»   » ಬಿಗ್ ಬಾಸ್ ನಿಂದ 'ಜಂಗಲ್ ಜಾಕಿ' ಹೊರಬಿದ್ದಿದ್ದೇಕೆ?

ಬಿಗ್ ಬಾಸ್ ನಿಂದ 'ಜಂಗಲ್ ಜಾಕಿ' ಹೊರಬಿದ್ದಿದ್ದೇಕೆ?

Posted By:
Subscribe to Filmibeat Kannada

ಜಂಗಲ್ ಜಾಕಿ, ಲವ್ ಈಸ್ ಪಾಯಿಸನ್ ಹಾಗೂ ಹಳ್ಳಿ ಹೈದ ಪ್ಯಾಟೆಗೆ ಬಂದ ರಿಯಾಲಿಟಿ ಶೋ ವಿನ್ನರ್ ರಾಜೇಶ್ ಈಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಈತ ಮಾನಸಿಕ ವಾಗಿ ಅಸ್ವಸ್ಥನಾಗಿದ್ದಾನೆ ಎಂಬ ಕಾರಣಕ್ಕೆ ಹಾಗೂ ಈಟಿವಿ ಕನ್ನಡ ವಾಹಿನಿಯ ಬಿಗ್ ಬಾಸ್ ರಿಯಾಲಿಟಿ ಶೋಗೂ ಚಾನ್ಸ್ ಸಿಕ್ಕಿತ್ತು ಎಂಬ ಮತ್ತೊಂದು ಕಾರಣ.

ಬಿಗ್ ಬಾಸ್ ರಿಯಾಲಿಟಿ ಶೋನ 13ನೇ ಸ್ಪರ್ಧಿಯಾಗಿ ರಾಜೇಶ್ ಆಯ್ಕೆಯಾಗಿದ್ದ. ಚಿತ್ರೀಕರಣ ಹಂತದಲ್ಲಿರುವ 'ಲವ್ ಈಸ್ ಪಾಯಿಸನ್' ಚಿತ್ರ ಅರ್ಧಕ್ಕೆ ನಿಂತುಹೋದ ಕಾರಣ ರಾಜೇಶ್ ಕೆಲಸವಿಲ್ಲದಂತಾಗಿದ್ದ. ಇದೇ ಸಂದರ್ಭದಲ್ಲಿ ಆತನಿಗೆ ಬಿಗ್ ಬಾಸ್ ಅವಕಾಶ ಹುಡುಕಿಕೊಂಡು ಬಂದಿದೆ.

Actor Rajesh

ಚಾನ್ಸ್ ಏನೋ ಸಿಕ್ಕಿತು ಆದರೆ ರಾಜೇಶ್ ಕೊನೆಯ ಘಳಿಗೆಯಲ್ಲಿ ಅವಕಾಶದಿಂದ ವಂಚಿತವಾಗಿದ್ದಾರೆ. ಇದಕ್ಕೆ ಕಾರಣ ಸ್ಪಷ್ಟವಾಗಿ ಗೊತ್ತಿಲ್ಲದಿದ್ದರೂ ನಂಬಲರ್ಹ ಮೂಲಗಳ ಪ್ರಕಾರ ಬಿಗ್ ಬಾಸ್ ಮನೆಯಲ್ಲಿ ಈತ ವಾಹಿನಿಯ ಕ್ಯಾಮೆರಾಮೆನ್ ಮೇಲೆ ಕೈ ಮಾಡಿದ್ದ ಎಂಬ ಸಮಾಚಾರವಿದೆ.

ಈತನ ಮನಸ್ಥಿತಿ ಕಂಡ ಕಾರ್ಯಕ್ರಮ ನಿರ್ವಾಹಕರು ವಿಧಿಯಿಲ್ಲದೆ ಬಿಗ್ ಬಾಸ್ ಮನೆಯಿಂದ ಹೊರ ಕಳುಹಿಸಿದ್ದಾರೆ. ಅಂದರೆ ಕಾರ್ಯಕ್ರಮ ಶುರುವಾಗುವುದಕ್ಕೂ ಮುನ್ನ ಬಿಗ್ ಬಾಸ್ ನಿಂದ ಹೊರಬಿದ್ದಿದ್ದಾನೆ. ಒಂದು ವೇಳೆ ಚಾನ್ಸ್ ಸಿಕ್ಕಿದ್ದರೂ ಬಿಗ್ ಬಾಸ್ ಮನೆಯಲ್ಲಿ ರಾಜೇಶ್ ಬಹಳದಿನ ಇರುತ್ತಿರಲಿಲ್ಲ ಬಿಡಿ.

ಮಾನಸಿಕ ಅಸ್ವಸ್ಥನಾಗಿರುವ ರಾಜೇಶ್ ಸದ್ಯಕ್ಕೆ ಮೈಸೂರಿನ ಕೆ.ಆರ್. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಅತ್ತ ತಾನು ಅಭಿನಯಿಸುತ್ತಿರುವ ಚಿತ್ರ ಲವ್ ಈಸ್ ಪಾಯಿಸನ್ ಅರ್ಧಕ್ಕೆ ನಿಂತಿದ್ದು ಇತ್ತ ಬಿಗ್ ಬಾಸ್ ಅವಕಾಶ ತಾನೇ ಕಳೆದುಕೊಂಡು ಪರಿತಪಿಸುತ್ತಿದ್ದಾನೆ. ಇದೆಲ್ಲದರ ಪರಿಣಾಮ ಆತನ ಮಾನಸಿಕ ಅಸ್ವಸ್ಥತೆಗೆ ಕಾರಣವಾಗಿರಬಹುದು. (ಏಜೆನ್ಸೀಸ್)

English summary
'Jungle Jackie' fame actor Rajesh, who was the 13th contestant of Etv Kannada's Bigg Boss reality show, was thrown out of the programme after he allegedly beat up a cameraman of the channel telecasting the programme. The much-hyped Bigg Boss Kannada show stated from 24th March at 8 pm. 
Please Wait while comments are loading...