For Quick Alerts
  ALLOW NOTIFICATIONS  
  For Daily Alerts

  ಇಂದು 'ಬಿಗ್ ಬಾಸ್' ಟ್ರೋಫಿ ಎತ್ತಿ ಹಿಡಿಯುವುದು ಕಾಮನ್ ಮ್ಯಾನ್ ನಾ.? ಸೆಲೆಬ್ರಿಟಿನಾ.?

  By Harshitha
  |

  'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದ ಗ್ರ್ಯಾಂಡ್ ಫಿನಾಲೆ ಇಂದು ಸಂಜೆ 7 ಗಂಟೆಯಿಂದ ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರ ಆಗಲಿದೆ. ಸದ್ಯ 'ಬಿಗ್ ಬಾಸ್' ಮನೆಯಲ್ಲಿ ಉಳಿದಿರುವವರ ಸಂಖ್ಯೆ 3.

  ಟಾಪ್ 3 ಹಂತ ತಲುಪಿರುವವರು ಚಂದನ್ ಶೆಟ್ಟಿ, ಜಯರಾಂ ಕಾರ್ತಿಕ್ ಹಾಗೂ ದಿವಾಕರ್. ಈ ಮೂವರ ಪೈಕಿ ಚಂದನ್ ಶೆಟ್ಟಿ ಹಾಗೂ ಜಯರಾಂ ಕಾರ್ತಿಕ್ ಸೆಲೆಬ್ರಿಟಿ ಸ್ಪರ್ಧಿಗಳು. ಸೇಲ್ಸ್ ಮ್ಯಾನ್ ದಿವಾಕರ್ ಮಾತ್ರ ಜನಸಾಮಾನ್ಯ ಸ್ಪರ್ಧಿ.

  'ಬಿಗ್ ಬಾಸ್' ಮನೆಯೊಳಗೆ 'ಜನಸಾಮಾನ್ಯ'ರಿಗೆ ಪ್ರವೇಶ ನೀಡಿರುವುದು ಇದೇ ಆವೃತ್ತಿಯಲ್ಲಿ. ಹೀಗಾಗಿ, ಈ ಬಾರಿ ಜನಸಾಮಾನ್ಯನಿಗೆ 'ಬಿಗ್ ಬಾಸ್' ವಿಜೇತ ಪಟ್ಟ ಒಲಿಯುತ್ತಾ.? ಎಂಬ ಕುತೂಹಲ ವೀಕ್ಷಕರಲ್ಲಿ ಇದೆ.

  ವೃತ್ತಿಯಲ್ಲಿ ಸೇಲ್ಸ್ ಮ್ಯಾನ್ ಆಗಿರುವ ದಿವಾಕರ್ ಪ್ರತಿ ಬಾರಿ ನಾಮಿನೇಟ್ ಆದಾಗಲೂ ವೀಕ್ಷಕರು ಬೆಂಬಲ ನೀಡಿದ್ದರು. ಇದೀಗ ದಿವಾಕರ್ ಅವರನ್ನ ಗೆಲ್ಲಿಸುವುದಕ್ಕೂ ಅಷ್ಟೇ ಬೆಂಬಲ ಅವಶ್ಯಕ.

  ಹಾಗ್ನೋಡಿದ್ರೆ, ಸೆಲೆಬ್ರಿಟಿ ಸ್ಪರ್ಧಿಯಾಗಿ ಹೋಗಿದ್ದರೂ ಚಂದನ್ ಶೆಟ್ಟಿ 'ಜನಸಾಮಾನ್ಯ'ನಂತೆ 'ಜನಸಾಮಾನ್ಯ' ಸ್ಪರ್ಧಿಗಳ ಜೊತೆ ಇದ್ದರು. ಹೀಗಾಗಿ, ಚಂದನ್ ಶೆಟ್ಟಿ ಮೇಲೂ ವೀಕ್ಷಕರಿಗೆ ಹೆಚ್ಚು ಒಲವು ಇದೆ.

  ಮೊದಲು ಶ್ರುತಿ ನಂತರ ನಿವೇದಿತಾ: ಸದ್ಯ ಉಳಿದಿರೋದು ಮೂವರು ಮಾತ್ರ.!

  ಇನ್ನೂ ಸದಾ ನಗುನಗುತ್ತಾ ಇದ್ದ ಜಯರಾಂ ಕಾರ್ತಿಕ್ ಗೆ ಜೈ ಎನ್ನುವ ವೀಕ್ಷಕರು ಕೂಡ ಕಮ್ಮಿ ಏನಿಲ್ಲ.

  ಟ್ರೆಂಡ್ ಪ್ರಕಾರ ಹೋಗುವುದಾದರೆ, ಚಂದನ್ ಶೆಟ್ಟಿಗೆ ಹೆಚ್ಚು ಫ್ಯಾನ್ಸ್ ಇದ್ದಾರೆ. ಇಂದು ನಡೆಯುವ ಫಿನಾಲೆಯಲ್ಲಿ ಚಂದನ್ ಶೆಟ್ಟಿ ಗೆದ್ದರೂ ಆಶ್ಚರ್ಯ ಇಲ್ಲ. ಆದರೂ, ಟ್ರೋಫಿ ಎತ್ತಿ ಹಿಡಿಯುವುದು ಕಾಮನ್ ಮ್ಯಾನ್ ನಾ ಅಥವಾ ಸೆಲೆಬ್ರಿಟಿ ನಾ ಎಂಬ ಪ್ರಶ್ನೆ ಎಲ್ಲರ ತಲೆಯಲ್ಲಿ ಓಡುತ್ತಿರುವುದು ಸತ್ಯ.

  English summary
  Who will win Bigg Boss Kannada 5.? Common Man or Celebrity Contestant.? #BBK5 Grand Finale will telecast on Colors Super at 7 PM today (Jan 28th).

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X