»   » ಜೀ ಕನ್ನಡದಲ್ಲಿ ನೋಡಿ ಶಿವಣ್ಣನ ಜೊತೆ ಶಿವ-ರಾತ್ರಿ'

ಜೀ ಕನ್ನಡದಲ್ಲಿ ನೋಡಿ ಶಿವಣ್ಣನ ಜೊತೆ ಶಿವ-ರಾತ್ರಿ'

Posted By:
Subscribe to Filmibeat Kannada
ಜೀ ಕನ್ನಡ ವಾಹಿನಿ ಇದೇ ಭಾನುವಾರ ಜುಲೈ 01 ರಂದು ಸಂಜೆ 6:00 ಗಂಟೆಗೆ 'ಶಿವಣ್ಣನ ಜೊತೆ ಶಿವ-ರಾತ್ರಿ' ಎಂಬ ಭರ್ಜರಿ ಕಾರ್ಯಕ್ರಮ ಪ್ರಸಾರ ಮಾಡುತ್ತಿದೆ. ಚಿತ್ರದುರ್ಗದ ಮದಕರಿ ಮೈದಾನದಲ್ಲಿ ಇತ್ತೀಚಿಗೆ ನಡೆದ 'ಶಿವ' ಚಿತ್ರದ ಆಡಿಯೋ ಬಿಡುಗಡೆ ಸಮಾರಂಭವೇ 'ಶಿವ-ರಾತ್ರಿ'. ಇಡೀ ಕನ್ನಡ ಚಿತ್ರಲೋಕವೇ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿತ್ತು. ನಲವತ್ತು ಸಾವಿರಕ್ಕೂ ಅಧಿಕ ಜನ ಸೇರಿದ್ದ ಈ ಸಮಾರಂಭದಲ್ಲಿ ಸ್ವತಃ ಶಿವಣ್ಣ ಹಾಡಿದರು, ಕುಣಿದರು, ಭಾವುಕರಾಗಿ ಮಾತನಾಡಿದರು.

ಉಪೇಂದ್ರ, ದುನಿಯಾ ವಿಜಿ, ವಿಜಯ ರಾಘವೇಂದ್ರ, ಪಂಕಜ್, ರಾಗಿಣಿ ದ್ವಿವೇದಿ, ರಿಷಿಕಾ ಸಿಂಗ್ ಹೀಗೆ ಕನ್ನಡ ಸಿನಿ ತಾರೆಯರ ದಂಡು ವಿವಿಧ ಹಾಡುಗಳಿಗೆ ನರ್ತಿಸಿತು. ಉಪೇಂದ್ರ 'ರಕ್ತ ಕಣ್ಣೀರು' ಚಿತ್ರದ ಡೈಲಾಗ್ ಒಗೆದರೆ ದುನಿಯಾ ವಿಜಿ 'ಹೊಡಿ ಮಗ ಹೊಡಿ ಮಗ' ಹಾಡಿಗೆ ದೊಣ್ಣೆ ಹಿಡಿದರು. 'ಶಿವ' ಚಿತ್ರದ ಹಾಡುಗಳಿಗೆ ವಿಶೇಷವಾಗಿ ನೃತ್ಯ ಸಂಯೋಜನೆ ಮಾಡಲಾಗಿತ್ತು.

ಅನೇಕ ನಿರ್ಮಾಪಕರು, ವಿತರಕರು, ರಾಜಕೀಯ ಗಣ್ಯರು ಪಾಲ್ಗೊಂಡಿದ್ದ ಈ ಸಮಾರಂಭದಲ್ಲಿ ಗೀತಾ ಶಿವರಾಜ್ ಕುಮಾರ್ ಸಹ ವೇದಿಕೆ ಏರಿದ್ದರು. ನೆಚ್ಚಿನ ತಾರೆಯರನ್ನು ನೋಡಲು ನೂಕು ನುಗ್ಗಲು ಉಂಟಾಗಿ ಲಾಠಿ ಪ್ರಹಾರ ಕೂಡ ಆಯಿತು. ಶಿವಣ್ಣನ ಬಹುನಿರೀಕ್ಷಿತ ಚಿತ್ರ 'ಶಿವ' ವರಮಹಾಲಕ್ಷ್ಮಿ ಹಬ್ಬಕ್ಕೆ ಬಿಡುಗಡೆಯಾಗಲಿದೆ.

ಈ ಚಿತ್ರವನ್ನು ಓಂ ಪ್ರಕಾಶ್ ರಾವ್ ನಿರ್ದೇಶಿಸಿದ್ದು ನಟಿ ರಾಗಿಣಿ ಶಿವಣ್ಣರಿಗೆ ನಾಯಕಿಯಾಗಿ ನಟಿಸಿದ್ದಾರೆ. ಬ್ಯಾಂಕಾಕ್, ಸಿಂಗಾಪುರ ಹಾಗೂ ಹಲವು ವಿದೇಶಗಳಲ್ಲಿ ಈ ಚಿತ್ರಕ್ಕೆ ಅದ್ದೂರಿ ಸೆಟ್ ಹಾಗೂ ಅಪರೂಪದ ಸೌಂದರ್ಯತಾಣಗಳಲ್ಲಿ ಚಿತ್ರೀಕರಣ ನಡೆದಿದೆ. ಈ ಚಿತ್ರ ಶಿವಣ್ಣ ಅಭಿನಯದ '101' ನೇ ಚಿತ್ರ.

ಕಾರ್ಯಕ್ರಮಕ್ಕೆ ಶಿವಣ್ಣ ಮತ್ತು ಸಹಕಲಾವಿದರು ವಾರ ಮುಂಚೆಯೇ ನಡೆಸಿದ ತಾಲೀಮು, ವೇದಿಕೆ ತಾಲೀಮು, ಅಲ್ಲಿ ನಡೆದ ಹಾಸ್ಯ ಪ್ರಸಂಗಗಳು ಮುಂತಾದ ಚಿನಕುರುಳಿ ವಿಷಯಗಳನ್ನು ಒಳಗೊಂಡ 'ಮೇಕಿಂಗ್ ಆಫ್ ಶಿವ-ರಾತ್ರಿ' ಕೂಡ ಜುಲೈ 01ರ ಭಾನುವಾರ ಸಂಜೆ 5-00 ಗಂಟೆಯಿಂದ ಪ್ರಸಾರವಾಗಲಿದೆ. 6-00 ಗಂಟೆಯಿಂದ ಜೀ ಕನ್ನಡದಲ್ಲಿ ವಿಜೃಂಭಿಸಲಿದ್ದಾನೆ ಢಂ ಢಂ ಡಮರುಗ ಭೋಲೆನಾಥ 'ಶಿವ'! (ಒನ್ ಇಂಡಿಯಾ ಕನ್ನಡ)

English summary
Zee Kannada telecasts Programme Shivrajkumar's 'Shiva-Rathri on 01 July 2012 at 6-00 PM. Shiva movie Audio release programme was held at Chtradurga Madakari Ground recently.
 
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada