'ಬಿಗ್ ಬಾಸ್' ಶೋ ಕಲರ್ಸ್ ಸೂಪರ್ ಗೆ ಶಿಫ್ಟ್ ಆಗಲು 2 ಬಲವಾದ ಕಾರಣ

By Bharath Kumar

Recommended Video

Why Bigg Boss Kannada 5 Shifted To Colors Super, Two Reasons | Filmibeat Kannada

'ಬಿಗ್ ಬಾಸ್ ಕನ್ನಡ 5' ಕಾರ್ಯಕ್ರಮ ಆರಂಭಕ್ಕೆ ಕೆಲವೇ ದಿನಗಳು ಮಾತ್ರ ಬಾಕಿಯಿದೆ. ನಿರೀಕ್ಷೆಯಂತೆ ಈ ಬಾರಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಬಿಗ್ ಬಾಸ್ ಆರಂಭವಾಗಬೇಕಿತ್ತು. ಆದ್ರೆ, 5ನೇ ಆವೃತ್ತಿಯನ್ನ ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರ ಮಾಡಲು ನಿರ್ಧರಿಸಲಾಗಿದೆ.

ಕಲರ್ಸ್ ಕನ್ನಡ ವಾಹಿನಿಗೆ ಹೋಲಿಸಿಕೊಂಡ್ರೆ, ಸೂಪರ್ ಚಾನೆಲ್ ಹೊಸದು. ಟಿ.ಆರ್.ಪಿಯಲ್ಲೂ ಬೇರೆ ವಾಹಿನಿಗಳಿಗಿಂತ ಹಿಂದೆ ಇದೆ. ಹೀಗಿರುವಾಗ, 'ಬಿಗ್ ಬಾಸ್' ಎಂಬ ಟಾಪ್ ರೇಟಿಂಗ್ ಶೋ ಈ ವಾಹಿನಿಯಲ್ಲಿ ಪ್ರಸಾರ ಮಾಡುತ್ತಿದ್ದಾರೆ.

'ಬಿಗ್ ಬಾಸ್' ಅಯೋಜಕರ ಈ ನಿರ್ಧಾರದ ಹಿಂದೆ 2 ಬಲವಾದ ಕಾರಣವಿದೆ. ಅದನ್ನ ಸ್ವತಃ 'ಬಿಗ್ ಬಾಸ್' ಡೈರೆಕ್ಟರ್ ಪರಮೇಶ್ವರ ಗುಂಡ್ಕಲ್ ಅವರು 'ಫಿಲ್ಮಿಬೀಟ್ ಕನ್ನಡ' ಜೊತೆ ಹಂಚಿಕೊಂಡಿದ್ದಾರೆ. ಮುಂದೆ ಓದಿ.....

ಇದೊಂದು ಚಾಲೆಂಜಿಂಗ್ ನಿರ್ಧಾರ

ಇದೊಂದು ಚಾಲೆಂಜಿಂಗ್ ನಿರ್ಧಾರ

''ವಾರದ ದಿನಗಳಲ್ಲಿ ಕಲರ್ಸ್ ಕನ್ನಡ ನಂ.1 ಸ್ಥಾನದಲ್ಲಿದೆ. ವಾರಾಂತ್ಯದಲ್ಲಿ ಕೆಲವೊಮ್ಮೆ ನಂ.1 ಇರುತ್ತೆ, ಮತ್ತೆ ಕೆಲವೊಮ್ಮ ನಂ.2 ಇರುತ್ತೆ. ವೀಕೆಂಡ್ ನಲ್ಲಿ ಇನ್ನು ಫೈಟ್ ಮಾಡ್ತಿದ್ದೀವಿ. ಹೀಗಿರಬೇಕಾದ್ರೆ, ಕಲರ್ಸ್ ಸೂಪರ್ ಚಾನೆಲ್ ಅಂತಹ ಹೊಸ ವಾಹಿನಿಗೆ ಬಿಗ್ ಬಾಸ್ ಶಿಫ್ಟ್ ಮಾಡುತ್ತಿರುವುದು ನಿಜಕ್ಕೂ ಚಾಲೆಂಜ್. ಆದ್ರೆ, ಬಿಗ್ ಬಾಸ್ ಅಂತಹ ಕಾರ್ಯಕ್ರಮ ಹೊಸ ಚಾನೆಲ್ ಗೆ ಬೇಕಾಗುತ್ತೆ'' - ಪರಮೇಶ್ವರ ಗುಂಡ್ಕಲ್, ಬಿಗ್ ಬಾಸ್ ನಿರ್ದೇಶಕ

ಮೊದಲ ಕಾರಣ

ಮೊದಲ ಕಾರಣ

'ಬಿಗ್ ಬಾಸ್' ಮೂಲಕ ಸುಮಾರು ಒಂದು ವರ್ಷದ ಅನುಭವ ಹೊಂದಿರುವ ಕಲರ್ಸ್ ಸೂಪರ್ ವಾಹಿನಿಯನ್ನ ಮತ್ತಷ್ಟು ಜನರ ಹತ್ತಿರ ತೆಗೆದುಕೊಂಡು ಹೋಗುವ ಪ್ರಯತ್ನ. ಇದು ಬಿಸಿನೆಸ್ ದೃಷ್ಟಿಯಿಂದ ಹೊರತಾದ ನಿರ್ಧಾರ'' - ಪರಮೇಶ್ವರ ಗುಂಡ್ಕಲ್, ಬಿಗ್ ಬಾಸ್ ನಿರ್ದೇಶಕ

ಮುಖ್ಯವಾಹಿನಿಗೆ ತರಬೇಕು ಎನ್ನುವ ಗುರಿ

ಮುಖ್ಯವಾಹಿನಿಗೆ ತರಬೇಕು ಎನ್ನುವ ಗುರಿ

''ಬಿಗ್ ಬಾಸ್' ಕಾರ್ಯಕ್ರಮಕ್ಕೆ ದೊಡ್ಡ ವೀಕ್ಷಕರ ಬಳಗ ಇದೆ. ಅಂತಹ ದೊಡ್ಡ ಶೋ ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುವುದರಿಂದ ಈ ವಾಹಿನಿ ಮುಖ್ಯವಾಹಿನಿಗೆ ತರಬಹುದು ಎಂದು ಬಯಕೆ'' - ಪರಮೇಶ್ವರ ಗುಂಡ್ಕಲ್, ಬಿಗ್ ಬಾಸ್ ನಿರ್ದೇಶಕ

ಎರಡನೇ ಕಾರಣ

ಎರಡನೇ ಕಾರಣ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿಗಳು ಯಶಸ್ವಿಯಾಗಿ ಪ್ರದರ್ಶನವಾಗುತ್ತಿದೆ. 8 ಗಂಟೆಗೆ 'ಅಗ್ನಿಸಾಕ್ಷಿ' ಬರ್ತಿದೆ, 9 ಗಂಟೆಗೆ 'ರಾಧಾರಮಣ', ನಂತರ 'ಪದ್ಮಾವತಿ' ಎಲ್ಲವೂ ಸ್ಟ್ರಾಂಗ್ ಆಗಿದೆ. 10 ಗಂಟೆಗೆ ಮೇಲೆ 'ಬಿಗ್ ಬಾಸ್' ಲೇಟ್ ಆಗುತ್ತೆ. ಅದಕ್ಕೆ ಬೇಗನೇ ಕೊಡ್ಬೇಕು ಎನ್ನುವ ತೀರ್ಮಾನ ಮಾಡಿದ್ವಿ'' - ಪರಮೇಶ್ವರ ಗುಂಡ್ಕಲ್, ಬಿಗ್ ಬಾಸ್ ನಿರ್ದೇಶಕ

ಧಾರಾವಾಹಿಗಳಿಗೆ ಸಮಸ್ಯೆ ಆಗಬಾರದು

ಧಾರಾವಾಹಿಗಳಿಗೆ ಸಮಸ್ಯೆ ಆಗಬಾರದು

ಪ್ರೈಮ್ ಟೈಮ್ ನಲ್ಲಿ ಪ್ರಸಾರವಾಗುತ್ತಿರುವ ಎಲ್ಲಾ ಧಾರಾವಾಹಿಗಳು ಚೆನ್ನಾಗಿ ಪ್ರದರ್ಶನವಾಗುತ್ತಿದೆ. ಬಿಗ್ ಬಾಸ್ ಕಲರ್ಸ್ ಕನ್ನಡದಲ್ಲಿ ಪ್ರಸಾರ ಮಾಡುವುದರಿಂದ ಆ ಧಾರಾವಾಹಿಗಳಿಗೆ ಸಮಸ್ಯೆಯಾಗಬಹುದು ಎಂಬ ಯೋಚನೆಯೂ ಸಹ ಇದೆ. ಹಾಗಾಗಿ, ಧಾರಾವಾಹಿಗಳಿಗೂ ತೊಂದರೆಯಾಗಬಾರದು, ಸೂಪರ್ ಚಾನೆಲ್ ಗೂ ಸಹಕಾರಿಯಾಗಬೇಕು ಎನ್ನುವುದು ಇದರ ಹಿಂದಿನ ಸತ್ಯವಾಗಿದೆ.

More from Filmibeat

English summary
Bigg Boss Director Parameshwar Gundkal gives 2 reasons as to why Bigg Boss Kannada 5 reality show shifted to Colors Super Channel.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X