For Quick Alerts
ALLOW NOTIFICATIONS  
For Daily Alerts

  TRP Fight: ದಾಖಲೆ ನಿರ್ಮಿಸಿದ ಜೀ ಕನ್ನಡ, ಕಲರ್ಸ್ ಕನ್ನಡಕ್ಕೆ ಎಚ್ಚರಿಕೆ.!

  |

  ಟಿ.ಆರ್.ಪಿ ಎನ್ನುವುದು ಜನಸಾಮಾನ್ಯರಿಗೆ ಅವಶ್ಯಕತೆ ಇಲ್ಲ. ಯಾವ ವಾಹಿನಿ ಹೆಚ್ಚು ಟಿ.ಆರ್.ಪಿ ಯಾವ ಚಾನಲ್ ಗೆ ಕಡಿಮೆ ಟಿ.ಆರ್.ಪಿ ಎಂಬುದರ ಬಗ್ಗೆ ಯೋಚನೆ ಮಾಡಲ್ಲ. ಒಳ್ಳೆ ಕಾರ್ಯಕ್ರಮಗಳನ್ನ ಯಾವ ಚಾನಲ್ ಕೊಡ್ತಾರೋ ಅದನ್ನ ನೋಡ್ತಾರೆ ಪ್ರೇಕ್ಷಕರು.

  ಆದ್ರೆ, ಟಿ.ಆರ್.ಪಿ ಎನ್ನುವುದು ವಾಹಿನಿಗಳ ಮಟ್ಟಿಗೆ ಪ್ರತಿಷ್ಠೆ. ಮಾರುಕಟ್ಟೆಯಲ್ಲಿ ತನ್ನ ಸಾರ್ವಭೌಮತ್ವವನ್ನ ಗುರುತಿಸಿಕೊಳ್ಳುವಿಕೆ. ಯಾವ ವಾಹಿನಿಗೆ ಹೆಚ್ಚು ಟಿ.ಆರ್.ಪಿ ರೇಟಿಂಗ್ ಸಿಗುತ್ತೋ ಆ ವಾಹಿನಿಗೆ ಹೆಚ್ಚು ಬೇಡಿಕೆ ಇರುತ್ತೆ.

  ಕನ್ನಡ ಕಿರುತೆರೆಯ TRP ಇತಿಹಾಸದಲ್ಲಿಯೇ ಹೊಸ ದಾಖಲೆ ಸೃಷ್ಟಿಸಿದ ಪುನೀತ್.!

  ಇದು ಟಿ.ಆರ್.ಪಿಯ ಪ್ರಾಥಮಿಕ ವಿಷ್ಯ. ಇದೀಗ, ಅಸಲಿ ವಿಷ್ಯ ಏನಪ್ಪಾ ಅಂದ್ರೆ, ಸುಮಾರು ವರ್ಷಗಳಿಂದ ಮೊದಲ ಸ್ಥಾನದಲ್ಲಿದ್ದ ಕಲರ್ಸ್ ಕನ್ನಡ ವಾಹಿನಿಯನ್ನ ಜೀ ಕನ್ನಡ ವಾಹಿನಿ ಮೊದಲ ಬಾರಿಗೆ ಹಿಂದಿಕ್ಕಿದೆ. ಇದು ಕಿರುತೆರೆ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಏನಿದು ಟಿ.ಆರ್.ಪಿ ಸ್ಟೋರಿ ಎಂದು ತಿಳಿಯಲು ಮುಂದೆ ಓದಿ.....

  ಹೊಸ ವರ್ಷದಲ್ಲಿ ದಾಖಲೆ ನಿರ್ಮಿಸಿದ ಜೀ ಕನ್ನಡ

  ಕನ್ನಡ ಕಿರುತೆರೆ ಇತಿಹಾಸದಲ್ಲಿ ಸುಮಾರು ವರ್ಷಗಳಿಂದ ನಂಬರ್ ವಾಹಿನಿಯಾಗಿ ಗುರುತಿಸಿಕೊಳ್ಳುತ್ತಿರುವುದು ಕಲರ್ಸ್ ಕನ್ನಡ. ಕಲರ್ಸ್ ವಾಹಿನಿಯನ್ನ ಹಿಂದಿಕ್ಕ ಬೇಕು ಎಂಬ ಛಲದಿಂದ ಜೀ ಕನ್ನಡ ಅನೇಕ ಭಾರಿ ಪ್ರಯತ್ನ ಮಾಡಿದೆ, ಆಗಿರಲಿಲ್ಲ. ಇದೀಗ, ಹೊಸ ವರ್ಷದ ಮೊದಲನೇ ವಾರವೇ ಹೊಸ ದಾಖಲೆ ನಿರ್ಮಿಸಿದೆ. ನಂಬರ್ ಸ್ಥಾನವನ್ನ ಕಲರ್ಸ್ ಕನ್ನಡ ವಾಹಿನಿಯಿಂದ ಜೀ ಕನ್ನಡ ಕಿತ್ತುಕೊಂಡಿದೆ.

  ಮೊದಲ ವಾರದಲ್ಲಿ ಜೀ ಕನ್ನಡಕ್ಕೆ ಹೆಚ್ಚು ಅಂಕ

  2019ನೇ ವರ್ಷದ ಮೊದಲ ವಾರದಲ್ಲಿ ಕಲರ್ಸ್ ಕನ್ನಡಕ್ಕಿಂತ ಜೀ ಕನ್ನಡ ಹೆಚ್ಚು ಟಿ.ಆರ್.ಪಿ ಅಂಕ ಪಡೆದುಕೊಂಡಿದೆ. ಕಲರ್ಸ್ ಕನ್ನಡ ಒಟ್ಟು ಅಂಕ 391735 ಪಡೆದುಕೊಂಡಿದ್ದರೇ, ಜೀ ಕನ್ನಡ 415697 ಅಂಕ ಪಡೆದು ಮೊದಲ ಸ್ಥಾನವನ್ನ ಅಲಂಕರಿಸಿದೆ.

  'ಜಿ.ಆರ್.ಪಿ'ಯಲ್ಲಿ ಜೀ ಕನ್ನಡ ಏಕ್ದಂ ಜಿಗಿತ: ಎಲ್ಲಾ 'ಕಾಮಿಡಿ ಕಿಲಾಡಿಗಳ' ಕರಾಮತ್ತು.!

  ಎರಡನೇ ವಾರದ ಕಥೆಯೇನು?

  ಇದು 2019ನೇ ವರ್ಷದ ಮೊದಲ ವಾರದ ಫಲಿತಾಂಶ. ಸಹಜವಾಗಿ ಜೀ ಕನ್ನಡ ವಾಹಿನಿಗೆ ಗೆಲುವು ಸಿಕ್ಕಿದೆ. ಈ ಗೆಲುವನ್ನ ಜೀ ಕನ್ನಡ ಉಳಿಸಿಕೊಳ್ಳುತ್ತಾ ಗೊತ್ತಿಲ್ಲ. ಬಟ್, ಇದು ಕಲರ್ಸ್ ಕನ್ನಡ ವಾಹಿನಿಗೆ ಎಚ್ಚರಿಕೆಯ ಗಂಟೆ ಎಂಬುದನ್ನ ಮರೆಯುವಂತಿಲ್ಲ. ಒಂದು ವಾರ ಹಿಂದೆ ಬಿದ್ದ ಕಾರಣ ಮತ್ತೆ ಹಠಕ್ಕೆ ಬಿದ್ದು ಮೊದಲ ಸ್ಥಾನವನ್ನ ಗಿಟ್ಟಿಸಿಕೊಳ್ಳಲು ಪಣ ತೊಟ್ಟಿರಬಹುದು. ಇದರ ಫಲಿತಾಂಶ ಕಾದು ನೋಡೋಣ.

  ಕಲರ್ಸ್ ವಾಹಿನಿಯ ಮುಖ್ಯಕಾರ್ಯಕ್ರಮಗಳು

  ಅಗ್ನಿಸಾಕ್ಷಿ, ರಾಧರಮಣ, ಪುಟ್ಟಗೌರಿ ಮದುವೆ, ಕುಲವಧು, ಲಕ್ಷ್ಮಿ ಬಾರಮ್ಮ, ಪದ್ಮಾವತಿ, ಶನಿ, ಮಹಾಕಾಳಿ, ಸೀತಾ ವಲ್ಲಭ, ಕಿನ್ನರಿ ಪ್ರತಿದಿನ ಪ್ರಸಾರವಾಗುವ ಜನಪ್ರಿಯ ಧಾರಾವಾಹಿಗಳು. ಇವುಗಳು ಜೊತೆ ಮಜಾ ಟಾಕೀಸ್, ಮಜಾ ವೀಕೆಂಡ್ ಶೋಗಳು ವಾರಾಂತ್ಯದಲ್ಲಿ ಕಿಕ್ ನೀಡುತ್ತಿವೆ.

  ಜೀ ಕನ್ನಡ ಪ್ರಮುಖ ಕಾರ್ಯಕ್ರಮಗಳು

  ಸುಬ್ಬಲಕ್ಷ್ಮಿ ಸಂಸಾ, ನಾಗಿಣಿ, ಯಾರೇ ನೀ ಮೋಹಿನಿ, ಶ್ರೀವಿಷ್ಣು ದಶಾವತಾರ, ಬ್ರಹ್ಮಗಂಟು, ಪಾರು, ಜೋಡಿಹಕ್ಕಿ, ಕಮಲಿ, ಗಂಗಾ ಧಾರಾವಾಹಿಗಳ ಜೊತೆ ಸರಿಗಮಪ 15 ಸಾಥ್ ನೀಡ್ತಿದೆ.

  ಮೂರನೇ ಸ್ಥಾನದಲ್ಲಿ ಯಾರಿದ್ದಾರೆ?

  ಜೀ ಕನ್ನಡ ಮತ್ತು ಕಲರ್ಸ್ ಕನ್ನಡ ನಂತರದ ಸ್ಥಾನಗಳಲ್ಲಿ ಪ್ರತಿವಾರದಂತೆ ಉದಯಟಿವಿ, ಉದಯ ಮೂವೀಸ್, ಸ್ಟಾರ್ ಸುವರ್ಣ ವಾಹಿನಿಗಳು ಸ್ಥಾನ ಪಡೆದುಕೊಂಡಿದೆ.

  English summary
  For the first time in its 13-year-run Zee Kannada has become the No.1 Kannada General Entertainment Channel relegating Colors Kannada to the second spot.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more