For Quick Alerts
  ALLOW NOTIFICATIONS  
  For Daily Alerts

  ಜೀ ಪ್ರಶಸ್ತಿ ಗೆದ್ದ 'ಹೆಮ್ಮೆಯ ಕನ್ನಡಿಗರು' ಇವರೇ

  |

  ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ ಹೆಮ್ಮೆಯ ಕನ್ನಡಿಗರು ಸಂಭ್ರಮದಲ್ಲಿ ಅನೇಕರು ಪ್ರಶಸ್ತಿ ಗೆದ್ದು ಬೀಗಿದ್ದಾರೆ. ಕೇವಲ ಸಿನಿಮಾ ಮಾತ್ರವಲ್ಲದೆ ನಾನಾ ವಿಭಾಗಳಲ್ಲಿ ಸೇವೆ ಸಲ್ಲಿಸಿದ ಸಾಧಕರನ್ನು ಗುರುತಿಸಿ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗಿತು.

  ಜೀ ಕನ್ನಡ ಆಯೋಜಿಸಿದ್ದ ಹೆಮ್ಮೆಯ ಕಾರ್ಯಕ್ರಮ ಹೆಮ್ಮೆಯ ಕನ್ನಡಿಗ ಶನಿವಾರ ಮತ್ತು ಭಾನುವಾರ (ಮಾರ್ಚ್-30/31) ಎರಡು ದಿನ ಪ್ರಸಾರವಾಗಿದೆ. ಈ ವೇದಿಕೆ ಮನರಂಜನೆಯ ಜೊತೆಗೆ ಅಪರೂಪದ ಸಾಧಕರನ್ನು ಗುರುತಿಸಿ ಗೌರವ ಸಲ್ಲಿಸುವ ಮಹತ್ತರ ಕಾರ್ಯಕ್ರಮವಾಗಿದೆ.

  ಹೆಮ್ಮೆಯ ಕನ್ನಡಿಗರಾಗಿ ಸಾಕಷ್ಟು ಮಂದಿ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ. ಅದರಲ್ಲಿ ಕನ್ನಡದ 'ಕೆಜಿಎಫ್' ಸಿನಿಮಾ ಸಾಲು ಸಾಲು ಪ್ರಶಸ್ತಿಗಳನ್ನು ಬಾಚಿಕೊಂಡರೆ ಇದರ ಜೊತೆಗೆ ಉತ್ತಮ ಗಾಯಕ, ನಟ, ನಟಿ, ನಿರ್ದೇಶಕ ಪ್ರಶಸ್ತಿ ಸೇರಿದಂತೆ ಸಾಕಷ್ಟು ಮಂದಿ ಪ್ರಶಸ್ತಿ ಪಡೆದು ಸಂಭ್ರಮಿಸಿದವರ ಪಟ್ಟಿ ಇಲ್ಲಿದೆ. ಮುಂದೆ ಓದಿ....

  'ಹೆಮ್ಮೆಯ ಕನ್ನಡಿಗ' ವೇದಿಕೆಯಲ್ಲಿ ಜೈಜಗದೀಶ್ ಪುತ್ರಿಯರ ಡ್ಯಾನ್ಸ್

  ಹೆಮ್ಮೆಯ ಕನ್ನಡಿಗ ಹೆಚ್ಚು ಪಾಲು 'ಕೆಜಿಎಫ್' ಗೆ

  ಹೆಮ್ಮೆಯ ಕನ್ನಡಿಗ ಹೆಚ್ಚು ಪಾಲು 'ಕೆಜಿಎಫ್' ಗೆ

  ಹೆಮ್ಮೆಯ ಕನ್ನಡಿಗ ಪ್ರಶಸ್ತಿ ಸಮಾರಂಭದಲ್ಲಿ ಹೆಚ್ಚು ಪಾಲು ಪ್ರಶಸ್ತಿ ಬಾಚಿಕೊಂಡಿದ್ದು ಹೆಮ್ಮೆಯ 'ಕೆಜಿಎಫ್' ಸಿನಿಮಾ. ಚಿತ್ರದಲ್ಲಿ ನಾಯಕನಾಗಿ ಮಿಂಚಿದ್ದ ನಾಯಕ ಯಶ್ ಹೆಮ್ಮೆಯ ನಟ ಪ್ರಶಸ್ತಿ ಪಡೆದರೆ, ಹೆಮ್ಮೆಯ ಸಿನಿಮಾ ಪ್ರಶಸ್ತಿ ಕೂಡ 'ಕೆಜಿಎಫ್' ಸಿನಿಮಾಗೆ ಲಭಿಸಿದೆ.

  6 ಪ್ರಶಸ್ತಿ ಪಡೆದ 'ಕೆಜಿಎಫ್'

  6 ಪ್ರಶಸ್ತಿ ಪಡೆದ 'ಕೆಜಿಎಫ್'

  ಇನ್ನು ಹೆಮ್ಮೆಯ ನಿರ್ದೇಶಕ ಪ್ರಶಾಂತ್ ನೀಲ್, ಹೆಮ್ಮೆಯ ಖಳನಟ ಗರುಡ ಖ್ಯಾತಿಯ ರಾಮ್ ಚಂದ್ರ ರಾಜು, ಹೆಮ್ಮೆಯ ಛಾಯಾಗ್ರಾಹಕ ಭುವನ್ ಗೌಡ, ಮತ್ತು ಹೆಮ್ಮೆಯ ಹಿನ್ನಲೆ ಸಂಗೀತ ನಿರ್ದೇಶಕ ರವಿ ಬಸ್ರೂರ್ ಹೆಮ್ಮೆಯ ಕನ್ನಡಿಗ ಪ್ರಶಸ್ತಿ ಎತ್ತಿ ಹಿಡಿದು ಸಂಭ್ರಮಿಸಿದ್ರು.

  ಜೂನಿಯರ್ ಶಿವಣ್ಣನನ್ನು ಕರೆ ತಂದ ವಾಹಿನಿ ಮೇಲೆ ವೀಕ್ಷಕರ ಉರಿಗಣ್ಣು!

  ಹೆಮ್ಮೆಯ ನಟಿ ಯಾರು ಗೊತ್ತಾ?

  ಹೆಮ್ಮೆಯ ನಟಿ ಯಾರು ಗೊತ್ತಾ?

  ಹೆಮ್ಮೆಯ ಕನ್ನಡಿಗ ಕಾರ್ಯಕ್ರಮದಲ್ಲಿ ಹೆಮ್ಮೆಯ ನಟಿ ಪ್ರಶಸ್ತಿ ನಟಿ ರಚಿತಾ ರಾಮ್ ಪಾಲಾಗಿದೆ. ವೇದಿಕೆ ಮೇಲೆ ನೃತ್ಯ ಮಾಡಿ ಅಭಿಮಾನಿಗಳನ್ನು ಸಂಭ್ರಮಿಸುವುದರ ಜೊತೆಗೆ ನಿರ್ದೇಶಕ ಯೋಗರಾಜ್ ಭಟ್ ಕೈಯಿಂದ ಪ್ರಶಸ್ತಿ ಪಡೆದು ಸಂಭ್ರಮಿಸಿದ್ರು.

  ಹೆಮ್ಮೆಯ ಗಾಯಕ ವಿಜಯ್ ಪ್ರಕಾಶ್

  ಹೆಮ್ಮೆಯ ಗಾಯಕ ವಿಜಯ್ ಪ್ರಕಾಶ್

  ಹೆಮ್ಮೆಯ ಕನ್ನಡಿಗ ವೇದಿಕೆಯಲ್ಲಿ ಹೆಮ್ಮೆಯ ಗಾಯಕ ಪ್ರಶಸ್ತಿ ವಿಜಯ್ ಪ್ರಕಾಶ್ ಪಾಲಾಗಿದೆ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಿರುವ ಸರಿಗಮಪ ರಿಯಾಲಿಟಿ ಶೋ ಕಾರ್ಯಕ್ರಮದ ಜಡ್ಜ್ ಕೂಡ ಆಗಿರುವ ವಿಜಯ್ ಪ್ರಕಾಶ್ ಉತ್ತಮ ಗಾಯಕ ಪ್ರಶಸ್ತಿ ಪಡೆದರು.

  ಹೆಮ್ಮೆಯ ಪೋಷಕ ನಟ

  ಹೆಮ್ಮೆಯ ಪೋಷಕ ನಟ

  ಹೆಮ್ಮೆಯ ಪೋಷಕ ನಟ ಪ್ರಶಸ್ತಿ ನಟ ಧನಂಜಯ್ ಪಾಲಾಗಿದೆ. ದುನಿಯಾ ಸೂರಿ ನಿರ್ದೇಶನದ 'ಟಗರು' ಚಿತ್ರದಲ್ಲಿ ಡಾಲಿ ಆಗಿ ಅಬ್ಬರಿಸಿ ಚಿತ್ರಾಭಿಮಾನಿಗಳ ಮನಗೆದ್ದಿದ್ದ ಧನಂಜಯ್ ಜೀ ಕನ್ನಡ ವೇದಿಕೆಯಲ್ಲಿ ಹೆಮ್ಮೆಯ ಕನ್ನಡಿಗನಾಗಿ ಪ್ರಶಸ್ತಿ ಪಡೆಸಿದ್ದಾರೆ.

  ಅನುಶ್ರೀಯ ಫೇವರೇಟ್ ಅಂಕರ್ ಯಾರು ಗೊತ್ತೆ?

  ಹೆಮ್ಮೆಯ ಹಾಸ್ಯ ನಟ

  ಹೆಮ್ಮೆಯ ಹಾಸ್ಯ ನಟ

  ಹೆಮ್ಮೆಯ ಹಾಸ್ಯ ನಟ ಪ್ರಶಸ್ತಿ ಚಿಕ್ಕಣ್ಣ ಪಾಲಾಗಿದೆ. ತರಹೇವಾರಿ ಕಾಮಿಡಿ ಪಾತ್ರಗಳ ಮೂಲಕ ಸಿನಿಪ್ರಿಯರನ್ನು ನಗೆಗಡಲಲ್ಲಿ ತೇಲಿಸುವ ಚಿಕ್ಕಣ್ಣ ಹೆಮ್ಮೆಯ ಹಾಸ್ಯ ಕನ್ನಡಿಗನಾಗಿ ಹೊರಹೊಮ್ಮಿದ್ದಾರೆ.

  ಇವರು ಸಹ ಹೆಮ್ಮೆಯ ಕನ್ನಡಿಗರು

  ಇವರು ಸಹ ಹೆಮ್ಮೆಯ ಕನ್ನಡಿಗರು

  ಹೆಮ್ಮೆಯ ಪ್ರತಿಭೆ ಪ್ರಶಸ್ತಿ ರಿಷಭ್ ಶೆಟ್ಟಿ ಪಡೆದುಕೊಂಡಿದ್ದಾರೆ. ಈ ಪ್ರಶಸ್ತಿಯನ್ನು ರಿಭಷ್ ಶೆಟ್ಟಿ ಕನ್ನಡ ಶಾಲೆಯಲ್ಲಿ ಓದುವ ಮಕ್ಕಳಿಗೆ ಅರ್ಪಿಸಿದ್ದಾರೆ. ಹೆಮ್ಮೆಯ ಸಾಹಿತಿ ದೊಡ್ಡರಂಗೇಗೌಡ ಮತ್ತು ಹೆಮ್ಮೆಯ ಚಿತ್ರಸಾಹಿತಿ ವಿ.ನಾಗೇಂದ್ರ ಪ್ರಸಾದ್ ಪಾಲಾಗಿದೆ.

  English summary
  Kannada actor yash, rachitha ram, singer vijay prakash are wins Zee kannada hemmeya kannadiga award. kgf movie wins more than 6 award.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X