»   » ಮನಸೆಳೆವ ಸಂಗೀತದ ಮಧ್ಯೆ 'ಜೀ ಮ್ಯೂಸಿಕ್ ಅವಾರ್ಡ್ಸ್'

ಮನಸೆಳೆವ ಸಂಗೀತದ ಮಧ್ಯೆ 'ಜೀ ಮ್ಯೂಸಿಕ್ ಅವಾರ್ಡ್ಸ್'

Posted By:
Subscribe to Filmibeat Kannada

ಜೀ ಕನ್ನಡ ವಾಹಿನಿ ಮೊದಲ ಬಾರಿಗೆ ಆಯೋಜಿಸಿದ್ದ 'ಜೀ ಮ್ಯೂಸಿಕ್ ಅವಾರ್ಡ್ಸ್' ಕಾರ್ಯಕ್ರಮ ಕೆಂಗೇರಿಯ ಬಿ.ಜಿ.ಎಸ್. ಆಡಿಟೋರಿಯಂನಲ್ಲಿ ನೆರವೇರಿದೆ.

ವಿಭಿನ್ನವಾದ ಧಾರಾವಾಹಿಗಳು, ರಿಯಾಲಿಟಿ ಶೋ ನಂತಹ ಕಾರ್ಯಕ್ರಮಗಳಿಂದ ವೀಕ್ಷಕರ ಮನ ಗೆದ್ದಿರುವ ಜೀ ಕನ್ನಡ ವಾಹಿನಿ ಈಗ ಸಿನಿಮಾ ಸಂಗೀತ ಕ್ಷೇತ್ರದ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸುವ ಮೂಲಕ ಮತ್ತಷ್ಟು ವಿಶೇಷತೆ ಮೆರೆದಿದೆ.

Zee Music Awards to be aired on 18th and 19th of July

ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಸಂಗೀತಗಾರರಾದ ರಿಕ್ಕಿ ಕೇಜ್, ರಘು ದೀಕ್ಷಿತ್ ರಂತಹ ಸಾಧಕರಿಗೆ ಮತ್ತು ವರ್ಷಗಳಿಂದ ಸಂಗೀತ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿರುವ ಲಹರಿ ಸಂಸ್ಥೆಗೆ ಈ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಗೌರವಿಸಲಾಗಿದೆ.

ಸುಗಮ ಸಂಗೀತ ಕ್ಷೇತ್ರದ ಮಾಣಿಕ್ಯ ಎನಿಸಿಕೊಂಡಿರುವ ದಿ.ಸಿ.ಅಶ್ವಥ್ ಅವರಿಗೆ 'ಸುಗಮ ಸಂಗೀತ ಸಾಮ್ರಾಟ್' ಎಂಬ ಬಿರುದು ನೀಡಿ, ಅಶ್ವಥ್ ಕುಟುಂಬಕ್ಕೆ ಸನ್ಮಾನ ಮಾಡಲಾಗಿದೆ.

Zee Music Awards to be aired on 18th and 19th of July

ನಟ ರಮೇಶ್ ಅರವಿಂದ್ ಅವರ ನಿರೂಪಣೆ, ಅರುಣ್ ಸಾಗರ್ ಮತ್ತು ಅನುಶ್ರೀ ಅವರ ಹಾಸ್ಯದ ಚಟಾಕಿ, ಸ್ಟಿಫನ್ ದೇವಸ್ಸಿ, ಪ್ರವೀಣ್ ಗೊಡ್ಖಿಂಡಿ, ಮಂಜುನಾಥ್ ಅವರ ಜುಗಲ್ ಬಂದಿ, ರಘು ದೀಕ್ಷಿತ್, ಹೇಮಂತ್, ನಂದಿತಾ, ಅರ್ಚನಾ ಉಡುಪ, ಚೇತನ್, ಚಿನ್ಮಯ್, ಎಲ್.ಎನ್.ಶಾಸ್ತ್ರಿ, ಚೈತ್ರಾ ಅವರ ಇಂಪಾದ ಗಾಯನ 'ಜೀ ಮ್ಯೂಸಿಕ್ ಅವಾರ್ಡ್ಸ್'ನ ಹೈಲೈಟ್.

Zee Music Awards to be aired on 18th and 19th of July

'ಬುಲ್ ಬುಲ್' ಬೆಡಗಿ ರಚಿತಾ ರಾಮ್, ಹಾಸ್ಯನಟ ಚಿಕ್ಕಣ್ಣ, ನಟಿ ಶ್ರುತಿ ಹರಿಹರನ್ ಡ್ಯಾನ್ಸ್ ಪರ್ಫಾಮೆನ್ಸ್ ಪ್ರಶಸ್ತಿ ಪ್ರಧಾನ ಸಮಾರಂಭದ ಪ್ರಮುಖ ಆಕರ್ಷಣೆ. ಇದೇ ತಿಂಗಳ 18 ಹಾಗೂ 19 ರಂದು ಜೀ ಕನ್ನಡ ವಾಹಿನಿಯಲ್ಲಿ 'ಜೀ ಮ್ಯೂಸಿಕ್ ಅವಾರ್ಡ್ಸ್' ಕಾರ್ಯಕ್ರಮ ಪ್ರಸಾರವಾಗಲಿದೆ.

English summary
Zee Kannada Channel had organized 'Zee Music Awards', A first of its kind to pay a tribute to the talent of Kannada Industry. This programme will be aired on 18th and 19th of July in Zee Kannada Channel.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada