ಜೀ ಕನ್ನಡ ಕುಟುಂಬ ಅವಾರ್ಡ್ಸ್ ವಿಶೇಷ ಪ್ರಸಾರ
ಕನ್ನಡ ಕಿರುತೆರೆ ಇತಿಹಾಸದಲ್ಲೇ ಬೃಹತ್ ಸಂಭ್ರಮವನ್ನು ವೀಕ್ಷಿಸಲು ಇನ್ನು ಕೆಲವೇ ಕೆಲವು ಗಂಟೆಗಳು ಮಾತ್ರ ಬಾಕಿ ಇವೆ. ಜೀ ಕನ್ನಡ ವಾಹಿನಿಯ ಕುಟುಂಬ ಅವಾರ್ಡ್ಸ್ 2012ರ ಬಣ್ಣ ಬೆಳಕು, ನೃತ್ಯ ವೈಭವ ಜೊತೆಗೆ ಮುಗಿಲು ಮುಟ್ಟಿದ ಪ್ರಶಸ್ತಿ ಸಂಭ್ರಮವನ್ನು ಶನಿವಾರ (ಜ.12) ಹಾಗೂ ಭಾನುವಾರ (ಜ.13) ಸಂಜೆ 5 ಗಂಟೆಗೆ ಕಣ್ತುಂಬಿಕೊಳ್ಳಬಹುದು.
ಬೆಂಗಳೂರು ನ್ಯಾಷನಲ್ ಕಾಲೇಜ್ ಮೈದಾನದಲ್ಲಿ 'ಜೀ ಕುಟುಂಬ ಅವಾರ್ಡ್ಸ್ 2012' ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದ ವಿಶೇಷ ಪ್ರಸಾರ ಶನಿವಾರ ಮತ್ತು ಭಾನುವಾರ ವಾಹಿನಿಯಲ್ಲಿ ಪ್ರಸಾರವಾಗಲಿದೆ.

ಈ ವರ್ಷದ ವಿಶೇಷವೆಂದರೆ ಕಿರುತೆರೆಯಲ್ಲಿ ಜೀವಮಾನ ಸಾಧನೆ ಮಾಡಿದ ಹಿರಿಯ ಕಲಾವಿದೆ ಗಿರಿಜಾ ಲೋಕೇಶ್ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದ ಅಕರ್ಷಣೆ ಎಂದರೆ ಖ್ಯಾತ ಸ್ಯಾಂಡಲ್ ವುಡ್ ನಟಿಯರಾದ ರಾಗಿಣಿ ದ್ವಿವೇದಿ, ಯಜ್ಞಾ ಶಟ್ಟಿ, ರಿಷಿಕಾ ಸಿಂಗ್, ಮನಮೋಹಕ ನೃತ್ಯ. ಇವರಿಗೆ ಪೈಪೋಟಿ ನೀಡುವಂತೆ ಕಿರುತೆರೆ ನಟ ನಟಿಯರು ಕುಣಿದು ಕುಪ್ಪಳಿಸಿದರು. ರಂಗದ ಮೇಲೆ ನಾಯಕಿಯರ ನೃತ್ಯ ನೋಡಿ ಉಲ್ಲಸಿತರಾಗಿ ಪ್ರೇಕ್ಷಕರು ಕುಣಿದಾಡಿದರು.
ಕನ್ನಡ ಪ್ರಭ ಪ್ರಧಾನ ಸಂಪಾದಕರಾದ ವಿಶ್ವೇಶ್ವರ ಭಟ್, ವಿಜಯವಾಣಿ ಪತ್ರಿಕೆ ಸಂಪಾದಕರಾದ ತಿಮ್ಮಪ್ಪ ಭಟ್, ಹಿರಿಯ ಕಲಾವಿದೆಯರಾದ ಭಾರತೀ ವಿಷ್ಣುವರ್ಧನ್, ಜಯಂತಿ, ನಿರ್ದೇಶಕ ಇಂದ್ರಜಿತ್ ಲಂಕೇಶ್, ಕಲಾವಿದರಾದ ಜಗ್ಗೇಶ್, ಹರ್ಷಿಕಾ ಪೂಣಚ್ಚ, ದುನಿಯಾ ರಶ್ಮಿ, ಮೇಘನಾ ಗಾಂವ್ಕರ್, ಪೂಜಾ ಗಾಂಧಿ ಕಾರ್ಯಕ್ರಮಕ್ಕೆ ಆಗಮಿಸಿದ ಪ್ರಮುಖರು. (ಒನ್ಇಂಡಿಯಾ ಕನ್ನಡ)


Click it and Unblock the Notifications











