Don't Miss!
- Sports
Asia Cup 2023: ಎಸಿಸಿ ಸಭೆಯಲ್ಲಿ ತೀರ್ಮಾನ: ಏಷ್ಯಾಕಪ್ ಟೂರ್ನಿ ಪಾಕಿಸ್ತಾನದಿಂದ ಸ್ಥಳಾಂತರ!
- Lifestyle
Horoscope Today 6 Feb 2023: ಸೋಮವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- News
ರಾಜ್ಯ ರಾಜಕೀಯದ ಮುಂದಿನ ರಹಸ್ಯವೊಂದನ್ನು ಬೇಧಿಸಿದ ಎಚ್ಡಿಕೆ
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Technology
ಇನ್ಮುಂದೆ ಟ್ವಿಟ್ಟರ್ನಲ್ಲೂ ಹಣ ಗಳಿಸಬಹುದು; ಮಸ್ಕ್ರ ಹೊಸ ನಿರ್ಧಾರ ಏನು!?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಸರಿಗಮಪ ಲಿಟಲ್ ಚಾಂಪ್ಸ್: ಜನಪದ ಹಾಡಿನಲ್ಲಿ ಮಿಂದೆದ್ದ ಪ್ರೇಕ್ಷಕರು
ಈ ಬಾರಿಯ ಸಂಚಿಕೆಯಲ್ಲಿ ಜನಪದ ಹಾಡಿನ ರೌಂಡ್ ನಡೆದ ಕಾರಣ ಸರಿಗಮಪ ವೇದಿಕೆಯ ಮೇಲೆ ಹಳ್ಳಿಯ ವಾತಾವರಣ ಸೃಷ್ಟಿಯಾಗಿತ್ತು. ಸರಿಗಮಪ ವೇದಿಕೆ ನೋಡುತ್ತಿದ್ದರೆ ಗ್ರಾಮೀಣರು ಬದುಕುವ ರೀತಿ ಹೇಗೆ ಎಂಬುದನ್ನು ಎತ್ತಿ ತೋರಿಸುವಂತಿತ್ತು. ಜನಪದ ಹಾಡು ಹಾಡಿ ಮಕ್ಕಳು ಎಲ್ಲರನ್ನೂ ಖುಷಿಪಡಿಸಿದರು.
ಜೀ ಕನ್ನಡದಲ್ಲಿ ಜನಪದ ಸಂಕ್ರಾಂತಿಯನ್ನು ಆಚರಣೆ ಮಾಡಲಾಯಿತು. ಗುರುಪ್ರಸಾದ್ ಮಹಾದೇಶ್ವರ ಸ್ವಾಮಿ ಹಾಡನ್ನು ಹಾಡಿ ಸಂಭ್ರಮಿಸಿದರು. ಇದರ ಜೊತೆಗೆ ಕಂಸಾಳೆ ಕಲಾವಿದರು ಜನಪದ ಹಾಡಿಗೆ ಹೆಜ್ಜೆಹಾಕಿದರು. ಜನಪದ ಕಲಾವಿದರು ನಿರಂತರವಾಗಿ ಕಾರ್ಯಕ್ರಮ ನಲವತ್ತು ವರ್ಷಗಳಿಂದ ದೇಶ ವಿದೇಶದಲ್ಲೂ ಜನಪದ ಕಂಪು ಪಸರಿಸಿದ್ದಾರೆ. ಇವರ ಗುಂಪು ಅಮೆರಿಕದಲ್ಲಿ ಕಂಸಾಳೆಯನ್ನು ಕಲಿಸಿದ್ದಾರೆ. ಅರುಣ್ ಅವರ ತಾಳ ಮೇಳದಲ್ಲಿ ಗುರುಪ್ರಸಾದ್ ಹಾಡು ಹಾಡಿದರು.
ಶಿವಾನಿ ಹಾಡಿದ ಹಾವಾದ್ರು ಕಚ್ಚಬಾರ್ದ ಜನಪದ ಹಾಡಿಗೆ ಎಲ್ಲರೂ ಹುಚ್ಚೆದು ಕುಣಿದರು. ಚಾಮುಂಡೇಶ್ವರಿ ಹಾಗೂ ನಂಜುಂಡೇಶ್ವರನ ಪ್ರೀತಿಯ ಮೇಲೆ ಕಟ್ಟಿದ ಈ ಹಾಡು ಎಂದೆಂದಿಗೂ ಪ್ರಸ್ತುತವಾಗಿದೆ. ಇದಕ್ಕೆ ಹಂಸಲೇಖ ಅವರು ಗೋಲ್ಡನ್ ಬಜಾರ್ ಕೊಟ್ಟರು.
ಪಂಕಜ್ ತರವಲ್ಲ ತಗಿ ನಿನ್ನ ತಂಬೂರಿ ಸ್ವರ ಬರದೇ ಬಾರಿಸು ತಂಬೂರಿ ಹಾಡು ಎಲ್ಲರಿಗೂ ಬಹಳ ಇಷ್ಟವಾಯಿತು. ಪಂಕಜ್ ಮೆಂಟರ್ ಹೇಮಂತ್ ಸಹ ಸ್ಟೇಜ್ ಮೇಲೆ ಬಂದು ಹಾಡಿ ಎಲ್ಲರನ್ನು ರಂಜಿಸಿದರು. ಇದ್ದಕ್ಕೂ ಸಹ ಗೊಲ್ಡನ್ ಬಜಾರ್ ಸಿಕ್ಕಿತು.

ಕಣಿ ಹೇಳಿದ ದಿಯಾ ಹೆಗ್ಡೆ
ವಾರಕೊಂದು ಮ್ಯಾಜಿಕ್ ಮಾಡುವ ದಿಯಾ ಹೆಗ್ಡೆ ಈ ಬಾರಿ ಕಣಿ ಹೇಳುವ ಕೊರವಂಜಿಯಾಗಿ ಬಂದು ಜಯವೋ ಜಯವೋ ನಿಮ್ಮ ಮನೆಗಮ್ಮ ರಾಮ ರಾಮನೇ ನುಡಿಯೋ ರಾಮ ಬೀದಿ-ಬೀದಿಯ ಮೇಲೆ ಹೊರಟಳೋ ಕೊರವಂಜಿ ಹಾಡು ಹಾಡಿದಳು. ನಂತರ ಸ್ಟೇಜ್ ಮೇಲೆ ಇದ್ದ ಅನುಶ್ರೀ ನಂಗೂ ಕಣಿ ಹೇಳು ಎಂದಾಗ ಈ ಬಾರಿ ನಿಮಗೆ ಕಲ್ಯಾಣ ಭಾಗ್ಯ ಒದಗಿ ಬರಲಿದೆ ಎಂದು ತಿಳಿಸಿದಳು ಅದಕ್ಕೆ ಅನುಶ್ರೀ ಈ ವರ್ಷ ನನ್ನ ಮದುವೆ ಆಗುತ್ತದೆ ಅಂದರು. ಇನ್ನೂ ವಿಜಯ ಪ್ರಕಾಶ್ ಹಾಗೂ ಅರ್ಜುನ್ ಜನ್ಯಾರಿಗೂ ಸಹ ದಿಯಾ ಕೊರವಂಜಿಯಾಗಿ ಕಣಿ ಹೇಳಿ ರಂಜಿಸಿದಳು. ಮಹಾಗುರುಗಳಿಗೆ ಕಣಿ ಹೇಳಲ್ವ ಅಂದಾಗ ಅವರೇ ಎಲ್ಲರಿಗೂ ಗುರುಗಳು ನಾ ಹೇಗೆ ಕಣಿ ಹೇಳಲಿ ಎಂದಾಗ ಎಲ್ಲರು ಅವಳ ಮಾತಿಗೆ ಚಪ್ಪಾಳೆ ತಟ್ಟಿದರು. ಕೊರವಂಜಿ ಹಾಡಿಗೂ ಸಹ ಗೋಲ್ಡನ್ ಬಜರ್ ಸಿಕ್ಕಿತು.

ಕಾರ್ಯಕ್ರಮಕ್ಕೆ ಆಗಮಿಸಿದ ಕಡಬಗೆರೆ ಮುನಿರಾಜು
ಜನಪದ ಗಾಯಕರಾದ ಕಡಬಗೆರೆ ಮುನಿರಾಜು ಅವರು ಸರಿಗಮಪ ಕಾರ್ಯಕ್ರಮಕ್ಕೆ ಆಗಮಿಸಿ ಮಕ್ಕಳ ಹಾಡಿಗೆ ಕಿವಿಯಾದರು. ಇದೇ ವೇಳೆ ಸಂಕ್ರಾಂತಿ ಹಬ್ಬವನ್ನು ಯಾಕೆ ಆಚರಣೆ ಮಾಡುತ್ತೇವೆ ಎಂಬುದನ್ನು ಸಹ ವೀಕ್ಷಕರಿಗೆ ತಿಳಿಸಿಕೊಟ್ಟರು. ಗೀಗೀ ಪದವಾದ ಗೀಯಾ ಗಾ ಗಾಗಿಯಾ ಗಾ ಗಿಯಾ ಗಾ ಗಾಗೀಯಾ ಹಾಡನ್ನು ಕುಷಿಕ್ ಹಾಗೂ ಪ್ರವೀಣ್ ಶೇಟ್ ಹಾಡಿದರು ಇವರಿಬ್ಬರ ಜೋಡಿಗೂ ಸಹ ಗೋಲ್ಡನ್ ಬಜರ್ ಸಿಕ್ಕಿತು. ಸುಮೇದ್ ಕಲ್ಲವ್ವ ಕೇಳ್ ಮಲ್ಲವ್ವ, ಮಲ್ಲವ್ವ ಕೇಳು ನಿಂಗವ್ವ ಮದುವೆ ಒಂದು ಆಗುತೈತಿ ಹಾಡು ಹಾಡಿ ಎಲ್ಲರನ್ನು ರಂಜಿಸಿದರು. ಇವರಿಬ್ಬರಿಗೂ ಸಹ ಗೋಲ್ಡನ್ ಬಜರ್‌ನ್ನು ಹಂಸಲೇಖ ಒತ್ತಿದರು.

ಸೂಜುಗಾದ ಸೂಜಿ ಮಲ್ಲಿಗೆ
ಸಿರಿ ಸಿಂಚನ ಸುಗ್ಗಿ ಕಾಲ ಹಿಗ್ಗಿ ಬಂದಿತೋ ನಮ್ಮ ಬಾಳಿನಲ್ಲಿ ಭಾಗ್ಯ ತಂದಿತೋ ಎಂದು ರೈತರು ಯಾವ ರೀತಿ ಸಂಕ್ರಾಂತಿ ಹಬ್ಬ ಆಚರಣೆ ಮಾಡುತ್ತಾರೆ ಎಂಬುದನ್ನು ಹಾಡಿದಳು. ತನುಶ್ರೀ ಮುದ್ದು ಬೈರವ ಸ್ವಾಮಿಯನ್ನು ನಮ್ಮ ಹಾಡಿನ ಮೂಲಕ ಕರೆದರು ಇದಕ್ಕೆ ಗೋಲ್ಡನ್ ಬಜರ್ ಸಿಕ್ಕಿತು. ಪ್ರಗತಿ ಬಡಿಗೇರ್ ಹಾಡಿದ ಎವರ್ ಹಿಟ್ ಜಾನಪದ ಸಾಂಗ್ ಮಾದೇವ ಸೂಜುಗಾದ ಸೂಜಿ ಮಲ್ಲಿಗೆ ಹಾಡು ಎಲ್ಲರನ್ನೂ ಬೇರೆಯ ಲೋಕಕ್ಕೆ ಕರೆದುಕೊಂಡು ಹೋಯಿತು. ಜಡ್ಜ್‌ಸ್ ಒಳ್ಳೆಯ ಕಾಮೆಂಟ್ ಸಹ ಕೊಟ್ಟರು ಹಂಸಲೇಖ ಮಹಾಗುರುಗಳು ಗೋಲ್ಡನ್ ಬಜಾರ್ ಕೊಟ್ಟರು.

ಎಲ್ಲಿ ಕಾಣೆ ಎಲ್ಲಿ ಕಾಣೆ ನಾ ಎಲ್ಲಮ್ಮನ
ವಿಷ್ಣು, ಶ್ರೀಸಾನಿಧ್ಯ ಅತ್ತಿ ಅತ್ತಿ ಸೋದರತ್ತಿ ನನ್ನ ದಡ್ಡ ಅಂತಾರೆ ಕಣತ್ತಿ ಹಾಡಿಗೆ ಎಲ್ಲರೂ ಬಿದ್ದು ಬಿದ್ದು ನಕ್ಕರು ಪುಟಾಣಿಗಳ ಮಾತು ಪ್ರೇಕ್ಷಕರ ಮನಸಿಗೆ ಮುದವನ್ನು ನೀಡಿತು. ರೇವಣಸಿದ್ದ ಪುಂಡಲೀಕ ಪುಲಾರಿ ಯಾಕ್ ಚಿಂತೆ ಮಾಡುತಿ ಎಲೆ ಮನವೇ ಎಂದು ಹಾರ್ಮೋನಿಯಮ್ ನುಡಿಸಿ ಹಾಡಿದರು. ಇದಕ್ಕೂ ಸಹ ಗೋಲ್ಡನ್ ಬಜಾರ್ ಸಿಕ್ಕಿತು. ಸೃಷ್ಟಿ ಸುರೇಶ್ ಗುರುವೇ ನಿನ್ನ ಆಟ ಬಲ್ಲವರ್ಯಾರು ಎಂದು ಹಾಡಿದರು ಇದಕ್ಕೆ ಗೋಲ್ಡನ್ ಬಜಾರ್ ಸಿಕ್ಕಿತು. ಅರ್ಚಿಷ ಹೆಚ್ ರಾವ್ ಮತ್ತು ಸಮೀಕ್ಷಾ ಸಾಲಿಗ್ರಾಮ ಕೊಡಗಾನ ಕೋಳಿ ನುಂಗಿತ್ತಾ ತಂಗಿ ಸಾಂಗ್ ಗೆ ಗೋಲ್ಡನ್ ಬಜಾರ್ ಸಿಕ್ಕಿತು.ಯೋಗಶ್ರೀ ಮತ್ತು ನಯನ ವಸಂತಾಚಾರ ಆಳವಂಡಿ ಎಲ್ಲಿ ಕಾಣೆ ಎಲ್ಲಿ ಕಾಣೆ ನಾ ಎಲ್ಲಮ್ಮನ ಹಾಡು ಹಾಡಿದರು. ಸರಿಗಮಪ ಸೀಸನ್ 19 ಮಾತ್ರ ಎಲ್ಲ ಪ್ರೇಕ್ಷಕರನ್ನು ತನ್ನೆಡೆಗೆ ಸೆಳೆದುಕೊಳ್ಳುವ ಪ್ರಯತ್ನವನ್ನು ಮಾಡಿತು. ಅನುಶ್ರೀ ನಿರೂಪಣೆ ಸಹ ಜೊತೆಗೆ ಅರ್ಜುನ್ ಜನ್ಯ ಅವರು ಕಾಲೆಳೆಯುವ ರೀತಿ ಸಹ ಮೊದಲಿನಿಂದಲೂ ಪ್ರೇಕ್ಷಕರಿಗೆ ಇಷ್ಟವಾಗಿದೆ. ಲಿಟಲ್ ಚಾಂಪ್ಸ್ ತನ್ನದೇ ಆದಂತಹ ಒಂದು ಪ್ರಾಮುಖ್ಯತೆ ಉಳಿಸಿಕೊಂಡು ಬಂದಿದೆ.