twitter
    For Quick Alerts
    ALLOW NOTIFICATIONS  
    For Daily Alerts

    ಸರಿಗಮಪ‌ ಲಿಟಲ್ ಚಾಂಪ್ಸ್, ಚಿತ್ರಾ ಗಾನೋತ್ಸವದಲ್ಲಿ ಮಿಂದೆದ್ದ ಪ್ರೇಕ್ಷಕರು

    By ಶೃತಿ ಹರೀಶ್ ಗೌಡ
    |

    ಈ ಬಾರಿ ಮಕ್ಕಳು ಸರಿಗಮಪ ಎಪಿಸೋಡ್‌ನಲ್ಲಿ ಕೋಗಿಲೆ ಕಂಠದ ಗಾಯಕಿ ಚಿತ್ರಾ ಅವರು ಸರಿಗಮಪ ವೇದಿಕೆಗೆ ಬಂದಿದ್ದು, ಚಿತ್ರ ಗಾನೋತ್ಸವ ಮಾಡಲಾಯ್ತು. ಚಿತ್ರಾ ಹಾಡಿರುವ ಕನ್ನಡದ ಚಲನಚಿತ್ರ ಗೀತೆಗಳನ್ನು ಆಯ್ಕೆ ಮಾಡಿಕೊಂಡ ಮಕ್ಕಳು ತನ್ನ ಧ್ವನಿಯಲ್ಲಿ ಅವನ್ನು ಪ್ರಸ್ತುತಪಡಿಸಿದರು.

    ಗಾನ ಗಾರುಡಿಗ ಹಂಸಲೇಖ ಅವರನ್ನು ಗಾಯಕಿ ಚಿತ್ರಾ ಪ್ರೀತಿಯಿಂದ ಅಣ್ಣ ಎಂದು ಕರೆದಿದ್ದು ಕನ್ನಡಿಗರಲ್ಲಿ ಸಂತಸ ಮನೆ ಮಾಡುವಂತೆ ಆಯಿತು. ಈ ವೇಳೆ ತಂಗಿಗಾಗಿ‌ ಒಂದು ಪದ ಕಟ್ಟಿದ ಹಂಸಲೇಖ ಅವರು ವಿಜಯ್ ಪ್ರಕಾಶ್‌ ಕೈಯಲ್ಲಿ ಪದ ಪೋಣಿಸಿ‌ ಹಾಡನ್ನು ಹಾಡಿಸಿ ತಂಗಿಗೆ ಹಾಡಿನ ಗಿಫ್ಟ್ ಕೊಟ್ಟಿದ್ದು ಅವರಿಬ್ಬರ ಅನುಬಂಧಕ್ಕೆ ಸಾಕ್ಷಿ.

    ಖ್ಯಾತ ನಟಿ ಚಿತ್ರಾ ಹೃದಯಾಘಾತದಿಂದ ನಿಧನ ಖ್ಯಾತ ನಟಿ ಚಿತ್ರಾ ಹೃದಯಾಘಾತದಿಂದ ನಿಧನ

    ತನುಶ್ರೀ ತುಸು ಮೆಲ್ಲ ಬಿಸುಗಾಳಿಯೇ ಎಂದು ಹಾಡುತ್ತಿದ್ದರೆ ಪ್ರೇಕ್ಷಕರ ಮೈ ಒಮ್ಮೆ ರೋಮಾಂಚನಗೊಂಡಿತು. ಚಿತ್ರಾ ಅವರು ಸಹ ತನುಶ್ರೀ ಜೊತೆಗೆ ಹಾಡಿದ್ದು ಎಲ್ಲರಿಗೂ ಮುದ ನೀಡಿತು. ಈ ಹಾಡಿಗೆ ಹಂಸಲೇಖ ಗೋಲ್ಡನ್ ಬಜಾರ್ ಹೊತ್ತಿದರು.

    ಮೋಡಿ ಮಾಡಿದ ದಿಯಾ ಹೆಗಡೆ ಹಾಡು

    ಮೋಡಿ ಮಾಡಿದ ದಿಯಾ ಹೆಗಡೆ ಹಾಡು

    ದಿಯಾ ಹೆಗಡೆ 'ಹಾಹಾ ಜುಮ್ ತಕ ಜುಮ್ ತಂದನಾನಾ' ಹಾಡು ಹಾಡಿ ಪ್ರೇಕ್ಷಕರ ಹಾಗೂ ಚಿತ್ರಾ ಅವರ ಮನಸು ಗೆದ್ದಳು.‌ ಅದೇ ರೀತಿ ವಾರಕ್ಕೊಂದು ವಿಶೇಷತೆ ಹೊತ್ತು ತರುವ ಪೋರಿ ಈ ಬಾರಿ ಚಿತ್ರಾ ಎಂಬ ಹೆಸರಿಗೆ ಇಂಗ್ಲೀಷ್‌ನಲ್ಲಿ‌ ಒಂದೊಂದೆ ಅಂಶಗಳನ್ನು ಹೇಳುತ್ತಾ ಹೋದಳು. ‌ನಂತರ ಒಂದೊಕ್ಕೊಂದು ಪದ‌ ಸೇರಿಸಿ ಹಾಡನ್ನು ಹಾಡಿ ಎಲ್ಲರನ್ನೂ ರಂಜಿಸಿ ಗೋಲ್ಡನ್ ಬಜಾರ್ ಪಡೆದುಕೊಂಡಳು. ಇದೇ ವೇಳೆ ವೇದಿಕೆಯ ಮೇಲೆ‌ ಚಿತ್ರಾ ಅವರು ಕೇಳಿಸದೇ ಕಲ್ಲು ಕಲ್ಲಿನಲ್ಲಿ ಕನ್ನಡ ನುಡಿ ಎಂಬ ಹಾಡು ಹಾಡುವ ಮೂಲಕ ಕನ್ನಡಿಗರ ಹೃದಯವನ್ನು ಗೆದ್ದರು. ರೇವಣ್ಣ ಸಿದ್ದಪುಂಡಲೀಕ ಪುಲಾರಿ ಮತ್ತು ಶಿವಾನಿ ನವೀನ್ ಕೊಪ್ಪ 'ಹಾಲುಂಡ ತವರು' ಸಿನಿಮಾದ 'ಎಲೆ ಹೊಂಬಿಸಿಲೆ ಎಲೆ ತಂಬೆಲರೇ' ಹಾಡು ಹಾಡಿ ಎಲ್ಲರನ್ನೂ ಮೂಕವಿಸ್ಮಿತರಾಗಿ ಮಾಡಿದರು. ಇದೇ ವೇಳೆ ರೇವಣ ಸಿದ್ದಪುಂಡಲೀಕ ಪುಲಾರಿ 'ನೀಡು ಶಿವ' ಹಾಡು ಕೇಳಿದ್ದಕ್ಕೆ ನಾನು ಹಾಡುತ್ತೇನೆ ಎಂದು ಚಿತ್ರಾ ಅವರು ಹಾಡು ಹಾಡಿದರು ಇದಕ್ಕೆ ನಂದಿತಾ ಸಹ ಜೊತೆಯಾದರು.

    ಕುಷಿಕ್ ಹಾಗೂ ಸಮೀಕ್ಷಾ ಹಾಡು

    ಕುಷಿಕ್ ಹಾಗೂ ಸಮೀಕ್ಷಾ ಹಾಡು

    ಕುಷಿಕ್ ಹಾಗೂ ಸಮೀಕ್ಷಾ ಇಬ್ಬರೂ ಸೇರಿ 'ಮನಸೇ ಮನಸೇ ಥ್ಯಾಂಕ್ಯೂ ನಿನಗೂ ಮನಸಾಯಿತು' ಸಾಂಗ್ ಹಾಡಿದರು. ಅರ್ಚೀಷ‌ ರಾವ್ ಮತ್ತು ಪ್ರವೀಣ್ ಶೇಟ್ ಇಬ್ಬರೂ ಸೇರಿ 'ಮಡಿಕೇರಿ ಸಿಪಾಯಿ‌' ಹಾಡು ಹಾಡಿದರು. ಹಾಡಿಗೆ ತಕ್ಕಂತೆ ಅದೇ ರೀತಿಯ ಬಟ್ಟೆಯನ್ನು ಧರಿಸಿದ್ದು ಆಕರ್ಷಣೀಯವಾಗಿತ್ತು. ಸುಮೇದ್ ಹಾಗೂ ನಯನ ವಸಂತಾಚಾರ ಆಳವಂಡಿ ಇಬ್ಬರು ಸೇರಿ 'ಬಾರೆ ಸಂತೆಗೆ ಹೋಗೋಣ ಬಾ' ಹಾಡು ಹಾಡಿದರು ಇಬ್ಬರಿಗೂ ಗೋಲ್ಡನ್ ಬಜರ್ ಸಿಕ್ಕಿತು. ಸೃಷ್ಟಿ ಸುರೇಶ್ ಶೃಂಗಾರ ಕಾವ್ಯ ಚಲನಚಿತ್ರದ 'ಓ ಮೇಘವೇ ಓಡಿ ಬಾ ಈ ಓಲೆಯ ಅವನಿಗೆ ನೀಡು ಬಾ' ಎಂದು ಹಾಡಿ ಎಲ್ಲರ ಮನಸು ಗೆದ್ದರು.

    ಅಪ್ಪುಗೆ ಲಾಲಿ ಹಾಡಿದ ಚಿತ್ರಾ

    ಅಪ್ಪುಗೆ ಲಾಲಿ ಹಾಡಿದ ಚಿತ್ರಾ

    ಪುಟಾಣಿಗಳಾದ ವಿಷ್ಣು ಮತ್ತು ಶ್ರೀಸಾನಿಧ್ಯ ಸೇರಿಕೊಂಡು 'ಬಾರೇ ಬಾರೇ ಕಲ್ಯಾಣ ಮಂಟಪಕ್ಕೆ ಬಾ' ಎಂದು ಅಪ್ಪು ಅಭಿನಯದ ಹಾಡು ಹಾಡಿದರು. ಇದೇ ವೇಳೆ ಅಪ್ಪುಗಾಗಿ ಚಿತ್ರಮ್ಮ 'ಲಾಲಿ ಹಾಡು' ಹಾಡಿದರು 'ಶ್ರೀ ಚಕ್ರದಾರಿಗೆ ಶಿರಬಾಗೇ ಲಾಲಿ ರಾಜೀವ ನೇತ್ರನಿಗೆ ರಮಣಿಯ ಲಾಲಿ' ಎಂದು ಅಪ್ಪು ಒಡನಾಟವನ್ನು ನೆನಪಿಸಿಕೊಂಡರು. ನಂತರ ಅನುಶ್ರೀ, ಪುನೀತ್ ರಾಜ್ ಕುಮಾರ್ ಅವರ ಚಿತ್ರವಿರುವ ಕಾಯಿನ್ ನೆನಪಿನ ಕಾಣಿಕೆಯಾಗಿ ನೀಡಿದರು. ಪ್ರಗತಿ ಬಡಿಗೇರ್ 'ಏಳು ಶಿವ ಎಳು‌ಶಿವ' ಹಾಡು ಹಾಡಿದರು. ಇದರ ಜೊತೆಗೆ ಪ್ರಗತಿ ಬಡಿಗೇರ್ ಅವರ ಇಡೀ ಕುಟುಂಬಸ್ಥರು ಹಾಡು ಹಾಡುವ ಮೂಲಕ ಚಿತ್ರಾ ಅವರ ಆಶೀರ್ವಾದ ಪಡೆದುಕೊಂಡರು. ಚಿತ್ರ ಅವರು 'ಏಳೇ ಕೋಗಿಲೆ ಇಂಪಾಗಲ, ಹೇಳೇ ಇಬ್ಬನಿ ತಂಪಾಗಲ' ಹಾಡು ಹಾಡಿದರು.

    ಪಂಕಜ್ ಮತ್ತು ಗುರುಪ್ರಸಾದ್ ಹಾಡಿನ ಮೋಡಿ

    ಪಂಕಜ್ ಮತ್ತು ಗುರುಪ್ರಸಾದ್ ಹಾಡಿನ ಮೋಡಿ

    ಸಿರಿ ಸಿಂಚನ ಅರಳುವ ಹೂಗಳೇ ಅಲಿಸಿರಿ ಹಾಡು ಹಾಡಿದರು ಪಂಕಜ್ ಮತ್ತು ಗುರುಪ್ರಸಾದ್ 'ಎ ನಮಸ್ತೆ ಕರುನಾಡಿಗೆ ಚಿರಕಾಲ ಇರಲಿ‌ ಈ ಸ್ನೇಹ' ಹಾಡು ಹಾಡಿದರು. ಯೋಗಶ್ರೀ ನದಿಂದಿಂತಾನ ಹಾಡು ಹಾಡಿದರು. ಮತ್ತೆ ಚಿತ್ರಾ ಅವರು ತುಂತುರು ಅಲ್ಲಿ ನೀರ ಹಾಡು ಕಂಪನ ಇಲ್ಲಿ ಪ್ರೀತಿ ಹಾಡು ಎಂಬ ಹಾಡು ಹಾಡಿ ಕರುನಾಡಿಗೆ ಸಂಗೀತ ರಸದೌತಣ ಉಣಬಡಿಸಿದರು. ಹಂಸಲೇಖ ಅವರ ನೇತೃತ್ವದಲ್ಲಿ ಅನುಶ್ರೀ ನಿರೂಪಣೆಯಲ್ಲಿ ಅರ್ಜುನ್ ಜನ್ಯ, ವಿಜಯ್ ಪ್ರಕಾಶ್ ಅವರ ತೀರ್ಪಿನಲ್ಲಿ ಕಾರ್ಯಕ್ರಮ ನಡೆಯಿತು.

    English summary
    Zee Kannada Sarigamapa little champs season-19 Written Update on January 28and 29th episode. Here is the details about Chithra Ganostasva.
    Monday, January 30, 2023, 21:26
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X