For Quick Alerts
ALLOW NOTIFICATIONS
For Daily Alerts
ಜನಶ್ರೀ ಟಿವಿ ಮುಖ್ಯಸ್ಥರಾಗಿ ಬೆಳಗೆರೆ ರವಿ
By Mahesh
"ಇದೇ ಫೆಬ್ರವರಿ 18ರ ಮುಂಜಾನೆ... ಕನ್ನಡ ಟಿವಿ ಜಗತ್ತಿನಲ್ಲಿ ಒಂದು ಹೊಸ ಕಿರಣ... ಜನಶ್ರೀ ನ್ಯೂಸ್... ಜನಮನ ದನಿ... ಜನರ ಬಳಿಗೆ ಜನಶ್ರೀ ಬಳಗ" ಎಂಬ ಬಣ್ಣದ ಜಾಹೀರಾತು 2011ರಲ್ಲಿ ಕಾಣಿಸಿಕೊಂಡಾಗ ರೆಡ್ಡಿಗಳ ಚಾನೆಲ್ ಗೆ ಬೆಳಗೆರೆ ಅವರೇ ಬಾಸ್ ಆಗುತ್ತಾರಂತೆ ಬಹುಜನರು ಅಂದು ಕೊಂಡಿದ್ದರು.
ಬೆಂಗಳೂರಿನ ಕೋರಮಂಗಲದ ಬಿಗ್ ಬಜಾರ್ ನ ಬಿಲ್ಡಿಂಗ್ ನ ನಾಲ್ಕನೇ ಮಹಡಿಯಲ್ಲಿ ಸುಸಜ್ಜಿತ ಸ್ಟುಡಿಯೋ ಹೊಂದಿದ್ದ ಜನಶ್ರೀ ಚಾನೆಲ್ ಗೆ ವಿದ್ಯುನ್ಮಾನ ಮತ್ತು ಮುದ್ರಣ ಮಾಧ್ಯಮ ಕ್ಷೇತ್ರದಲ್ಲಿ ಸಾಕಷ್ಟು ಅನುಭವವಿದ್ದ ಅನಂತ ಚಿನಿವಾರ ಅವರು ನಾಯಕರಾಗಿದ್ದರು.
ಅಭಿಮಾನ ಪತ್ರಿಕೆಯಲ್ಲಿ ತಮ್ಮ ವೃತ್ತಿಜೀವನ ಆರಂಭಿಸಿದ ಚಿನಿವಾರ ಬಳಿಕ ಸ್ಟಾರ್ ಆಫ್ ಮೈಸೂರು, ಟಿವಿ ಟುಡೆ, ಇಂಡಿಯನ್ ಎಕ್ಸ್ ಪ್ರೆಸ್, ದಿನತಂತಿ, ಉದಯ ಟಿವಿ, ಸುವರ್ಣ ಮತ್ತು ಓ ಮನಸೆ ಪಾಕ್ಷಿಕ ಪತ್ರಿಕೆಯ ಸಂಪಾದಕರಾಗಿ ನಂತರ ಜನಶ್ರೀಗೆ ಬಂದಿದ್ದರು. ಈಗ ಸುವರ್ಣ ಸುದ್ದಿ ವಾಹಿನಿ ಸೇರಿದ್ದಾರೆ.
ಗೆಳಯ ಪತ್ರಕರ್ತ ರವಿ ಬೆಳಗೆರೆ ಅವರಿಗೆ ಜನಶ್ರೀಗಾಗಿ 'ಬ್ರೇಕ್ ಫಾಸ್ಟ್' ಎಂಬ ಕಾರ್ಯಕ್ರಮ ಮಾಡುವಂತೆ ಆಹ್ವಾನ ನೀಡಿದ್ದರು. ಅಹ್ವಾನ ಒಪ್ಪಿಕೊಂಡಿದ್ದ ರವಿ ಹೆಚ್ಚು ಕಾಲ ಜನಶ್ರೀ ಬಳಗದಲ್ಲಿರಲಿಲ್ಲ. ಈಗ ಮತ್ತೊಮ್ಮೆ ಜನಶ್ರೀ ಸೇರುತ್ತಿದ್ದಾರೆ.
Post by Girish Rao Hatwar.
ದಿನಪತ್ರಿಕೆ, ವಾರಪತ್ರಿಕೆ, ಮಾಸಿಕ, ಟ್ಯಾಬ್ಲ್ಯಾಡ್, ಟಿವಿ, ರೇಡಿಯೋ.. ಎಲ್ಲ ಕಡೆ ಕೈಯಾಡಿಸಿರುವ ರವಿ ಬೆಳೆಗೆರೆ ಅವರು ಈಗ ಪೂರ್ಣ ಪ್ರಮಾಣವಾಗಿ ಸುದ್ದಿ ವಾಹಿನಿಯ ಮುಖ್ಯಸ್ಥರಾಗಿ ಕಾಣಿಸಿಕೊಳ್ಳಲಿದ್ದಾರೆ. ರವಿ ಅವರ ಟಿವಿ ಮಾಧ್ಯಮದ ಜರ್ನಿ ರೀ ಕ್ಯಾಪ್ ಇಲ್ಲಿದೆ..
ಫೇಸ್ ಬುಕ್ ನಲ್ಲಿ ಹೇಳಿದ್ದರು
ಫೇಸ್ ಬುಕ್ ನಲ್ಲಿ ಹೇಳಿದ್ದರು
I joined JASHREE news channel today and will be hosting a daily show late evening. Need your support and best wishes. I will also host a morning breakfast programme show which will be unique. ಹೀಗಂತ ಅವರು ಫೇಸ್ ಬುಕ್ ನಲ್ಲಿ ರವಿ ಈ ಮುಂಚೆ ಬರೆದುಕೊಂಡಿದ್ದರು.
ಏನು ಪೋಗ್ರಾಂ ಮಾಡ್ತಾರೆ
ಏನು ಪೋಗ್ರಾಂ ಮಾಡ್ತಾರೆ
ಲಭ್ಯ ಮಾಹಿತಿ ಪ್ರಕಾರ ದಿನಕ್ಕೆ ಮೂರು ಸಲ ಪ್ರೇಕ್ಷಕರ ಮುಂದೆ ಬರುತ್ತಾರಂತೆ. ಮೂರು ಕಾರ್ಯಕ್ರಮಗಳು ಸದ್ಯಕ್ಕೆ ರವಿ ಅವರಿಗೆ ಮೀಸಲಿಡಲಾಗಿದೆ. ಸೆ.20 ಶುಕ್ರವಾರ ರವಿ ಅವರು ಅಧಿಕಾರ ಸ್ವೀಕರಿಸಲಿದ್ದಾರೆ ಎಂದು ಖ್ಯಾತ ಲೇಖಕ ಜೋಗಿ ಅಲಿಯಾಸ್ ಗಿರೀಶ್ ರಾವ್ ಹತ್ವಾರ್ ಅವರು ಫೇಸ್ ಬುಕ್ ವಾಲ್ ಮೇಲೆ ಹಾಕಿಕೊಂಡಿದ್ದಾರೆ.
ರವಿ ಟಿವಿ ಪ್ರಯಾಣ
ರವಿ ಟಿವಿ ಪ್ರಯಾಣ
ಕೈಂ ಡೈರಿ, ಎಂದೂ ಮರೆಯದ ಹಾಡು :
* ಮೊದಲ ಬಾರಿಗೆ ಈಟಿಯ ಕ್ರೈಂ ಡೈರಿ ಕಾರ್ಯಕ್ರಮದಿಂದ ಟಿವಿ ಲೋಕಕ್ಕೆ ಎಂಟ್ರಿ
* 5 ವರ್ಷದಲ್ಲಿ ಸುಮಾರು 1000 ಎಪಿಸೋಡ್ ಗಳ ನಿರ್ಮಾಣ. ಅತ್ಯಂತ ಹೆಚ್ಚಿನ ಟಿಆರ್ ಪಿ ಹೊಂದಿದ ಜನಪ್ರಿಯ ಕಾರ್ಯಕ್ರಮವಾಗಿತ್ತು.
* ತನ್ನ ಧ್ವನಿ ಮತ್ತು ನಿರ್ಭಯವಾದ voice over ನಿಂದ ಲಕ್ಷಾಂತರ ವೀಕ್ಷಕರನ್ನು ಹಿಡಿದಿಟ್ಟ ಕೀರ್ತಿ.
* ಈ ಟಿವಿಯ 'ಎಂದೂ ಮರೆಯದ ಹಾಡು' ಕಾರ್ಯಕ್ರಮಕ್ಕೆ ನಿರೂಪಣೆ. ಬೇರೆಯದೇ ವರ್ಗದ ವೀಕ್ಷಕರನ್ನು ಸೆಳೆದ ಕೀರ್ತಿ. ಈ ಕಾರ್ಯಕ್ರಮವೂ ಕೂಡ ಜನಪ್ರಿಯ ಕಾರ್ಯಕ್ರಮವಾಗಿತ್ತು.
ಸಿನಿಮಾ, ಧಾರಾವಾಹಿಗಳಲ್ಲಿ
ಸಿನಿಮಾ, ಧಾರಾವಾಹಿಗಳಲ್ಲಿ
* 'ಗಂಡ ಹೆಂಡತಿ', 'ಮಾದೇಶ', ವಾರಸ್ದಾರ ಮುಂತಾದ ಸಿನಿಮಾಗಳಲ್ಲಿ ನಟನೆ. ತಾವೇ ಬರೆದ ಕತೆ ಇದ್ದ 'ಡೆಡ್ಲಿ ಸೋಮ' ಸಿನಿಮಾ ಗೆ ಹಿನ್ನೆಲೆ ಧ್ವನಿ ನೀಡಿದ್ದಾರೆ.
* ಟಿ.ಎನ್. ಸೀತಾರಾಂ ನಿರ್ದೇಶನದ ಜನಪ್ರಿಯ ಧಾರಾವಾಹಿ ಮುಕ್ತ ಮುಕ್ತದಲ್ಲಿ ನ್ಯಾಯಾಧೀಶರ ಪಾತ್ರ ನಿರ್ವಹಣೆ ಮಾಡಿ ಧಾರಾವಾಹಿಯ ಜನಪ್ರಿಯತೆ ಹೆಚ್ಚಿಸಿದ ಕೀರ್ತಿ.
* ಸುವರ್ಣ ಸುದ್ದಿ ವಾಹಿನಿಯಲ್ಲಿ ನೈಟ್ ಬೀಟ್ ಕ್ರೈಂ ಕಾರ್ಯಕ್ರಮವನ್ನು ಸುಮಾರು ನೂರು ಸಂಚಿಕೆ ನಿರ್ಮಾಣ ಮತ್ತು ನಿರ್ವಹಣೆ.
* ಈ ಟಿವಿಯಲ್ಲಿ ಪ್ರಸಾರವಾದ 'ರಾಧಾ' ಧಾರಾವಾಹಿಯ ಸೂತ್ರದಾರರು.
* ಸುವರ್ಣ ವಾಹಿನಿಗಾಗಿ ತಮ್ಮದೇ ಕಾದಂಬರಿ ಆಧಾರಿತ 'ಹೇಳಿ ಹೋಗು ಕಾರಣ' ಧಾರಾವಾಹಿ ನಿರ್ಮಾಣ. ಹೆಚ್ಚಿನ ಮಾಹಿತಿ ಇಲ್ಲಿ ಓದಿ
English summary
Kannada Photos
Go to : More Photos
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
X