Just In
Don't Miss!
- Sports
ಗಾಬಾದಲ್ಲಿ ಕೋಟೆ ಬೇಧಿಸಿ ಆಸ್ಟ್ರೇಲಿಯಾ ವಿರುದ್ಧ ಐತಿಹಾಸಿಕ ಜಯ ಸಾಧಿಸಿದ ಟೀಮ್ ಇಂಡಿಯಾ
- News
ಬೆಂಗಳೂರು ಸಬ್ ಅರ್ಬನ್ ರೈಲು ಯೋಜನೆಗೆ ಪ್ರಧಾನಿ ಮೋದಿ ಶಂಕುಸ್ಥಾಪನೆ ಸಾಧ್ಯತೆ
- Automobiles
ಡೀಲರ್ ಬಳಿ ತಲುಪಿದ ಬಹುನಿರೀಕ್ಷಿತ ಟೊಯೊಟಾ ಫಾರ್ಚೂನರ್ ಫೇಸ್ಲಿಫ್ಟ್
- Lifestyle
ಶುದ್ಧ ದೇಸಿ ತುಪ್ಪದಲ್ಲಿದೆ ಸೌಂದರ್ಯವರ್ಧಕ ಗುಣಗಳು...
- Finance
34,000 ರುಪಾಯಿ ತನಕ ಕಾರುಗಳ ಬೆಲೆ ಏರಿಕೆ ಮಾಡಿದ ಮಾರುತಿ ಸುಜುಕಿ
- Education
Indian Forest Service Recruitment 2021: 70 ಡಿಐಜಿಎಫ್/ಎಐಜಿಎಫ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಬಿಗ್ ಬಾಸ್ ಕನ್ನಡ ಹೊಸ ಆವೃತ್ತಿ ಮತ್ತೆ ಮುಂದೂಡಿಕೆ ಅಂತೆ?
ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಹೊಸ ಆವೃತ್ತಿ ಯಾವಾಗ ಎಂಬ ಪ್ರಶ್ನೆ ಮತ್ತೊಮ್ಮೆ ಚರ್ಚೆಯಾಗುತ್ತಿದೆ. ಎಲ್ಲವೂ ಸರಿಯಾಗಿದ್ದರೆ ಕಳೆದ ವರ್ಷ ಬಿಗ್ ಬಾಸ್ ಕನ್ನಡ 8ನೇ ಆವೃತ್ತಿ ಆರಂಭವಾಗಬೇಕಿತ್ತು. ಆದರೆ, ಕೊರೊನಾ ವೈರಸ್ ಹಿನ್ನೆಲೆ ಕಳೆದ ವರ್ಷ ಶೋ ರದ್ದುಗೊಂಡಿತ್ತು.
ಕಳೆದ ವರ್ಷ ಬಿಗ್ ಬಾಸ್ ಇರಲಿಲ್ಲ, ಆದರೂ ಜನವರಿ ತಿಂಗಳಲ್ಲಿ ಹೊಸ ಆವೃತ್ತಿ ಪ್ರಾರಂಭಿಸಲಾಗುವುದು ಎಂದು ಬಿಗ್ ಬಾಸ್ ತಂಡದಿಂದ ಮಾಹಿತಿ ಸಿಕ್ಕಿತ್ತು. 2021ರಲ್ಲಿ ಎರಡು ಸಲ ಬಿಗ್ ಬಾಸ್ ನೋಡಬಹುದು ಎಂಬ ವಿಚಾರವೂ ಬಹಿರಂಗವಾಗಿತ್ತು. ಆದ್ರೀಗ, ಜನವರಿಯಲ್ಲೂ ಬಿಗ್ ಬಾಸ್ ಕನ್ನಡ ಆರಂಭವಾಗುವುದು ಸದ್ಯಕ್ಕೆ ಅನುಮಾನ ಎಂದು 'ಇ-ಟೈಮ್ಸ್' ವರದಿ ಮಾಡಿದೆ. ಮುಂದೆ ಓದಿ...

ಜನವರಿಯಲ್ಲಿ ಇರಲ್ಲ ಬಿಗ್ ಬಾಸ್!
ಕಲರ್ಸ್ ವಾಹಿನಿಯ ಮೂಲಗಳು ತಿಳಿಸಿರುವಂತೆ ''ಜನವರಿಯಲ್ಲಿ ಬಿಗ್ ಬಾಸ್ ಇರುವುದಿಲ್ಲ. ಬದಲಾಗಿ ಮಾರ್ಚ್ ಅಂತ್ಯದ ವೇಳೆ ಬಿಗ್ ಬಾಸ್ ಏಂಟನೇ ಆವೃತ್ತಿ ಶುರುವಾಗಬಹುದು. ಈ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಎಲ್ಲ ತಯಾರಿ ನಡೆಯುತ್ತಿದೆ. ಸ್ಪರ್ಧಿಗಳ ಆಯ್ಕೆ ಸಹ ಬಹುತೇಕ ಅಂತ್ಯವಾಗಿದೆ'' ಎಂದು ತಿಳಿದು ಬಂದಿದೆ.
ಈ ಬಾರಿ ಬಿಗ್‌ಬಾಸ್ ಮನೆಯಲ್ಲಿ ಯಾರಿರಲಿದ್ದಾರೆ? ಇಲ್ಲಿದೆ ಸಂಭಾವ್ಯ ಪಟ್ಟಿ

ಪ್ರೈಮ್ ಸಮಯದಲ್ಲಿ ಸ್ಲಾಟ್ ಸದ್ಯಕ್ಕಿಲ್ಲ
ಕಲರ್ಸ್ ಕನ್ನಡ ವಾಹಿನಿಯಲ್ಲಿ ಬಿಗ್ ಬಾಸ್ ಪ್ರಸಾರವಾಗಲಿದೆ. ಸದ್ಯಕ್ಕೆ ಪ್ರೈಮ್ ಸಮಯದಲ್ಲಿ ಬಿಗ್ ಬಾಸ್‌ಗೆ ಸ್ಲಾಟ್ ಇಲ್ಲ. ಮಜಾ ಭಾರತ ಮತ್ತು ಮಜಾ ಟಾಕೀಸ್ ಕಾರ್ಯಕ್ರಮಗಳು ನಡೆಯುತ್ತಿದೆ. ಬಿಗ್ ಬಾಸ್ ಆರಂಭವಾಗುತ್ತಿದ್ದಂತೆ ಈ ಶೋಗಳ ಸಮಯವೂ ಬದಲಾಗಲಿದೆ ಎಂದು ಹೇಳಲಾಗಿದೆ.

ಸುದೀಪ್ ಜೊತೆಗೆ ಚರ್ಚೆಯಾಗಿದೆ
ಬಿಗ್ ಬಾಸ್ ಕನ್ನಡ ಏಂಟನೇ ಆವೃತ್ತಿಗೆ ಸಂಬಂಧಿಸಿದಂತೆ ನಿರೂಪಕ, ನಟ ಸುದೀಪ್ ಜೊತೆ ಈಗಾಗಲೇ ಚರ್ಚೆಯಾಗಿದೆ. ಸುದೀಪ್ ಮತ್ತು ಪರಮೇಶ್ವರ್ ಗುಂಡ್ಕಲ್ ಭೇಟಿ ಮಾಡಿ ಮಾತುಕತೆ ನಡೆಸಿರುವ ಫೋಟೋವನ್ನು ಸ್ವತಃ ಗುಂಡ್ಕಲ್ ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದರು. ''ಹೊಸ ಆವೃತ್ತಿಯ ತಯಾರಿ'' ಎಂದು ಕ್ಯಾಪ್ಷನ್ ಹಾಕಿದ್ದರು.
'ಕನ್ನಡ ಬಿಗ್‌ಬಾಸ್‌ನಲ್ಲಿ ಮಹಿಳಾ ನಿರೂಪಕಿ': ಊಹಿಸಿಕೊಳ್ಳಲು ಸಾಧ್ಯವಿಲ್ಲ ಅಂತಿದ್ದಾರೆ ವೀಕ್ಷಕರು

ಡ್ರೋನ್ ಪ್ರತಾಪ್, ಹನುಮಂತನ ಮೇಲೆ ಎಲ್ಲರ ಕಣ್ಣು
ಏಂಟನೇ ಆವೃತ್ತಿಯ ಬಿಗ್ ಬಾಸ್‌ನಲ್ಲಿ ಯಾರೆಲ್ಲ ಭಾಗವಹಿಸಬಹುದು ಎಂಬ ಚರ್ಚೆ ಈಗಾಗಲೇ ದೊಡ್ಡ ಮಟ್ಟದಲ್ಲಿ ನಡೆಯುತ್ತಿದೆ. ಈ ವರ್ಷ ಹೆಚ್ಚು ಸುದ್ದಿಯಲ್ಲಿದ್ದ ಡ್ರೋನ್ ಪ್ರತಾಪ, ಸರಿಗಮಪ ಖ್ಯಾತಿಯ ಹನುಮಂತ, ಟಿಕ್ ಟಾಕ್ ಸುಂದರಿ ಸೋನು ಗೌಡ ಸೇರಿದಂತೆ ಹಲವರ ಹೆಸರು ಕೇಳಿ ಬರುತ್ತಿದೆ.