರಿಕೆ ಆರೋಪ

  ಕಳೆದ ವಾರ ಎಲಿಮಿನೇಟ್ ಆದ ಚೈತ್ರಾ ವಾಸುದೇವನ್ ಅವರು ನೇರವಾಗಿ ನಾಮಿನೇಟ್ ಮಾಡಿದ ಕಾರಣ, ಗಾಯಕ, ಸಂಗೀತ ನಿರ್ದೇಶಕ ವಾಸುಕಿ ವೈಭವ್ ಟಾರ್ಗೆಟ್ ಆಗಿದ್ದರು. ರಾಜನಾಗಿ ಸ್ವಂತ ನಿರ್ಧಾರ ತೆಗೆದುಕೊಂಡಿಲ್ಲ, ಶೈನ್ ಶೆಟ್ಟಿ, ಚಂದನಾ ಜೊತೆ ಗುಂಪುಗಾರಿಕೆ ಮಾಡ್ತಾರೆ ಎಂಬ ಅಭಿಪ್ರಾಯವೂ ವೀಕ್ಷಕರಲ್ಲಿದೆ. ವಾಸುಕಿ ಹೋಗಲಿ ಎಂದು ಕೆಲವರು ಹೇಳುತ್ತಿದ್ದಾರೆ.

  ಸೆಲೆಬ್ರಿಟಿ ಸ್ಪರ್ಧಿಗಳಿಗೆ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿ ಯಾವುದು ಅಂತ್ಲೇ ಗೊತ್ತಿಲ್ಲ.!ಸೆಲೆಬ್ರಿಟಿ ಸ್ಪರ್ಧಿಗಳಿಗೆ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿ ಯಾವುದು ಅಂತ್ಲೇ ಗೊತ್ತಿಲ್ಲ.!

  ಚಂದನ್ ಆಚಾರ್ ಹೋಗಬಹುದಾ?

  ಚಂದನ್ ಆಚಾರ್ ಹೋಗಬಹುದಾ?

  ಬಿಗ್ ಬಾಸ್ ಮನೆಯೊಳಗಿನ ಬಹುತೇಕ ಸದಸ್ಯರಿಂದ ಟಾರ್ಗೆಟ್ ಆಗಿರುವ ಚಂದನ್ ಆಚಾರ್, ಬಿಗ್ ಮನೆಯಿಂದ ಹೊರ ಹೋಗಲಿ ಎಂಬ ಅಭಿಪ್ರಾಯವೂ ವೀಕ್ಷಕರಲ್ಲಿದೆ.

  ಶೈನ್ ಶೆಟ್ಟಿ ಜೊತೆ ಚಂದನ್ ಆಚಾರ್ ಬೇಳೆ 'ಕಿರಿಕ್'.!ಶೈನ್ ಶೆಟ್ಟಿ ಜೊತೆ ಚಂದನ್ ಆಚಾರ್ ಬೇಳೆ 'ಕಿರಿಕ್'.!

  ರಾಜು ತಾಳಿಕೋಟೆ ಸಾಧ್ಯತೆ

  ರಾಜು ತಾಳಿಕೋಟೆ ಸಾಧ್ಯತೆ

  ಹಾಗ್ನೋಡಿದ್ರೆ, ಹಾಸ್ಯನಟ ರಾಜುತಾಳಿಕೋಟೆ ಅವರಿಗೂ ಈ ವಾರ ಕೊನೆಯಾಗಬಹುದು. ಆದರೂ ಅಚ್ಚರಿ ಇಲ್ಲ ಎಂಬ ಅಭಿಪ್ರಾಯ ವೀಕ್ಷಕರ ವಲಯದಲ್ಲಿದೆ. ಮನೆಯೊಳಗೆ ತಾಳಿಕೋಟೆ ಅವರು ಹೆಚ್ಚು ಕಾಣಿಸಿಕೊಳ್ಳುವುದಾಗಲಿ ಅಥವಾ ಮನರಂಜನೆಯಾಗಲಿ ಸಿಗುತ್ತಿಲ್ಲ ಎಂಬ ಆರೋಪವೂ ಇದೆ.

  ಬೇಕು ಅಂತ ಜಗಳ ಮಾಡಿಸಿದ 'ಬಿಗ್ ಬಾಸ್' ಬುದ್ಧಿವಂತಿಕೆ ಮೆಚ್ಚಬೇಕು.!

  ಪ್ರಿಯಾಂಕಾ ಡೌಟ್.!

  ಪ್ರಿಯಾಂಕಾ ಡೌಟ್.!

  ಸದ್ಯದ ಪರಿಸ್ಥಿತಿ ನೋಡಿದ್ರೆ ಬಿಗ್ ಬಾಸ್ ಮನೆಯಲ್ಲಿ ಪ್ರಿಯಾಂಕಾ ಹೆಚ್ಚು ಸದ್ದು ಮಾಡ್ತಿದ್ದಾರೆ. ಹಾಗಾಗಿ, ಅವರು ಎಲಿಮಿನೇಟ್ ಆಗುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ. ಆದರೂ, ಪ್ರಿಯಾಂಕಾ ಹೊರಗೆ ಹೋಗಲಿ ಎನ್ನುವ ಪ್ರೇಕ್ಷಕರ ಸಂಖ್ಯೆಯೂ ಹೆಚ್ಚಿದೆ. ಈ ಐವರ ಪೈಕಿ ಈ ವಾರ ಯಾರಿಗೆ ಗೇಟ್ ಪಾಸ್ ಸಿಗಬಹುದು? ಕಾಮೆಂಟ್ ಮಾಡಿ ತಿಳಿಸಿ.

  English summary
  Bigg Boss Kannada 7 - Priyanka, Chandan Aachar, Raju Talikote, Vasuki Vaibhav and Duniya Rashmi who will eliminate in third week?

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X