ಧೂಮ್ 4 ಚಿತ್ರದಿಂದ ಸಲ್ಮಾನ್ ಹಿಂದಕ್ಕೆ: ಕಾರಣ ಮಾಜಿ ಗೆಳತಿಯ ಪತಿ.!


ಬಾಲಿವುಡ್ ಸೂಪರ್ ಹಿಟ್ ಸಿನಿಮಾ 'ಧೂಮ್' ಸೀರಿಸ್ ಮುಂದುವರೆದಿದ್ದು, 'ಧೂಮ್ 4' ಚಿತ್ರದ ತಯಾರಿ ನಡೆಯುತ್ತಿದೆ. ಇಷ್ಟು ದಿನ ಈ ಚಿತ್ರದಲ್ಲಿ ಸಲ್ಮಾನ್ ಖಾನ್ ನಟಿಸಲಿದ್ದಾರೆ ಎನ್ನಲಾಗುತ್ತಿತ್ತು. ಆದ್ರೆ, ಸಲ್ಲು ಭಾಯ್ ಈ ಚಿತ್ರದಿಂದ ಹೊರಬಂದಿದ್ದಾರೆ.

ನಾನು ಈ ಸಿನಿಮಾ ಮಾಡುವುದಿಲ್ಲ ಖಚಿತಪಡಿಸಿದ್ದಾರೆ. ಇದಕ್ಕೆ ಕಾರಣ ಹುಡುಕುತ್ತಾ ಹೊರಟಾಗ ಬೇರೆಯದ್ದೇ ವಿಷ್ಯ ಪ್ರಸ್ತಾಪವಾಗುತ್ತಿದೆ. ಹೌದು, 'ಧೂಮ್-4' ಪ್ರಾಜೆಕ್ಟ್ ನಿಂದ ಸಲ್ಲು ಹೊರ ಬರಲು ಐಶ್ವರ್ಯ ರೈ ಅವರ ಪತಿ ಅಭಿಷೇಕ್ ಬಚ್ಚನ್ ಕಾರಣವೆನ್ನಲಾಗುತ್ತಿದೆ.

'ಬಿಗ್ ಬಾಸ್' ಪ್ರಸಾರ ಸಮಯ ಬದಲಾಗುತ್ತಿದೆ.!

'ಧೂಮ್-4' ಸಿನಿಮಾದಲ್ಲಿ ಸಲ್ಮಾನ್ ಮತ್ತು ಅಭಿಷೇಕ್ ಬಚ್ಚನ್ ಒಟ್ಟಿಗೆ ತೆರೆ ಹಂಚಿಕೊಳ್ಳಬೇಕಿತ್ತು. ಹೀಗಾಗಿ, ಇದನ್ನ ಅವೈಡ್ ಮಾಡಲು ಸಲ್ಲು ಈ ನಿರ್ಧಾರ ಮಾಡಿದ್ದಾರಂತೆ.

ಸಲ್ಮಾನ್ ಖಾನ್ ರ ಈ ನಡವಳಿಕೆ ಪ್ರಿಯಾಂಕಾಗೆ ಇಷ್ಟ ಆಗಲಿಲ್ಲ.!

ಆದ್ರೆ, ಈ ಬಗ್ಗೆ ಸ್ಪಷ್ಟನೆ ನೀಡಿರುವ ಸಲ್ಲು, 'ಯಾವುದೇ ಪರ್ಸನಲ್ ಕಾರಣವಿಲ್ಲ. ಚಿತ್ರದಲ್ಲಿ ನೆಗಿಟೀವ್ ಶೇಡ್ ಪಾತ್ರ ಮಾಡಬೇಕಾಗುತ್ತೆ. ನನ್ನ ಅಭಿಮಾನಿಗಳು ಅದನ್ನ ಇಷ್ಟಪಡುತ್ತಿಲ್ಲ. ಹಾಗಾಗಿ ಈ ಸಿನಿಮಾವನ್ನ ಬಿಡಬೇಕಾಯಿತು ಅಷ್ಟೇ' ಎಂದಿದ್ದಾರೆ.

ಇನ್ನು 'ಮುಂದಿನ ದಿನದಲ್ಲಿ ಒಳ್ಳೆಯ ಜವಾಬ್ದಾರಿಯುತ ಪಾತ್ರಗಳನ್ನ ಮಾಡಲು ಚಿಂತಿಸಿದ್ದೇನೆ. ಆ ರೀತಿಯ ಸಿನಿಮಾಗಳನ್ನ ಮಾತ್ರ ಮಾಡುತ್ತೇನೆ. ನನ್ನ ಸಿನಿಮಾಗಳು, ಬರಿ ತೆರೆಮೇಲೆ ಮಾತ್ರವಲ್ಲ ನಿಜ ಜೀವನದಲ್ಲೂ ಸರಿ ಎನಿಸಬೇಕು' ಎಂದು ತಿಳಿಸಿದ್ದಾರೆ.

ಸದ್ಯ, 'ಭಾರತ್' ಸಿನಿಮಾದಲ್ಲಿ ನಟಿಸುತ್ತಿರುವ ಸಲ್ಮಾನ್ ಖಾನ್ ಟಿವಿ ಕಾರ್ಯಕ್ರಮಗಳಲ್ಲಿ ಹೆಚ್ಚು ಬ್ಯುಸಿಯಾಗಿದ್ದಾರೆ. ಈ ಚಿತ್ರದಲ್ಲಿ ಕತ್ರಿನಾ ಕೈಪ್ ನಾಯಕಿಯಾಗಿದ್ದು, ದಿಶಾ ಪಟಾನಿ ಕೂಡ ಇದ್ದಾರೆ. ಸೆಪ್ಟೆಂಬರ್ 16 ರಿಂದ ಬಿಗ್ ಬಾಸ್ 12ನೇ ಆವೃತ್ತಿ ಆರಂಭವಾಗುತ್ತಿದೆ.

Have a great day!
Read more...

English Summary

Salman Khan was all set to star in YRF's Dhoom 4, but things suddenly took a u-turn. acutely, Khan Walked Out Of Dhoom 4 For This Reason