»   » ಅನಿತಾ ಕುಮಾರಸ್ವಾಮಿ ಪಾತ್ರದಲ್ಲಿ ನಟಿ ಭವ್ಯಾ

ಅನಿತಾ ಕುಮಾರಸ್ವಾಮಿ ಪಾತ್ರದಲ್ಲಿ ನಟಿ ಭವ್ಯಾ

Posted By:
Subscribe to Filmibeat Kannada
Anitha Kumaraswamy
ಶಾಸಕಿ ಹಾಗೂ ಜೆಡಿಎಸ್ ಮುಖಂಡೆ ಹಾಗೂ ಕಸ್ತೂರಿ ವಾಹಿನಿಯ ಮ್ಯಾನೇಜಿಂಗ್ ಡೈರೆಕ್ಟರ್ ಅನಿತಾ ಕುಮಾರಸ್ವಾಮಿ ಅವರ ಜೀವನದ ಕಥೆ ಅವರದೇ ವಾಹಿನಿಯಲ್ಲಿ ಮೂಡಿಬರಲಿದೆ. ಈ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಇಲ್ಲದಿದ್ದರೂ, ಈ ಧಾರಾವಾಹಿಯ ಕಥೆ ಸ್ವತಃ ಅನಿತಾ ಅವರ ಜೀವನದ ಘಟನೆಗಳನ್ನು ಆಧರಿಸಿದೆ ಎನ್ನಲಾಗಿದೆ.

ಇಷ್ಟು ದಿನ ರಾಜಕೀಯ ಕ್ಷೇತ್ರದಲ್ಲಿ ಬಿಜಿಯಾಗಿದ್ದ ಅನಿತಾ ಅವರು ಇದೇ ಮೊದಲ ಬಾರಿಗೆ ತಮ್ಮದೇ ಕಥೆಗೆ ಪೆನ್ನು ಪುಸ್ತಕ ಹಿಡಿದು ಕಥೆ ಬರೆದಿದ್ದಾರೆ. ಈ ಧಾರಾವಾಹಿ ಹೆಸರು 'ಯಶೋಧರಾ ನೆಕ್ಸ್ಟ್ ಸಿಎಂ'. ಜನವರಿ 28ರಿಂದ ಈ ಧಾರಾವಾಹಿ ಪ್ರಸಾರವಾಗಲಿದೆ.

ಈ ವಿಭಿನ್ನ ಧಾರಾವಾಹಿಗೆ ರಂಗನಾಥ್ ಪಾರ್ಥ ಅವರು ಆಕ್ಷನ್ ಕಟ್ ಹೇಳಿದ್ದಾರೆ. ಮಹಿಳೆಯರು ಹಾಗೂ ರೈತರು ಎದುರಿಸುತ್ತಿರುವ ಸಮಸ್ಯೆಗಳೇ ಈ ಪೊಲಿಟಿಕಲ್ ಥ್ರಿಲ್ಲರ್ ಧಾರಾವಾಹಿಯ ಕಥಾವಸ್ತು. ಒಟ್ಟಿನಲ್ಲಿ ಈ ವಿಭಿನ್ನ ಕಥಾನಕ ತಮ್ಮ ವಾಹಿನಿಯ ಪ್ರೇಕ್ಷಕರಿಗೆ ಖಂಡಿತ ಇಷ್ಟವಾಗುತ್ತದೆ ಎಂಬ ವಿಶ್ವಾಸದಲ್ಲಿದ್ದಾರೆ ಕ್ರಿಯೇಟಿವ್ ಹೆಡ್ ರಾಜೇಶ್.

ಸುದೀರ್ಘ ಸಮಯದ ವಿರಾಮದ ಬಳಿಕ ನಟಿ ಭವ್ಯಾ ಅವರು ಈ ಧಾರಾವಾಹಿಯಲ್ಲಿ ಪ್ರಮುಖ ಪಾತ್ರ ಪೋಷಿಸಿದ್ದಾರೆ. ಅನಿತಾ ಅವರ ರಾಜಕೀಯ, ಸಾಮಾಜಿಕ ಅನುಭವಗಳ ಸಾರವೇ ಇಲ್ಲಿ ಕಥೆಯಾಗಿ ಹೊರಹೊಮ್ಮಿದೆ.

ಆದರೆ ಭವ್ಯಾ ಅವರ ಪಾತ್ರ ನಿಜಕ್ಕೂ ಅನಿತಾ ಕುಮಾರಸ್ವಾಮಿ ಅವರದೆ? ಎಂಬ ಪ್ರಶ್ನೆಗೆ ಸದ್ಯಕ್ಕೆ ನಿಖರ ಉತ್ತರವಿಲ್ಲ. ಧಾರಾವಾಹಿ ಪ್ರಸಾರವಾದ ಬಳಿಕವಷ್ಟೇ ಗೊತ್ತಾಗಬಹುದು. ಏತನ್ಮಧ್ಯೆ ಅನಿತಾ ಅವರು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ತಾವು ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿಯುವುದಾಗಿ ಘೋಷಿಸಿರುವುದು ಗೊತ್ತೇ ಇದೆ. (ಒನ್ಇಂಡಿಯಾ ಕನ್ನಡ)

English summary
Kasthuri channel starts new serial 'Yashodhara Next CM' from 28th January 2013. For first time the channels managing director Anitha Kumaraswamy writes story for the serial. Kannada actress Bhavya plays the special role in the serial.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada