For Quick Alerts
  ALLOW NOTIFICATIONS  
  For Daily Alerts

  'ವೀಕೆಂಡ್' ಶೋಗೆ ಎಸ್.ಎಲ್.ಭೈರಪ್ಪ ಬರ್ತಾರಾ.? ರಾಘವೇಂದ್ರ ಹುಣಸೂರು ಏನಂದ್ರು.?

  |

  ಕಿರುತೆರೆಯಲ್ಲಿ ಸದ್ಯ ಭಾರಿ ಜನಪ್ರಿಯತೆ ಗಳಿಸಿರುವ ಕಾರ್ಯಕ್ರಮ 'ವೀಕೆಂಡ್ ವಿತ್ ರಮೇಶ್'. ಈ ಕಾರ್ಯಕ್ರಮಕ್ಕೆ ಅವರು ಬರಬೇಕು, ಇವರು ಬರಬೇಕು ಅಂತ ತುಂಬಾ ಜನ ತಮಗೆ ಇಷ್ಟವಾದ ಸಾಧಕರ ಹೆಸರನ್ನ ಆಗಾಗ ಹೇಳುತ್ತಾ ಇರುತ್ತಾರೆ. ಈಗ ಅದೇ ವೀಕ್ಷಕರ ಬಳಗದಿಂದ ಹಿರಿಯ ಸಾಹಿತಿ 'ಎಸ್.ಎಲ್.ಭೈರಪ್ಪ' ಸಾಧಕರ ಸೀಟ್ ನಲ್ಲಿ ಕೂರಬೇಕು ಎಂಬ ಕೂಗು ಕೇಳಿಬಂದಿದೆ.

  ವೀಕೆಂಡ್ ವಿತ್ ರಮೇಶ್-3 ಕಾರ್ಯಕ್ರಮದಲ್ಲಿ ಹೆಚ್ಚಾಗಿ ಸಿನಿಮಾದವರನ್ನೇ ಕರೆಸುತ್ತಾರೆ ಎನ್ನುವ ಅಪವಾದದಿಂದ ಹೊರ ಬಂದು ಈ ಸೀಸನ್ ನಲ್ಲಿ ಪ್ರಾಣೇಶ್ ಮತ್ತು ರವಿ.ಡಿ ಚನ್ನಣ್ಣನವರ್ ಭಾಗವಹಿಸಿದ್ದರು. ಈಗ ಸಾಹಿತ್ಯ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿರುವ ಹಿರಿಯ ಸಾಹಿತಿ 'ಎಸ್.ಎಲ್.ಭೈರಪ್ಪ' ಅವರನ್ನ ಸಹ ಕರೆ ತರುವ ತಯಾರಿಗಳು ನಡೆಯುವ ಸಾಧ್ಯತೆ ಇದೆ.

  ಅಂದಹಾಗೆ, ಎಸ್.ಎಲ್.ಭೈರಪ್ಪ ರವರು 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮಕ್ಕೆ ಬರ್ತಾರಾ.? ಈ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ....

  ಮೊದಲು ಶುರುವಾಗಿದ್ದು ಎಲ್ಲಿ.?

  ಮೊದಲು ಶುರುವಾಗಿದ್ದು ಎಲ್ಲಿ.?

  ಎಸ್.ಎಲ್.ಭೈರಪ್ಪ ಅವರು 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎನ್ನುವುದು ಅನೇಕರ ಬಯಕೆ. ಈ ಕುರಿತು ಸಂಸದ ಪ್ರತಾಪ್ ಸಿಂಹ ಕೂಡ ತಮ್ಮ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.

  ಪ್ರತಾಪ್ ಸಿಂಹ ಫೇಸ್ ಬುಕ್ ನಲ್ಲಿ ಬರೆದಿರುವುದೇನು..?

  ಪ್ರತಾಪ್ ಸಿಂಹ ಫೇಸ್ ಬುಕ್ ನಲ್ಲಿ ಬರೆದಿರುವುದೇನು..?

  ''ಬೆಳಗಾವಿಯ ವಿವೇಕ ಎಂಬುವವರಿಂದ ಬಂದ ಸಲಹೆ: ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ನಮ್ಮ ಹೆಮ್ಮೆಯ ಲೇಖಕರಾದ ಎಸ್.ಎಲ್.ಭೈರಪ್ಪನವರನ್ನು ಕರೆಸಿ ಎಂದು ಒತ್ತಾಯ ಮಾಡೋಣವೇ? ಒಪ್ಪಿಸುವ ದುಸ್ಸಾಹಸಕ್ಕೆ ನಾನೇ ಕೈ ಹಾಕುತ್ತೇನೆ'' ಹೀಗಂತ ಪ್ರತಾಪ್ ಸಿಂಹ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.

  ರಾಘವೇಂದ್ರ ಹುಣಸೂರು ಉತ್ತರ

  ರಾಘವೇಂದ್ರ ಹುಣಸೂರು ಉತ್ತರ

  ಪ್ರತಾಪ್ ಸಿಂಹ ರವರ ಈ ಬೇಡಿಕೆಗೆ ಜೀ ಕನ್ನಡ ಬಿಜಿನೆಸ್ ಹೆಡ್ ಆದ ರಾಘವೇಂದ್ರ ಹುಣಸೂರು ಉತ್ತರಿಸಿದ್ದಾರೆ. ಇದಕ್ಕೆ ನಮ್ಮ ಒಪ್ಪಿಗೆ ಇದ್ದು, 'ಇಬ್ಬರು ಸೇರಿ ಭೈರಪ್ಪ ಅವರನ್ನ ಭೇಟಿ ಮಾಡೋಣ' ಅಂತ ಹೇಳಿದ್ದಾರೆ.

  ಜನರ ಆಸೆಯೂ ಅದೇ..!

  ಜನರ ಆಸೆಯೂ ಅದೇ..!

  ಪ್ರತಾಪ್ ಸಿಂಹ ಅವರ ಈ ಪೋಸ್ಟ್ ಗೆ ಐದು ಸಾವಿರಕ್ಕೂ ಹೆಚ್ಚು ಜನರು ತಮ್ಮ ಮೆಚ್ಚುಗೆಯನ್ನ ವ್ಯಕ್ತಪಡಿಸಿದ್ದಾರೆ. ಅಲ್ಲದೆ ನೂರಾರು ಜನರು 'ಭೈರಪ್ಪ ಅವರ ಜೀವನದ ಬಗ್ಗೆ ತಿಳಿದುಕೊಳ್ಳಬೇಕು', 'ಅವರು ಈ ಕಾರ್ಯಕ್ರಮಕ್ಕೆ ಬರಬೇಕು' ಅಂತ ಕಾಮೆಂಟ್ ಮಾಡಿದ್ದಾರೆ.

  ಭೈರಪ್ಪ ಬರ್ತಾರಾ..?

  ಭೈರಪ್ಪ ಬರ್ತಾರಾ..?

  ಎಸ್.ಎಲ್.ಭೈರಪ್ಪ ಅವರು 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮಕ್ಕೆ ಬರ್ತಾರಾ ಅನ್ನೋದು ಇದೀಗ ಎಲ್ಲರ ತಲೆಯಲ್ಲಿ ಕಾಡುತ್ತಿರುವ ಪ್ರಶ್ನೆ.

  English summary
  MP Prathap Simha has taken his Facebook page to express his desire to know Writer S.L.Bhyrapa life story in Weekend With Ramesh.? Will 'S.L.Bhyrappa' take part in Weekend with Ramesh-3? is a question as of now.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X