»   » 'ಬಿಗ್ ಬಾಸ್' ಮನೆಗೆ ಹೋಗಲ್ಲ ಅಂತ ಕಡ್ಡಿ ತುಂಡು ಮಾಡಿದ ಹಾಗೆ ಹೇಳಿದ ಮಯೂರಿ.!

'ಬಿಗ್ ಬಾಸ್' ಮನೆಗೆ ಹೋಗಲ್ಲ ಅಂತ ಕಡ್ಡಿ ತುಂಡು ಮಾಡಿದ ಹಾಗೆ ಹೇಳಿದ ಮಯೂರಿ.!

Posted By:
Subscribe to Filmibeat Kannada
Bigg Boss Kannada 5 : ಬಿಗ್ ಬಾಸ್ ಗೆ ಹೋಗಲ್ಲ ಅಂದು ಖಡಕ್ಕಾಗಿ ಹೇಳಿದ ನಟಿ ಮಯೂರಿ | Filmibeat Kannada

'ಅಶ್ವಿನಿ ನಕ್ಷತ್ರ' ಧಾರಾವಾಹಿ ಮೂಲಕ ಖ್ಯಾತಿ ಗಳಿಸಿದ ನಟಿ ಮಯೂರಿ 'ಬಿಗ್ ಬಾಸ್' ಮನೆ ಒಳಗೆ ಹೋಗಲ್ವಂತೆ.

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದ ಭಾಗವಾಗಿರುವ 'ಕಿಚ್ಚನ್ ಟೈಮ್'ನಲ್ಲಿ ವಿಶೇಷ ಅತಿಥಿಯಾಗಿ ಭಾಗವಹಿಸಿ, ಕಿಚ್ಚ ಸುದೀಪ್ ರವರಿಗೆ 'ಗಿರಮಿಟ್' ಮಾಡಿಕೊಟ್ಟ ನಟಿ ಮಯೂರಿ, ಅದೇ ಕಾರ್ಯಕ್ರಮದಲ್ಲಿ ''ಬಿಗ್ ಬಾಸ್' ಶೋನಲ್ಲಿ ಭಾಗವಹಿಸುವುದಿಲ್ಲ'' ಅಂತ ಕಡ್ಡಿ ತುಂಡು ಮಾಡಿದ ಹಾಗೆ ಹೇಳಿದ್ದಾರೆ.

'ಬಿಗ್ ಬಾಸ್' ಮನೆಯೊಳಗೆ ಹೋಗ್ತಾರೆ ನಟಿ ಸಂಯುಕ್ತ ಹೆಗ್ಡೆ.! ಪ್ರಾಮಿಸ್.!.

Will Kannada Actress Mayuri enter bigg boss house.?

ಅಡುಗೆ ಮಾಡ್ತಾ ಮಾಡ್ತಾ, ''ಮುಂದಿನ ವರ್ಷ ನೀವು 'ಬಿಗ್ ಬಾಸ್' ಮನೆಯೊಳಗೆ ಹೋಗ್ತೀರಾ ಅಂತ ಊಹಾಪೋಹ ಇದೆ'' ಎಂದು ಸುದೀಪ್ ಕೇಳಿದರು.

''ಅದಕ್ಕೆ, ಇಲ್ಲ ಹೋಗಲ್ಲ'' ಎಂದು ಮಯೂರಿ ಸ್ಪಷ್ಟವಾಗಿ ನುಡಿದರು.

Will Kannada Actress Mayuri enter bigg boss house.?

ಹಾಗ್ನೋಡಿದ್ರೆ, 'ಅಶ್ವಿನಿ ನಕ್ಷತ್ರ' ಧಾರಾವಾಹಿಯಲ್ಲಿ ಮಯೂರಿ ಜೊತೆ ನಟಿಸಿದ ಜೆಕೆ ಕೂಡ ''ಬಿಗ್ ಬಾಸ್' ಮನೆಯೊಳಗೆ ಹೋಗಲ್ಲ'' ಎಂದು ಚಂದನ್ ಬಳಿ ಹೇಳಿಕೊಂಡಿದ್ದರಂತೆ. ಆದ್ರೆ, ಇಂದು ಅದೇ ಜೆಕೆ 'ಬಿಗ್ ಬಾಸ್' ಮನೆಯೊಳಗೆ ಬಂಧಿಯಾಗಿದ್ದಾರೆ. ಈ ವಿಚಾರವನ್ನ ಬಹಿರಂಗ ಪಡಿಸಿದ್ದು ನಟ ಚಂದನ್.

ನಟ ಚಂದನ್ ಕೂಡ 'ಕಿಚ್ಚನ್ ಟೈಮ್' ನಲ್ಲಿ ಭಾಗವಹಿಸಿ, ಸುದೀಪ್ ಜೊತೆಗೂಡಿ ಚಿಕನ್ ಖಾದ್ಯ ಸಿದ್ಧಪಡಿಸಿದರು.

English summary
Will Kannada Actress Mayuri enter bigg boss house.?

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada