»   » 'ಜೀ ಕುಟುಂಬ ಅವಾರ್ಡ್ಸ್ 2013'ಗಾಗಿ ತೀವ್ರ ಸ್ಪರ್ಧೆ

'ಜೀ ಕುಟುಂಬ ಅವಾರ್ಡ್ಸ್ 2013'ಗಾಗಿ ತೀವ್ರ ಸ್ಪರ್ಧೆ

Posted By:
Subscribe to Filmibeat Kannada

ಕನ್ನಡಿಗರ ಕಣ್ಮಣಿ ವಿಭಿನ್ನ ಕಾರ್ಯಕ್ರಮಗಳಿಂದ ಜನಮನ ಗೆದ್ದ ಜೀ ಕನ್ನಡ ವಾಹಿನಿ ಇನ್ನೊಂದು ಬೃಹತ್ ಕಾರ್ಯಕ್ರಮಕ್ಕೆ ವೇದಿಕೆ ಸಜ್ಜುಗೊಳಿಸುತ್ತಿದೆ. ಜೀ ಕನ್ನಡ ವಾಹಿನಿ ಕರ್ನಾಟಕಕ್ಕೆ ಕಾಲಿಟ್ಟು ಎಂಟು ವರ್ಷಗಳಾಗುತ್ತಿವೆ. ಪ್ರತೀ ವರ್ಷವೂ ವಾಹಿನಿಯು 'ಜೀ ಕುಟುಂಬ ಆವಾರ್ಡ್' ಪ್ರಶಸ್ತಿ ಸಮಾರಂಭ ಆಯೋಜಿಸುತ್ತಾ ಬಂದಿದೆ. ಪ್ರಶಸ್ತಿ ಕಾನ್ಸೆಪ್ಟ್ ಕೂಡಾ ಭಿನ್ನ ಎನ್ನುವುದು ವಿಶೇಷ.

ಈ ಬಾರಿ 'ಜೀ ಕುಟುಂಬ ಅವಾರ್ಡ್ಸ್ - 2013' ಕಾರ್ಯಕ್ರಮವು 28 ವಿಭಾಗಗಳಲ್ಲಿ ಪ್ರಶಸ್ತಿ ಹಮ್ಮಿಕೊಳ್ಳಲಾಗಿದ್ದು ಅತ್ಯಂತ ಅದ್ದೂರಿ ಕಾರ್ಯಕ್ರಮ ಇದಾಗಲಿದೆ. ಜನವರಿ 11 ರಂದು ಸಂಜೆ 5:30 ರಿಂದ ಬೆಂಗಳೂರಿನ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

Zee Kutumba Awards 2013

'ಜೀ ಕುಟುಂಬ ಆವಾರ್ಡ್ಸ್' ನಲ್ಲಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿಗಳು, ರಿಯಾಲಿಟಿ ಷೋಗಳು ಮತ್ತು ಇತರೆ ಕಾರ್ಯಕ್ರಮ ವಿಭಾಗಗಳಲ್ಲಿ ಪ್ರಶಸ್ತಿಗಳು ಇರುತ್ತವೆ. ಎಂಟು ವಿಭಾಗಗಳಲ್ಲಿ ವಿಜೇತರನ್ನು ವೀಕ್ಷಕರೇ ಎಸ್‍ಎಂಎಸ್ ಮೂಲಕ ಆಯ್ಕೆ ಮಾಡಿರುತ್ತಾರೆ, ಇನ್ನುಳಿದ 20 ವಿಭಾಗಗಳನ್ನು ಹಿರಿಯ ನಿರ್ದೆಶಕರು, ಕಲಾವಿದರು ಹಿರಿಯ ಪತ್ರಕರ್ತರು ಆಯ್ಕೆ ಮಾಡಿರುತ್ತಾರೆ.

ಪ್ರಶಸ್ತಿಗಳನ್ನು ವಿಭಿನ್ನವಾಗಿ ಪ್ರಕಟಿಸುವ ಇರಾದೆ ಜೀ ಕನ್ನಡ ತಂಡದವರದು. ಹೀಗಾಗಿ ಮಾಮೂಲಿಯಾಗಿ ಶ್ರೇಷ್ಠ ನಟ, ಶ್ರೇಷ್ಠ ನಟಿ ಈ ತರಹ ಇರುವುದೇ ಇಲ್ಲ. ಬದಲಿಗೆ 'ಜೀ ಕುಟುಂಬ' ಎಂಬ ಹೆಸರಿಗೆ ಅನ್ವರ್ಥಕವಾಗುವಂತೆ ಕೌಟುಂಬಿಕ ಮೌಲ್ಯಗಳನ್ನು ಎತ್ತಿ ಹಿಡಿಯುವಂತಹ ಪ್ರಶಸ್ತಿಗಳೇ ಇರುತ್ತವೆ. ಉದಾಹರಣೆಗೆ: ಧಾರಾವಾಹಿಗಳಲ್ಲಿ ಅತ್ಯುತ್ತಮ ಕುಟುಂಬ, ಅತ್ಯುತ್ತಮ ಜೋಡಿ, ಅತ್ಯುತ್ತಮ ಮಗ-ಮಗಳು ಇತ್ಯಾದಿ. ರಿಯಾಲಿಟಿ ಶೋ, ಹಾಸ್ಯ ಮತ್ತು ನಿರೂಪಣೆ ವಿಭಾಗಕ್ಕೆ ಬೇರೆ ಪ್ರಶಸ್ತಿಗಳಿವೆ.

ಈಗಾಗಲೇ ಪ್ರಶಸ್ತಿಯ ರೇಸ್ ನಲ್ಲಿ ಬೇರೆ ಬೇರೆ ಧಾರಾವಾಹಿಗಳ ಮೇಲೆ ಬೆಟ್ ಕಟ್ಟುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕೆಲವರು ಅತ್ಯುತ್ತಮ ಕುಟುಂಬ 'ಬಲು ಅಪರೂಪ ನಮ್ಮ ಜೋಡಿ' ಅಂತ ಹೇಳಿದರೆ, ಮತ್ತೆ ಕೆಲವರು 'ಭಾರತಿ' ಅಂತ ಹೇಳುತ್ತಿದ್ದಾರೆ. 'ಪುನರವಿವಾಹ' ಮುನ್ನುಗ್ಗುತ್ತಿದ್ದರೆ, ಅತ್ಯುತ್ತಮ ಜೋಡಿಗಂತೂ ತುರುಸಿನ ಸ್ಪರ್ಧೆ ಏರ್ಪಟ್ಟಿದೆ, 'ನಿತ್ಯೋತ್ಸವ' ಜೋಡಿ ಅನಂತನಾಗ್-ವಿನಯಾ ಪ್ರಸಾದ ಇದ್ದರೆ 'ಪುರುಷೋತ್ತಮಾ' ಧಾರಾವಾಹಿಯ ದಿಲಿಪರಾಜ್ & ಮೆಘನಾ, ಹೀಗೆ ಜನಪ್ರಿಯ ಜೋಡಿಗಳ ನಡುವೆ ಮೇಲಾಟ.

ಅತ್ತೆ ಸೊಸೆಯಂತೂ ಕೇಳುವ ಹಾಗೇ ಇಲ್ಲ. ಅಮ್ಮ-ಮಗಳು ಎಲ್ಲ ಜೋಡಿಯೂ ಇಷ್ಟವೇ. ಹೀಗಾಗಿ ಕೊನೆಯ ಕ್ಷಣದವರೆಗೂ ಯಾವ ಪ್ರಶಸ್ತಿ ಯಾರ ಮಡಿಲಿಗೆ ಎನ್ನುವುದನ್ನು ಊಹಿಸಲಾಗದ ಪರಿಸ್ಥಿತಿ. ಎಸ್‍ಎಂಎಸ್ ಗಳ ಆಧಾರದ ಮೇಲೆ ವೇದಿಕೆಯ ಮೇಲೆ ಪ್ರಶಸ್ತಿ ಘೋಷಿಸಿದಾಗಲೇ ಎಲ್ಲರಿಗೂ ಗೊತ್ತಾಗುವುದು.

ಕಾರ್ಯಕ್ರಮದಲ್ಲಿ ಜೀ ಕುಟುಂಬದ ಸದಸ್ಯರು, ಚಿತ್ರ ನಟ ಯೋಗಿ, ಚಿತ್ರನಟಿ ಶರ್ಮಿಳಾ ಮಾಂಡ್ರೆ ಅವರ ಹಾಡು ಮತ್ತು ಡ್ಯಾನ್ಸ್ ಗಳು ಭರ್ಜರಿಯಾಗೇ ಇರುತ್ತವೆ. ಸೃಜನ್ ಲೋಕೇಶ್- ಶ್ವೇತಾ ಚೆಂಗಪ್ಪಾ ಕಾರ್ಯಕ್ರಮ ನಡೆಸಿಕೊಡಲ್ಲಿದ್ದಾರೆ. ಚಿತ್ರರಂಗದ ದಿಗ್ಗಜರು, ರಾಜಕೀಯ ಗಣ್ಯರನ್ನು ಈ ಅದ್ದೂರಿ ಕಾರ್ಯಕ್ರಮ ವೀಕ್ಷಣೆಗೆ ಆಹ್ವಾನಿಸಲಾಗಿದೆ. (ಒನ್ಇಂಡಿಯಾ ಆನ್ ಲೈನ್ ಸಂಗಾತಿ)

English summary
The Zee Kutumba Awards 2013 is happening on 10th & 11th of January,2014. But the Main Event is happening on 11th January 2014 5 pm. It's the Third year Award Ceremony happening in Zee Kannada. The Event is taking place in National College Grounds, Basavangudi, Bangalore.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada