»   » ಜೀ ಕನ್ನಡ ಬಿಗ್ ಶೋ 'ಲೈಫ್ ಸೂಪರ್ ಗುರೂ' ಶುರು

ಜೀ ಕನ್ನಡ ಬಿಗ್ ಶೋ 'ಲೈಫ್ ಸೂಪರ್ ಗುರೂ' ಶುರು

Posted By:
Subscribe to Filmibeat Kannada

ಕಿರುತೆರೆ ವಾಹಿನಿಗಳಲ್ಲಿ ಈಗ ರಿಯಾಲಿಟಿ ಶೋಗಳದ್ದೇ ಕಾರುಬಾರು. ತನ್ನ ವೀಕ್ಷಕರಿಗಾಗಿ ಯಾವಾಗಲೂ ಹೊಸದನ್ನು ನೀಡಲೆಂದು ಅನೇಕ ಹೊಸ ಹೊಸ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿರುವ ಜೀ ಕನ್ನಡ ವಾಹಿನಿ ಇದೀಗ ಹಿರಿಯ ನಾಗರೀಕರಿಗಾಗಿ ಒಂದು ವಿಶೇಷವಾದ ಕಾರ್ಯಕ್ರಮವನ್ನು ಆರಂಭಿಸಿದೆ.

ಹರೆಯದ ಯುವಕರು ಹಾಗೂ 60 ದಾಟಿದ, ಮಾಗಿದ ಆದರೂ ಉತ್ಸಾಹ ಕುಂದದ ಹಿರಿಯರ ನಡುವೆ ಸ್ಪರ್ಧೆ ಏರ್ಪಡಿಸಿ ಅದರಲ್ಲಿ ವಿಜೇತರಾದ 10 ಕಿರಿಯರು ಹಾಗೂ 10 ಹಿರಿಯರನ್ನು ಒಂದೇ ಮನೆಯಲ್ಲಿ 3 ತಿಂಗಳ ಕಾಲ ಇರಿಸಲಾಗುತ್ತದೆ.

ಅಲ್ಲಿ ಹಿರಿ-ಕಿರಿಯರಿಗಾಗಿ ಅನೇಕ ಕಷ್ಟಕರವಾದ ಹಾಸ್ಯಭರಿತವಾದ ಅದೆಲ್ಲಕ್ಕೂ ಮಿಗಿಲಾದ ಶೇ.40 ರಷ್ಟು ಚಟುವಟಿಕೆಗಳು ಅದೇ ಮನೆಯಲ್ಲಿ ನಡೆಯಲಿದ್ದು ಕಾರ್ಯಕ್ರಮದ ನಡುವೆ ಹಿರಿ-ಕಿರಿಯರಿಬ್ಬರನ್ನು ಒಂದೇ ತಂಡದಲ್ಲಿ ಸೇರಿಸಲಾಗುತ್ತದೆ.

ನಾವು ಯಾರಿಗೂ ಕಮ್ಮಿಯಿಲ್ಲ ಎನ್ನುತ್ತಿದ್ದಾರೆ ಸೀನಿಯರ್ಸ್

ಎರಡೂ ವಯೋಮಾನದವರ ನಡುವಿನ ಅಂತರವನ್ನು ಅಳಿಸುವ ಪ್ರಯತ್ನ ಈ ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ. ಅಲ್ಲದೆ ವಯಸ್ಸಾವರೆಂದು ವಯೋವೃದ್ಧರನ್ನು ಮೂಲೆಗೆ ಕೂರಿಸದೆ, ಅವಕಾಶ, ಪ್ರೋತ್ಸಾಹ ನೀಡಿದರೆ ನಾವು ಯಾರಿಗೂ ಕಮ್ಮಿಯಿಲ್ಲ ಎಂದು ತೋರಿಸುವರು ಎಂದು ಸಮಾಜಕ್ಕೆ ಮನವರಿಕೆ ಮಾಡಿಕೊಡುವುದು ಕೂಡ ಇವರಿಂದಾಗಿದೆ.

ವಿಜೇತರಿಗೆ ರು.10 ಲಕ್ಷ ನಗದು ಬಹುಮಾನ

ಈ ರಿಯಾಲಿಟಿ ಶೋನಲ್ಲಿ ಕಿರಿಯರ ಪ್ರತಿನಿಧಿಯಾಗಿ ನಟ ಲೂಸ್ ಮಾದ ಯೋಗಿ ಹಾಗೂ ಹಿರಿಯರ ಪ್ರತಿನಿಧಿಯಾಗಿ ನಿರ್ದೇಶಕರ ಗುರುಪ್ರಸಾದ್ ಭಾಗವಹಿಸಿದ್ದಾರೆ. ಕಾರ್ಯಕ್ರಮವನ್ನು ನಡೆಸಿಕೊಡುವ ಹಾಗೂ ಎಲಿಮಿನೇಟ್ ಮಾಡುವ ಜವಾಬ್ದಾರಿ ಇವರದಾಗಿರುತ್ತದೆ. ಈ ರಿಯಾಲಿಟಿ ಶೋನಲ್ಲಿ ವಿಜೇತರಾದವರಿಗೆ ರು.10 ಲಕ್ಷಗಳ ನಗದು ಬಹುಮಾನ ಕೂಡ ಇದೆ.

ಶೋ ಬಗ್ಗೆ ವಿವರ ನೀಡಿದ ರಾಘವೇಂದ್ರ

ಈ ಕಾರ್ಯಕ್ರಮದ ಬಗ್ಗೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಜೀ ವಾಹಿನಿಯ ಕಾರ್ಯಕ್ರಮ ಮುಖ್ಯಸ್ಥರಾದ ರಾಘವೇಂದ್ರ ಹುಣಸೂರು, 'ಲೈಫ್ ಸೂಪರ್ ಗುರೂ' ರಿಯಾಲಿಟಿ ಶೋನ ಸಂಪೂರ್ಣ ವಿವರಗಳನ್ನು ಪತ್ರಕರ್ತರಿಗೆ ನೀಡಿದರು.

ಹಿರಿ-ಕಿರಿಯರ ತಂಡಗಳ ಪ್ರತಿನಿಧಿಗಳು

ಹಿರಿ-ಕಿರಿಯರ ತಂಡಗಳ ಪ್ರತಿನಿಧಿಗಳಾದ ನಟ ಯೋಗಿ ಹಾಗೂ ಗುರುಪ್ರಸಾದ್ ಕೂಡ ಹಾಜರಿದ್ದು ತಮಗೊಪ್ಪಿಸಿದ ಈ ಜವಾಬ್ದಾರಿಯನ್ನು ಈ ಉತ್ಸಾಹಗಳೊಂದಿಗೆ ಸಮರ್ಥವಾಗಿ ನಿಭಾಯಿಸಿರುವುದಾಗಿ ಹೇಳಿಕೊಂಡರು.

ಇದೇ ನವೆಂಬರ್ 17ರಿಂದ ಶುರು ಗುರೂ

ಹಿರಿಯರು ಮತ್ತು ಕಿರಿಯರನ್ನು ಒಂದೇ ಮನೆಗೆ ಕರೆತರುತ್ತಿರುವ ಈ ಹೊಸ ತರಹದ ರಿಯಾಲಿಟಿ ಶೋ ಇದೇ ನವೆಂಬರ್ 17 ರಿಂದ ಪ್ರತಿದಿನ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 8.00 ರಿಂದ 9.00 ರವರೆಗೆ ಪ್ರಸಾರವಾಗಲಿದೆ.

English summary
Zee Kannada new reality show 'Life Super Guru' is all about old V/S young. 10 Super Seniors VS 10 Jolly Juniors participating in the show. The fun begins from Nov 17th, 8pm.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada