»   » ಜೀ ಕನ್ನಡದಲ್ಲಿ ಹೊಸ ರಿಯಾಲಿಟಿ ಶೋ ಮಮ್ಮಿ ನಂ.1

ಜೀ ಕನ್ನಡದಲ್ಲಿ ಹೊಸ ರಿಯಾಲಿಟಿ ಶೋ ಮಮ್ಮಿ ನಂ.1

Posted By:
Subscribe to Filmibeat Kannada
Srujan Lokesh & Varsha
ಹೆಣ್ಣಿಗೆ ತಾಯ್ತನ ಅನ್ನುವುದು ನಿಸರ್ಗ ನೀಡಿದ ಕೊಡುಗೆ. ತಾಯ್ತನದ ಜವಾಬ್ದಾರಿ ಹೊರುವಾಗ ಪ್ರತಿಫಲಾಪೇಕ್ಷೆ ಇರುವುದಿಲ್ಲ. ಅದಕ್ಕಾಗಿಯೇ ತಾಯಿಯನ್ನು ಕರುಣಾಮಯಿ, ತ್ಯಾಗಮಯಿ ಎಂದೆಲ್ಲಾ ಕರೆಯಲಾಗುವುದು.

ನಿತ್ಯ ಗಂಡ, ಮನೆ ಮಕ್ಕಳು ಎಂದು ಸಂಸಾರದ ಜಂಜಾಟದಲ್ಲೇ ಜೀವನ ಸವೆಸುತ್ತಿರುವ ಅಮ್ಮಂದಿರ ಪ್ರತಿಭೆ ಅನಾವರಣಕ್ಕೆ ಜೀ ಕನ್ನಡ ಮುಂದಡಿ ಇಡುತ್ತಿದೆ. ಅಮ್ಮಂದಿರ ಅಂತರಾಳವನ್ನು ಅದರೊಂದಿಗೆ ಮನರಂಜನೆಯನ್ನೂ ಉಣಬಡಿಸುವ ಕಾರ್ಯಕ್ರಮವೇ 'ಮಮ್ಮಿ ನಂ 1'.

ತಾಯಂದಿರು ತಮ್ಮಲ್ಲಿರುವ ವಿಶೇಷ ಪ್ರತಿಭೆ ಪ್ರದರ್ಶಿಸುವ ಜೊತೆಗೆ ಹೆಮ್ಮೆ ಪಡುವಂತೆ ಮಾಡುವುದಲ್ಲದೇ ಒಂದು ಗಂಟೆ ಜೀವನದ ಜಂಟಾಟದಿಂದ ಮುಕ್ತವಾಗಿ ಕಾಲ ಕಳೆಯುವಂತೆ ಮಾಡುವುದೇ ಈ ಕಾರ್ಯಕ್ರಮದ ಮುಖ್ಯ ಉದ್ದೇಶ ಎನ್ನುತ್ತದೆ ಜೀ ವಾಹಿನಿ.

ಪ್ರತಿಯೊಬ್ಬರಿಗೂ ಅವರವರ ಅಮ್ಮ ನಂ.1. ಆದರೆ ಈ ಕಾರ್ಯಕ್ರಮದ ವಿವಿಧ ವಿಭಾಗಗಳಲ್ಲಿ ಯಾವ ಅಮ್ಮ ಸ್ಫೂರ್ತಿದಾಯಕವಾಗಿ ಭಾವಹಿಸಿ, ಸಹನೆ, ತಾಳ್ಮೆ ಹಾಗೂ ಪ್ರೀತಿಯಿಂದ ತೀರ್ಪುಗಾರರ ಮೆಚ್ಚುಗೆ ಗಳಿಸುವರೋ ಅವರನ್ನು 'ಮಮ್ಮಿ ನಂ.1' ಆಗಿ ಆಯ್ಕೆ ಮಾಡಲಾಗುತ್ತದೆ.

ಆಧುನಿಕ ಜೀವನ ಪದ್ಧತಿಯ ಒತ್ತಡಕ್ಕೆ ಸಿಲುಕಿ ತಾಯಿ ಮಕ್ಕಳ ಸಂಬಂಧ ಒಂದು ರೀತಿಯಲ್ಲಿ ಯಾಂತ್ರೀಕರಣಗೊಂಡಿದೆ. ಇಂದಿನ ಪರಿಸ್ಥಿತಿಯಲ್ಲಿ ತಾಯಿ ಮಕ್ಕಳ ಸಂಬಂಧ ಬೆಸೆಯುವ ಪ್ರಯತ್ನವನ್ನು ಈ ಕಾರ್ಯಕ್ರಮದ ಮೂಲಕ ಮಾಡಲಾಗುತ್ತಿದೆ ಎನ್ನುತ್ತಾರೆ ಜೀ ವಾಹಿನಿಯ ಕಾರ್ಯಕಾರಿ ಉಪಾಧ್ಯಕ್ಷ ಡಾ.ಗೌತಮ್ ಮಾಚಯ್ಯ.

ನವೆಂಬರ್ 17ರಿಂದ ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 9 ಗಂಟೆಗೆ ಈ ಕಾರ್ಯಕ್ರಮವನ್ನು ಜೀ ಕನ್ನಡದಲ್ಲಿ ಕಣ್ತುಂಬಿಕೊಳ್ಳಬಹುದು. ಈ ವಿಶಿಷ್ಟ ಕಾರ್ಯಕ್ರಮ ಮಹಿಳೆಯರ ಮನಸೆಳೆಯುತ್ತದೆ ಎಂಬ ವಿಶ್ವಾಸ ಜೀ ಕನ್ನಡ ವಾಹಿನಿಯದು. ಕಾರ್ಯಕ್ರಮದ ನಿರೂಪಕರು ಸೃಜನ್ ಲೋಕೇಶ್ ಹಾಗೂ ವರ್ಷಾ. (ಒನ್ಇಂಡಿಯಾ ಕನ್ನಡ)

English summary
Zee Kannada is set to launch a new reality show Mummy No.1. The show will be telecast from November 17th at 9 pm on Saturday and Sundays. The reality show involving mothers and children.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada