»   » ಮಂದಾಕಿನಿಯಂತೆ ತೆರೆದೆದೆ ತೋರಲು ಕರೀನಾ ರೆಡಿ

ಮಂದಾಕಿನಿಯಂತೆ ತೆರೆದೆದೆ ತೋರಲು ಕರೀನಾ ರೆಡಿ

Posted By:
Subscribe to Filmibeat Kannada

ಯಾಕೋ ಇತ್ತೀಚೆಗೆ ಬಾಲಿವುಡ್ ಬೆಡಗಿಯರಿಗೆ ಬಿಳಿ ತುಂಡು ಸೀರೆ ಉಟ್ಟು ಮಳೆಯಲ್ಲಿ ನೆನೆಯುವುದು ಇಷ್ಟ ಆಗುತ್ತಿದೆ. ಬಿನ್ ಬುಲಾಯೆ ಬಾರಾತಿ ಚಿತ್ರದಲ್ಲಿ ಒದ್ದೆಮುದ್ದೆಯಾದ ಸೆಕ್ಸಿ ಶ್ವೇತಾ ತಿವಾರಿ ಪಡ್ಡೆಗಳ ನಿದ್ದೆ ಕೆಡಿಸಿದ್ದಳು. ಈಗ ಈ ಸಾಲಿಗೆ ಸ್ಲಿಮ್ ಬ್ಯೂಟಿ ಕರೀನಾ ಸೇರಿದ್ದಾಳೆ.

ಒದ್ದೆ ಸೀರೆಯುಟ್ಟು ಸ್ನಾನ ಮಾಡುವವರಿಗೆ ಪ್ರಾಕ್ಟಿಕಲ್ ರೆಫರೆನ್ಸ್ ಆಗಿರುವ ಮಂದಾಕಿನಿಯನ್ನೇ ಎಲ್ಲರೂ ಕಾಪಿ ಮಾಡುತ್ತಿರುವುದು ವಿಶೇಷ. ಶೋ ಮ್ಯಾನ್ ರಾಜ್ ಕಪೂರ್ ಅವರ ನಿರ್ಮಾಣ ರಾಮ್ ತೇರಿ ಗಂಗಾ ಮೈಲಿ(1985) ಚಿತ್ರದಲ್ಲಿ ಜಲಪಾತದಡಿಯಲ್ಲಿ ಕುಳಿತು ಹಾಡಿ ನಲಿವ ಮಂದಾಕಿನಿ ಉಟ್ಟ ಒಂದು ಪದರದ ಸೀರೆ ಎದೆಯನ್ನು ಮುಚ್ಚಿದ್ದಕ್ಕಿಂತ ತೆರೆದಿದ್ದೇ ಹೆಚ್ಚು.

ಪೀಳಿಗೆಯಿಂದ ಪೀಳಿಗೆಗೆ ಸ್ಪೂರ್ತಿಯಾದ ಈ ದೃಶ್ಯ ಮತ್ತೆ ಬಾಲಿವುಡ್ ನಲ್ಲಿ ರಿಪೀಟ್ ಆಗುತ್ತಿದೆ. ಅದೂ ರಾಜ್ ಕಪೂರ್ ಅವರ ಮೊಮ್ಮಗಳು ಕರೀನಾ ಈ ರೀತಿ ದೃಶ್ಯದಲ್ಲಿ ಮೈ ತೋರಿ ನಿಲ್ಲುವುದು ಹಲವರ ಹುಬ್ಭೇರಿಸಿದೆ.

ಒನ್ಸ್ ಅಪನ್ ಎ ಟೈಮ್ ಇನ್ ಮುಂಬೈ ಚಿತ್ರದ ಎರಡನೇ ಭಾಗದಲ್ಲಿ ದಾವೂದ್ ಇಬ್ರಾಹಿಂನ ಸೀಕ್ರೆಟ್ ಲವರ್ ಪಾತ್ರದಲ್ಲಿ ಕರೀನಾ ಕಪೂರ್ ಕಾಣಿಸಿಕೊಳ್ಳುತ್ತಿದ್ದಾರೆ. ಏಕ್ತಾ ಕಪೂರ್ ನಿರ್ಮಾಣದ ಈ ಬಹುನಿರೀಕ್ಷಿತ ಚಿತ್ರದಲ್ಲಿ ಮಂದಾಕಿನಿ ಹಾಗೂ ದಾವೂದ್ ನಡುವಿನ ಪ್ರೇಮ ಕಥಾನಕವೇ ಹೈಲೈಟ್ ಎನ್ನಲಾಗಿದೆ.

ಒದ್ದೆ ಬಟ್ಟೆಯುಟ್ಟು ತನ್ನ ಜೀರೋ ಫಿಗರ್ ತೋರಿಸಲು ಉತ್ಸುಕಳಾಗಿರುವ ಕರೀನಾ ಸಕತ್ ಥ್ರಿಲ್ ಆಗಿದ್ದೀನಿ ಎಂದಿದ್ದಾರೆ. ಆಕೆ ಬೋಲ್ಡ್ ನೆಸ್ ನೋಡಿ ನಿರ್ದೇಶಕ ಮಿಲನ್ ಲೂಥಾರಿಯಾ ಕೂಡಾ ದಂಗಾಗಿದ್ದಾನೆ. ಆದರೆ, ಈ ಬಗ್ಗೆ ಕರೀನಾ ಗೆಳೆಯ ಸೈಫ್ ಏನು ಹೇಳಿದ್ದಾನೆ ಇನ್ನೂ ತಿಳಿದಿಲ್ಲ. ಈ ಚಿತ್ರದಲ್ಲಿ ಅಕ್ಷಯ್ ಕುಮಾರ್ ಹಾಗೂ ಸೋನಾಕ್ಷಿ ಸಿನ್ಹಾ ಕೂಡಾ ಈ ಚಿತ್ರದ ಮುಖ್ಯಭೂಮಿಕೆಯಲ್ಲಿದ್ದಾರೆ.

English summary
Kareena Kapoor has been signed to play the role of Mandakini in the upcoming Bollywood film Once Upon A Time in Mumbai sequel. Reports claim that Kareena Kapoor has given the green signal for the film and for those waterfalls scene with wet transparent saree act

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada