For Quick Alerts
  ALLOW NOTIFICATIONS  
  For Daily Alerts

  'ಮರಿ ರಾಕಿಂಗ್ ಸ್ಟಾರ್' ಯಾವಾಗ ಎಂದು ಕೇಳಿದ್ದ ಅಮ್ಮನಿಗೆ ಯಶ್ ಸಿಹಿ ಸುದ್ದಿ

  By Bharath Kumar
  |
  Kannadada Kotyadipathi season 3 : ಜ್ಯೂನಿಯರ್ ರಾಕಿಂಗ್ ಸ್ಟಾರ್ ಎಂಟ್ರಿ ಯಾವಾಗ ಆಗುತ್ತೆ.?|Filmibeat Kannada

  ರಾಕಿಂಗ್ ಸ್ಟಾರ್ ಯಶ್ ಇತ್ತೀಚಿಗಷ್ಟೆ 'ಕನ್ನಡದ ಕೋಟ್ಯಧಿಪತಿ' ಕಾರ್ಯಕ್ರಮದಲ್ಲಿ ಅತಿಥಿಯಾಗಿ ಆಗಮಿಸಿದ್ದರು. ಅದ್ಭುತವಾಗಿ ಆಟವಾಡಿದ ಯಶ್ 25 ಲಕ್ಷ ಗೆದ್ದುಕೊಂಡು ಹೋದರು.

  ಈ ಶೋನಲ್ಲಿ 25 ಲಕ್ಷ ಗೆದ್ದಿದ್ದಕ್ಕಿಂತ ಯಶ್ ಅವರ ತಾಯಿ ಕೇಳಿದ ಪ್ರಶ್ನೆಗೆ ಯಶ್ ಕೊಟ್ಟ ಉತ್ತರವೇ ಹೆಚ್ಚು ಗಮನ ಸೆಳೆಯಿತು. ಹೌದು, ಶೋ ಮಧ್ಯೆ ರಾಕಿಂಗ್ ಸ್ಟಾರ್ ಅವರ ತಾಯಿ, ತಮ್ಮ ಮಗನಿಗೆ ಒಂದು ಪ್ರಶ್ನೆ ಕೇಳಿದ್ದರು. ''ತಾಯಿಯಾಗಿ ಅಲ್ಲದೇ ಒಬ್ಬ ಅಭಿಮಾನಿಯಾಗಿ ಕೇಳ್ತಿದ್ದೀನಿ, ನಾನು ಅಜ್ಜಿ ಆಗೋದು ಯಾವಾಗ...? ''ಎಂದಿದ್ದರು.

  'ನಾನು ಅಜ್ಜಿ ಆಗೋದು ಯಾವಾಗ' ಎಂದು ಕೇಳಿದ ಯಶ್ ತಾಯಿ.? ಯಶ್ ಏನಂದ್ರು.?'ನಾನು ಅಜ್ಜಿ ಆಗೋದು ಯಾವಾಗ' ಎಂದು ಕೇಳಿದ ಯಶ್ ತಾಯಿ.? ಯಶ್ ಏನಂದ್ರು.?

  ಈ ಪ್ರಶ್ನೆ ಕೇಳಿ ಶಾಕ್ ಆದ 'ರಾಜಾಹುಲಿ' ತಮ್ಮ ಮನದಲ್ಲಿ ಮಾತುಗಳನ್ನ ಅಭಿಮಾನಿಗಳ ಮುಂದಿಟ್ಟರು. ಬಹುಶಃ ಈ ಉತ್ತರ ಕೇಳಿ ಯಶ್ ಅಭಿಮಾನಿಗಳು ಮತ್ತು ಅವರ ತಾಯಿ ಫುಲ್ ಹ್ಯಾಪಿ ಆಗಿರ್ತಾರೆ. ಅಷ್ಟಕ್ಕೂ, ಯಶ್ ಕೊಟ್ಟ ಉತ್ತರವೇನು.? ಮುಂದೆ ಓದಿ.....

  ಯಶ್ ಪ್ಲಾನಿಂಗ್ ಏನು.?

  ಯಶ್ ಪ್ಲಾನಿಂಗ್ ಏನು.?

  ಅಮ್ಮನ ಪ್ರಶ್ನೆಗೆ ಉತ್ತರ ಕೊಟ್ಟ 'ರಾಜಾಹುಲಿ, ''ನಾವಿಬ್ಬರೂ ಏಳು ವರ್ಷ ರಿಲೇಷನ್ ಶಿಪ್ ನಲ್ಲಿದ್ವಿ. ಆಗ ಕಲಾವಿದರು. ಪಬ್ಲಿಕ್ ಆಗಿ ಎಲ್ಲೂ ಓಡಾಡೋಕೆ ಆಗಿಲ್ಲ. ಏಲ್ಲೂ ಹೋಗೋಕು ಆಗಲ್ಲಿಲ್ಲ. ಇಬ್ಬರಿಗೂ ಘನತೆ ಕಾಪಾಡಿಕೊಳ್ಳಬೇಕು ಎಂಬುದು ಮನಸ್ಸಲ್ಲಿತ್ತು. ನಮ್ಮ ಮನೆಯವರ ಜೊತೆ, ಕುಟುಂದವರು ಜೊತೆ ಇರ್ತಿದ್ವಿ'' - ಯಶ್

  'ಕನ್ನಡದ ಕೋಟ್ಯಧಿಪತಿ'ಯಲ್ಲಿ ದಾಖಲೆ ಬರೆದ ರಾಕಿಂಗ್ ಸ್ಟಾರ್'ಕನ್ನಡದ ಕೋಟ್ಯಧಿಪತಿ'ಯಲ್ಲಿ ದಾಖಲೆ ಬರೆದ ರಾಕಿಂಗ್ ಸ್ಟಾರ್

  ಎರಡು ವರ್ಷ ಆರಾಮಾಗಿರೋಣ

  ಎರಡು ವರ್ಷ ಆರಾಮಾಗಿರೋಣ

  ''ಆದ್ರೆ, ಮದುವೆ ಆದ್ಮೇಲೆ ರಾಜಾರೋಷವಾಗಿ ಎಲ್ಲಾ ಕಡೆ ಸುತ್ತಬಹುದು, ಓಡಾಡಬಹುದು ಎಂಬ ಧೈರ್ಯ ಬಂತು. ಆಗ ಇಬ್ಬರಲ್ಲೂ ಒಂದು ಚರ್ಚೆ ಆಯ್ತು. ಎರಡು ವರ್ಷ ಆರಾಮಾಗಿ ಇರೋಣ. ಸುತ್ತಾಡೋಣ. ಆಮೇಲೆ ಪ್ಲಾನ್ ಮಾಡೋಣ ಅಂತ ನಿರ್ಧಾರ ಮಾಡಿದ್ವಿ'' - ಯಶ್

  'ಕನ್ನಡದ ಕೋಟ್ಯಧಿಪತಿ' ಶೋ ವಿರುದ್ಧ ಪ್ರತಾಪ್ ಸಿಂಹ ಪತ್ನಿ ಅಸಮಾಧಾನ'ಕನ್ನಡದ ಕೋಟ್ಯಧಿಪತಿ' ಶೋ ವಿರುದ್ಧ ಪ್ರತಾಪ್ ಸಿಂಹ ಪತ್ನಿ ಅಸಮಾಧಾನ

  ಒತ್ತಡ ಹೆಚ್ಚಾಗುತ್ತಿದೆ

  ಒತ್ತಡ ಹೆಚ್ಚಾಗುತ್ತಿದೆ

  ''ಈಗ ನನಗೆ ಒತ್ತಡವಿದೆ. ನನ್ನ ತಾಯಿ, ಸಂಬಂಧಿಕರು ಎಲ್ಲರು ಕೇಳ್ತಿದ್ದಾರೆ. ಆದ್ರೂ ನನಗೆ ಸಂಕೋಚ. ಎಲ್ಲೂ ಚರ್ಚೆ ಮಾಡೋಕು ಆಗಲ್ಲ. ಹೋಗ್ಲಿ ಬಿಡಿ, ನಮ್ಮಮ್ಮ ಸರಿಯಾದ ಜಾಗದಲ್ಲೇ ಕೇಳಿದ್ದಾರೆ.....ಆದಷ್ಟೂ ಬೇಗ....ಸದ್ಯಕ್ಕೆ ಅಷ್ಟೇ ಹೇಳೋದು...''ಎಂದು ಯಶ್ ನಕ್ಕರು.

  ಮದುವೆ ಆಗಿ ಒಂದೂವರೆ ವರ್ಷ

  ಮದುವೆ ಆಗಿ ಒಂದೂವರೆ ವರ್ಷ

  ಅಂದ್ಹಾಗೆ, ನಟ ಯಶ್ ಮತ್ತು ರಾಧಿಕಾ ಪಂಡಿತ್ ಮದುವೆ ಆಗಿ ಒಂದೂವರೆ ವರ್ಷ ಆಗಿದೆ. 2016ರ ಡಿಸೆಂಬರ್ 9 ರಂದು 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಗೋವಾದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ಈ ಜೋಡಿ ಬೆಂಗಳೂರಿನಲ್ಲಿ ಮದುವೆ ಆಗಿದ್ದರು.

  English summary
  Kannada actor Rocking Star Yash has react on his mother's question at kannadada kotyadhipathi stage.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X