For Quick Alerts
  ALLOW NOTIFICATIONS  
  For Daily Alerts

  ಹಾಸನದಲ್ಲಿ ಜೀ ಕನ್ನಡದ 'ಭಾರತಿ' ಜೊತೆ ಉತ್ಸವ

  By Rajendra
  |

  ಕರ್ನಾಟಕದ ಜನಪ್ರಿಯ ವಾಹಿನಿ ಜೀ ಕನ್ನಡ ಹಾಸನದಲ್ಲಿ ವಿಶಿಷ್ಟವಾದ 'ಭಾರತಿ ಉತ್ಸವ' ಕಾರ್ಯಕ್ರಮವನ್ನು ಆಯೋಜಿಸಿದೆ. ಇದೇ ಫೆ.15 ರಂದು ಶನಿವಾರ ಹಾಸನದ ಸಾಲಗಾಮಿ ರಸ್ತೆಯಲ್ಲಿರುವ ಹಾಸನಾಂಬ ಕಲಾಕ್ಷೇತ್ರದಲ್ಲಿ 'ಭಾರತಿ ಉತ್ಸವ' ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಇದೊಂದು ವಿಶೇಷ ಕಾರ್ಯಕ್ರಮವಾಗಿದ್ದು ನೋಡುಗರನ್ನು ಮೋಡಿ ಮಾಡುವುದರಲ್ಲಿ ಅನುಮಾನವಿಲ್ಲ.

  ಕಾರ್ಯಕ್ರಮದ ವಿವರಗಳು ಹೀಗಿವೆ: ದಿನಾಂಕ 15-02-14 ರಂದು ಬೆಳಗ್ಗೆ 9.30ಕ್ಕೆ 'ಓಂಕಾರ' ಖ್ಯಾತಿಯ ಶ್ರೀ ದೇವಿಶ್ರೀ ಗುರೂಜಿಯವರಿಂದ ಪ್ರವಚನ, ಮಾತುಕತೆ ಮತ್ತು ಸಭಿಕರ ಪ್ರಶ್ನೆಗಳಿಗೆ ಗುರೂಜಿಯವರಿಂದ ಉತ್ತರ. [ಸರ್ಕಾರಿ ಶಾಲೆ ದತ್ತು ಪಡೆದ ಜೀ ಕನ್ನಡ ವಾಹಿನಿ]

  ಮಧ್ಯಾಹ್ನ 12.ಕ್ಕೆ ಶ್ರೀ ಲಕ್ಷ್ಮೀ ಶ್ರೀನಿವಾಸ ಅವರಿಂದ 'ಮುದ್ರ ಸಂವಾದ' ನಿರಂತರ ಕಾಡುವ ಆರೋಗ್ಯ ಸಮಸ್ಯೆಗಳಿಗೆ ಮುದ್ರಾಯೋಗದ ಮೂಲಕ ಪರಿಹಾರದ ಜೊತೆಗೆ ಮುದ್ರ ಮಾಡುವುದರಿಂದ ಆಗುವ ಉಪಯೋಗಗಳ ಬಗ್ಗೆ ಮಾಹಿತಿ ನೀಡುವರು.

  ಮಧ್ಯಾಹ್ನ 2 ಗಂಟೆಯಿಂದ 'ಭಾರತಿ ಉತ್ಸವ' ಆರಂಭವಾಗುತ್ತದೆ. ಉತ್ಸವದ ವಿಶೇಷ ಏನೆಂದರೆ ವಿವಿಧ ಬಗೆಯ ವಿನೋದದ ಆಟದ ಪಂದ್ಯಗಳು. ಇದರಲ್ಲಿ ಜೀ ಕನ್ನಡದ ಜನಪ್ರಿಯ ಧಾರಾವಾಹಿ 'ಭಾರತಿ' ತಂಡದ ನಟಿ ರೂಪಾ ಹಾಗೂ ನಟ ಶಿಶಿರ್ ಮುಂತಾದ ಪ್ರಮುಖರು ಪಾಲ್ಗೊಂಡು ಪ್ರೇಕ್ಷಕರ ಜೊತೆ ಆಟದಲ್ಲಿ ಭಾಗವಹಿಸಲಿದ್ದಾರೆ. ಆಟದಲ್ಲಿ ಜಯಶಾಲಿಯಾದವರಿಗೆ ಆಕರ್ಷಕ ಬಹುಮಾನ ವಿತರಿಸಲಾಗುವುದು.

  ಸಂಜೆ 6 ಗಂಟೆಗೆ ಜೀ ಕನ್ನಡದ ಜನಪ್ರಿಯ ಧಾರಾವಾಹಿ 'ಭಾರತಿ' ತಂಡದ ನಟ ನಟಿಯರಿಂದ ಮನರಂಜನಾ ಕಾರ್ಯಕ್ರಮ ಮತ್ತು ಪ್ರೇಕ್ಷಕರ ಜೊತೆ ಸಂವಾದ ಇರುತ್ತದೆ. ಖ್ಯಾತ ಚಿತ್ರನಟ ಪ್ರಜ್ವಲ್ ದೇವರಾಜ್ ಈ ಸಂಭ್ರಮದಲ್ಲಿ ಪಾಲ್ಗೊಂಡು ನೃತ್ಯ ಪ್ರದರ್ಶನ ಜೊತೆ 'ಸವಾಲ್' ಚಿತ್ರದ ದ್ವನಿಸುರುಳಿ ಬಿಡುಗಡೆ ಮಾಡಲಿದ್ದಾರೆ.

  ಆಧುನಿಕ ಯುಗದಲ್ಲಿ ಗ್ರಾಮೀಣ ಪ್ರದೇಶದ ಸೊಗಡನ್ನು ಉಳಿಸುವ ಸಲುವಾಗಿ ಜೀ ಕನ್ನಡ ವಾಹಿನಿ 'ಭಾರತಿ ಉತ್ಸವ' ಎಂಬ ವಿನೂತನ ಕಾರ್ಯಕ್ರಮವನ್ನು ಆಯೋಜಿಸಿದೆ. ಈ ಮೂಲಕ ನಾಡಿನ ಸಂಸ್ಕೃತಿ ಉಳಿಸಲು ವಾಹಿನಿ ತನ್ನದೇ ಆದ ಅಳಿಲುಸೇವೆ ಸಲ್ಲಿಸುತ್ತಿದೆ.

  ಹಾಸನದಲ್ಲಿ ಪ್ರಥಮ ಬಾರಿಗೆ ಆಯೋಜಿಸಿರುವ ಈ ಕಾರ್ಯಕ್ರಮದಲ್ಲಿ ನಗರದ ಸಮಸ್ತ ನಾಗರಿಕರು ಭಾಗವಹಿಸಿ ಜೀ ವಾಹಿನಿಯ ಕಾರ್ಯಕ್ಕೆ ಬೆಂಬಲಿಸಿ, ನಾಡಿನ ಸೊಗಡನ್ನು ಉಳಿಸಿ ಎಂದು ವಾಹಿನಿಯ ಎಕ್ಸಿಕ್ಯೂಟಿವ್ ವೈಸ್ ಪ್ರೆಸಿಡೆಂಟ್ ಡಾ. ಗೌತಮ್ ಮಾಚಯ್ಯ ಮನವಿ ಮಾಡಿದ್ದಾರೆ. ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಪ್ರವೇಶ ಉಚಿತವಾಗಿದ್ದು ಮೊದಲು ಬಂದವರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. (ಒನ್ಇಂಡಿಯಾ ಕನ್ನಡ)

  English summary
  Zee Kannada celebrating special 'Bharathi Utsav' in Hassan on 15th February. 'Omkara' fame Sri Devishree Guruji's Pravachana, 'Mudra Samvada' with Lakshmi Srinivas and many more programmes are held. All are welcome to attend the programme on a first come, first serve basis.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X