For Quick Alerts
  ALLOW NOTIFICATIONS  
  For Daily Alerts

  'ಕಲಿ' ಚಿತ್ರ ನಿಂತು ಹೋಗಿದ್ಯಾಕೆ.? ಕಡೆಗೂ ಸತ್ಯ ಬಾಯ್ಬಿಟ್ಟ ಕಿಚ್ಚ ಸುದೀಪ್.!

  By Harshitha
  |

  ಎರಡು ವರ್ಷಗಳ ಹಿಂದೆ 'ಕಲಿ' ಚಿತ್ರದ ಮುಹೂರ್ತ ಸಮಾರಂಭ ಅದ್ಧೂರಿಯಾಗಿ ನೆರವೇರಿತ್ತು. ಆದ್ರೆ, 'ಕಲಿ' ಬದಲು ಕಿಚ್ಚ ಸುದೀಪ್ ಹಾಗೂ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಇದೀಗ 'ದಿ ವಿಲನ್' ಚಿತ್ರದಲ್ಲಿ ಒಟ್ಟಿಗೆ ಅಭಿನಯಿಸುತ್ತಿದ್ದಾರೆ.

  ಅದ್ಧೂರಿಯಾಗಿ ಮುಹೂರ್ತ ಮುಗಿಸಿದರೂ, 'ಕಲಿ' ಯಾಕೆ ಸೆಟ್ಟೇರಲಿಲ್ಲ.? 'ಕಲಿ' ಸಿನಿಮಾ ನಿಂತು ಹೋಯ್ತಾ.? ಎಂಬ ಅನುಮಾನ ಸಿನಿಪ್ರೇಮಿಗಳನ್ನು ಕಾಡುತ್ತಲೇ ಇತ್ತು.

  ''ಕಲಿ' ಸಿನಿಮಾ ನಿಂತು ಹೋಗಿಲ್ಲ. ಡಿಲೇ ಆಗಿದೆ ಅಷ್ಟೇ'' ಎಂದು ನಿರ್ಮಾಪಕ ಸಿ.ಆರ್.ಮನೋಹರ್ ಕೂಡ ಹೇಳಿದ್ದರು. ಆದ್ರೆ, ಇದೀಗ ಸುದೀಪ್ ಆಡಿರುವ ಮಾತುಗಳನ್ನು ಕೇಳಿದ್ಮೇಲೆ 'ಕಲಿ' ಪ್ರಾಜೆಕ್ಟ್ ಡ್ರಾಪ್ ಆಗಿರುವುದು ಪಕ್ಕಾ ಆಗಿದೆ. 'ಕಲಿ' ಚಿತ್ರವನ್ನ ಕೈಬಿಟ್ಮೇಲೆ 'ದಿ ವಿಲನ್' ಪ್ರಾಜೆಕ್ಟ್ ಗೆ ಪ್ರೇಮ್ ಜೈ ಎಂದಿದ್ದಾರೆ.

  ಅಷ್ಟಕ್ಕೂ, 'ಕಲಿ' ಡ್ರಾಪ್ ಆಗುವುದಕ್ಕೆ ಕಾರಣ ಏನು ಅನ್ನೋದನ್ನ 'ನಂ.1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮದಲ್ಲಿ ಸುದೀಪ್ ಬಾಯ್ಬಿಟ್ಟಿದ್ದಾರೆ. ಸಂಪೂರ್ಣ ಮಾಹಿತಿ ಫೋಟೋ ಸ್ಲೈಡ್ ಗಳಲ್ಲಿದೆ. ಓದಿರಿ...

  ನಂ.1 ಯಾರಿ ವಿತ್ ಶಿವಣ್ಣ ಕಾರ್ಯಕ್ರಮದಲ್ಲಿ ಪ್ರೇಮ್-ಸುದೀಪ್

  ನಂ.1 ಯಾರಿ ವಿತ್ ಶಿವಣ್ಣ ಕಾರ್ಯಕ್ರಮದಲ್ಲಿ ಪ್ರೇಮ್-ಸುದೀಪ್

  ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಿರೂಪಣೆಯಲ್ಲಿ ಮೂಡಿ ಬರುತ್ತಿರುವ 'ನಂ.1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮಕ್ಕೆ ಅತಿಥಿಗಳಾಗಿ ನಿರ್ದೇಶಕ ಪ್ರೇಮ್ ಹಾಗೂ ಕಿಚ್ಚ ಸುದೀಪ್ ಭಾಗವಹಿಸಿದ್ದರು. ಇದೇ ವೇಳೆ 'ಕಲಿ' ಚಿತ್ರದ ಬಗ್ಗೆ ಸುದೀಪ್ ಮಾತನಾಡಿದರು.

  ಶಾಕಿಂಗ್ ನ್ಯೂಸ್: ಶಿವಣ್ಣ - ಸುದೀಪ್ 'ಕಲಿ' ಸಿನಿಮಾ ನಿಂತುಹೋಯ್ತಾ.?ಶಾಕಿಂಗ್ ನ್ಯೂಸ್: ಶಿವಣ್ಣ - ಸುದೀಪ್ 'ಕಲಿ' ಸಿನಿಮಾ ನಿಂತುಹೋಯ್ತಾ.?

  ಪಾಸಿಟೀವ್ ಆಗಿರಲಿಲ್ಲ!

  ಪಾಸಿಟೀವ್ ಆಗಿರಲಿಲ್ಲ!

  ''ಪ್ರೇಮ್ ರವರ ಡ್ರೀಮ್ ಪ್ರಾಜೆಕ್ಟ್ 'ಕಲಿ'. ಈ ಚಿತ್ರದ ಮುಹೂರ್ತ ಮುಗಿದು ಮನೆಗೆ ಹೋದ್ಮೇಲೆ, ನನಗ್ಯಾಕೋ ಸರಿ ಎನಿಸಲಿಲ್ಲ. ಯಾವುದೋ ಒಂದು ಪಾಸಿಟೀವ್ ಆಗಿರಲಿಲ್ಲ'' - ಕಿಚ್ಚ ಸುದೀಪ್

  ಎಕ್ಸ್ ಕ್ಲೂಸಿವ್: 'ಕಲಿ' ಗಾಸಿಪ್ ಬಗ್ಗೆ ಮೌನ ಮುರಿದ ನಿರ್ಮಾಪಕ ಮನೋಹರ್ಎಕ್ಸ್ ಕ್ಲೂಸಿವ್: 'ಕಲಿ' ಗಾಸಿಪ್ ಬಗ್ಗೆ ಮೌನ ಮುರಿದ ನಿರ್ಮಾಪಕ ಮನೋಹರ್

  ಮಹಾಭಾರತದ ಆ ಒಂದು ಭಾಗ ಮುಟ್ಟಬೇಡಿ

  ಮಹಾಭಾರತದ ಆ ಒಂದು ಭಾಗ ಮುಟ್ಟಬೇಡಿ

  ''ಮಹಾಭಾರತ'ದ ಆ ಒಂದು ಭಾಗ ಮುಟ್ಟಬೇಡಿ, ಅದು ಸರಿ ಇಲ್ಲ. ಅದು ಪಾಸಿಟೀವ್ ಸ್ಕ್ರಿಪ್ಟ್ ಅಲ್ಲ ಅಂತ ತುಂಬಾ ಜನ ಹೇಳಿದರು. ಆದ್ರೆ, ಅದೇ ಪ್ರೇಮ್ ರವರ ಡ್ರೀಮ್ ಪ್ರಾಜೆಕ್ಟ್ ಆಗಿತ್ತು. ಹೀಗಾಗಿ ನಾನೇ ಪ್ರೇಮ್ ಜೊತೆಗೆ ಮಾತನಾಡಿದೆ'' - ಕಿಚ್ಚ ಸುದೀಪ್

  ಬೇರೆ ಸ್ಕ್ರಿಪ್ಟ್ ಮಾಡಿ

  ಬೇರೆ ಸ್ಕ್ರಿಪ್ಟ್ ಮಾಡಿ

  ''ಇಬ್ಬರೂ ಒಟ್ಟಿಗೆ ಸಿನಿಮಾ ಮಾಡಲು ಮುಂದೆ ಬಂದಿದ್ದೀರಾ. ಈಗ 'ಬೇಡ' ಅಂದ್ರೆ ಮಾರ್ಕೆಟ್ ನಲ್ಲಿ ಒಳ್ಳೆಯ ಮಾತುಗಳು ಕೇಳಿಬರಲ್ಲ'' ಅಂತ ಪ್ರೇಮ್ ಹೇಳಿದರು. ''ಮಾರ್ಕೆಟ್ ಬಗ್ಗೆ ತಲೆ ಕೆಡಿಸಿಕೊಳ್ಳುವುದು ಬೇಡ. ನಮ್ಮಿಬ್ಬರಿಗೆ ಇನ್ನೊಂದು ಸ್ಕ್ರಿಪ್ಟ್ ಮಾಡಿ. ಆದ್ರೆ 'ಕಲಿ' ಬೇಡ'' ಅಂತ ನಾನು ಹೇಳಿದೆ'' - ಕಿಚ್ಚ ಸುದೀಪ್

  ಹೊಸ ಸ್ಕ್ರಿಪ್ಟ್ ಮಾಡಿದ ಪ್ರೇಮ್

  ಹೊಸ ಸ್ಕ್ರಿಪ್ಟ್ ಮಾಡಿದ ಪ್ರೇಮ್

  ''ಅವತ್ತಿನ ನನ್ನ ಮಾತಿಗೆ ಸಿ.ಮನೋಹರ್ ಬೆಲೆ ಕೊಟ್ಟರು. ಅದಕ್ಕೆ ನಾನು ಅವರನ್ನ ಮೆಚ್ಚುತ್ತೇನೆ. ಅಷ್ಟೊಂದು ಬಂಡವಾಳ ಹಾಕಿದರೂ, ಬೇರೊಂದು ಸ್ಕ್ರಿಪ್ಟ್ ಮಾಡುವುದಕ್ಕೆ ಒಪ್ಪಿಗೆ ಕೊಟ್ಟರು. ಹೊಸ ಸ್ಕ್ರಿಪ್ಟ್ ಮಾಡಲು ಪ್ರೇಮ್ ಕೂಡ ಒಪ್ಪಿಕೊಂಡರು. 'ಕಲಿ' ಚಿತ್ರದಲ್ಲಿ ಇದ್ದ ಟೆಕ್ನಿಕಲ್ ಟೀಮ್, ಆಕ್ಟರ್ಸ್ ಯಾರೂ 'ದಿ ವಿಲನ್' ನಲ್ಲಿ ಬದಲಾಗಲಿಲ್ಲ. ಸ್ಕ್ರಿಪ್ಟ್ ಮಾತ್ರ ಬದಲಾಯಿತು. ಅದೊಂದು ಖುಷಿ ನನಗೆ'' - ಕಿಚ್ಚ ಸುದೀಪ್

  English summary
  Kannada Actor Kiccha Sudeep revealed as to why Kannada Film 'Kali' was dropped in 'No.1 Yari with Shivanna' program.
  Sunday, May 20, 2018, 13:20
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X