»   » ಹಿಂಗ್ಯಾಕಾತು ಯಾಕಿಂಗಾತು ಮಯೂರ್ ಪಟೇಲ್ರೇ?

ಹಿಂಗ್ಯಾಕಾತು ಯಾಕಿಂಗಾತು ಮಯೂರ್ ಪಟೇಲ್ರೇ?

By: ಉದಯರವಿ
Subscribe to Filmibeat Kannada

ಬಿಗ್ ಬಾಸ್ ಮನೆಯಲ್ಲಿ ತಾನಾಯಿತು ತನ್ನ ಕೆಲಸವಾಯಿತು ಎಂದು ತೆಪ್ಪಗೆ ಇರುತ್ತಿದ್ದ ನಟ ಮಯೂರ್ ಪಟೇಲ್ ಮನೆಯಿಂದ ಹೊರಬಿದ್ದಿದ್ದಾರೆ. ಅವರ ಪರಿಸ್ಥಿತಿ ನೋಡಿದರೆ ಅಯ್ಯೋ ಪಾಪ ಅನ್ನಿಸದೆ ಇರದು. ಹಿಂಗ್ಯಾಕಾತು ಯಾಕಿಂಗಾತು ಎಂದು ನೋಡಿದರೆ ಹಲವು ಆಸಕ್ತಿಕರ ಸಂಗತಿಗಳು ಗೊತ್ತಾಗುತ್ತವೆ.

ಕರ್ನಾಟಕದ ಎಲ್ಲಾ ಅಕ್ಕತಂಗಿಯರಿಗೆ, ಅಣ್ಣತಮ್ಮಂದಿರಿಗೆ ರಕ್ಷಾಬಂಧನದ ಶುಭಾಶಯಗಳನ್ನು ಹೇಳಿದ ಸುದೀಪ್ ತಮ್ಮ ಸಖತ್ ಸಂಡೇ ವಿತ್ ಸುದೀಪ್ ಕಾರ್ಯಕ್ರಮವನ್ನು ಆರಂಭಿಸಿದರು. ಗೊರಕೆ ಖ್ಯಾತಿಯ ಮಯೂರ್ ಪಟೇಲ್ ಮನೆಯಿಂದ ಈ ಬಾರಿ ಹೊರಬೀಳುತ್ತಾರೆ ಎಂದು ಬಹುತೇಕರಿಗೆ ಅನ್ನಿಸಿತ್ತು.

ಅದರಂತೆಯೇ ಅವರು ಮನೆಯಿಂದ ಹೊರಬಿದ್ದಿದ್ದಾರೆ. ಆರು ವಾರ ಮನೆಯಲ್ಲಿ ಇರುವುದು ತಮಾಷೆನೇ ಅಲ್ಲ ಎಂದು ಪಟೇಲ್ ಹೇಳಿದರು. ಯಾವುದು ಸರಿ ಯಾವು ತಪ್ಪು ಎಂಬುದನ್ನು ಒಂದು ಲೆವೆಲ್ ಗೆ ಕಲಿತಿದ್ದೇನೆ. ಎಮೋಷನ್ಸ್ ಗೆ ಇರುವ ಪ್ರಾಮುಖ್ಯತೆ ಇಲ್ಲಿ ಬಂದ ಮೇಲೆಯೇ ಚೆನ್ನಾಗಿ ಮನದಟ್ಟಾಗಿ ಎಂದರು.

ಅಂದರಿಕಿ ಮಂಚಿವಾಡು ಅನಂತರಾಮಯ್ಯ

ಯಾರೊಂದಿಗೂ ಏನೂ ಜಗಳವಾಡದೆ 'ಅಂದರಿಕಿ ಮಂಚಿವಾಡು ಅನಂತರಾಮಯ್ಯ' (ಎಲ್ಲರಿಗೂ ಒಳ್ಳೆಯವನು ಅನಂತರಾಯ್ಯ) ಎನ್ನಿಸಿಕೊಂಡು ಮನೆಯಲ್ಲಿ ಇದ್ದಾರೋ ಇಲ್ಲವೋ ಎಂಬಂತಿದ್ದ ಮಯೂರ್ ಹೊರಬಿದ್ದಿದ್ದಾರೆ. ಮಯೂರ್ ಹೆಚ್ಚಾಗಿ ಮಾತನಾಡುತ್ತಿರಲಿಲ್ಲ. ಇದ್ದಷ್ಟು ದಿನ ಗಾಸಿಪ್, ಗಾಳಿಸುದ್ದಿಗಳಿಂದ ದೂರ ಇದ್ದರು.

ಎಷ್ಟು ದಿನ ಇಟ್ಟುಕೊಳ್ಳಲು ಸಾಧ್ಯ?

ಒಂದೇ ಒಂದು ದಿನವೂ ತಮ್ಮ ಖಾಸಗಿ ವಿಚಾರಗಳನ್ನು ವೀಕ್ಷಕರೊಂದಿಗೆ ಹಂಚಿಕೊಳ್ಳಲಿಲ್ಲ. ಮನೆಯಲ್ಲಿ ಈ ರೀತಿ ಇರುವ ಸ್ಪರ್ಧಿಯನ್ನು ಎಷ್ಟು ದಿನ ಇಟ್ಟುಕೊಳ್ಳಲು ಸಾಧ್ಯ? ಕಡೆಗೆ ಮಯೂರ್ ಗೆ ಅಲ್ಲಿಂದ ಬಿಡುಗಡೆಭಾಗ್ಯ ಸಿಕ್ಕಿದೆ.

ಸದಾ ಮನೆಯಲ್ಲಿ ಗೊರಕೆ ಹೊಡೆಯುತ್ತಾ ನಿದ್ದೆ

ಸದಾ ಮನೆಯಲ್ಲಿ ಗೊರಕೆ ಹೊಡೆಯುತ್ತಾ ನಿದ್ದೆ ಹೊಡೆಯುತ್ತಿದ್ದರು ಮಯೂರ್. ಅವರೇ ಹೇಳಿದಂತೆ ಇದ್ದ ಆರು ವಾರದಲ್ಲಿ ಮೂರು ವಾರ ನಿದ್ದೆಗೆ ಸರಿಹೋಗಿದೆ. ಮನೆಯಲ್ಲಿ ಅವರಿಗೆ ಜಗದೇಕ ಮಲ್ಲ ಎಂಬ ಬಿರುದು ಸಿಕ್ಕಿತ್ತು.

ಪಟೇಲ್ ಸಿಕ್ಕಾಪಟ್ಟೆ ಸೆನ್ಸಿಟೀವ್

ಮಯೂರ್ ಪಟೇಲ್ ಸಿಕ್ಕಾಪಟ್ಟೆ ಸೆನ್ಸಿಟೀವ್ ಅನ್ನಿಸುತ್ತದೆ. ಸಖತ್ ಸಂಡೇ ವಿತ್ ಸುದೀಪ್ ಜೊತೆಗೆ ಅವರ ವಿಡಿಯೋ ಕ್ಲಿಪ್ಪಿಂಗ್ ಗಳನ್ನು ನೋಡಿ ಅವರು ತುಂಬಾ ಪರ್ಸನಲ್ ಆಗಿ ತೆಗೆದುಕೊಂಡಂತಿದ್ದರು. ಸುದೀಪ್ ಜೊತೆಗೂ ಸರಿಯಾಗಿ ಮಾತನಾಡಲಿಲ್ಲ.

ಅವರಿಗೂ ಕಷ್ಟ, ಬಿಗ್ ಬಾಸ್ ಗೂ ಕಷ್ಟವಾಗಿತ್ತು

ಕಡೆಗೆ ಸುದೀಪ್ ಅವರೇ ಸ್ವಲ್ಪ ಸುಧಾರಿಸಿಕೊಳ್ಳಿ, ನಗ್ರೀ ಎಂದು ಅವರ ಪಕ್ಕೆಗೆ ತಿವಿದರೂ ಬಲವಂತವಾಗಿ ನಗಲು ಪ್ರಯತ್ನಿಸಿದರು. ಒಟ್ಟಾರೆಯಾಗಿ ಅವರು ಮನೆಯಲ್ಲಿ ಇದ್ದಷ್ಟೂ ದಿನವೂ ನೀರಸ ಪ್ರದರ್ಶನ. ಅವರಿಗೂ ಕಷ್ಟ, ಬಿಗ್ ಬಾಸ್ ಗೂ ಕಷ್ಟವಾಗಿತ್ತು.

English summary
This week’s nomination for elimination included the fighting cat Shwetha, dally Mayur Patel and bubbly Anupama. On a surprise note this week Mayur Patel got eliminated. That’s why it is said that expect the unexpected in this dramatic house.
Please Wait while comments are loading...