»   » ರಾವಣ ಸೋತರೂ ಅಭಿ ಐಶ್ ಗೆ ಸಿಕ್ತು ಚೇತನ

ರಾವಣ ಸೋತರೂ ಅಭಿ ಐಶ್ ಗೆ ಸಿಕ್ತು ಚೇತನ

Posted By:
Subscribe to Filmibeat Kannada

ರಾವಣ್ ಚಿತ್ರ ಸೋತು ಸುಣ್ಣವಾದರೂ ಆಚ್ಚರಿ ಎಂಬಂತೆ ಐಶ್ ಅಭಿ ಜೋಡಿಗೆ ಬೇಡಿಕೆ ತಗ್ಗಿಲ್ಲ. ಈ ಮುಂಚೆ ಗುರು ಚಿತ್ರದಲ್ಲೂ ಈ ದಂಪತಿಗಳು ಮೋಡಿ ಮಾಡಿದ್ದರು. ಇತ್ತೀಚಿನ ಸುದ್ದಿಯಂತೆ ಫೈವ್ ಪಾಯಿಂಟ್ ಸಮ್ ಒನ್ ಖ್ಯಾತಿಯ ಲೇಖಕ ಚೇತನ್ ಭಗತ್ ರ ಮುಂದಿನ ಚಿತ್ರಕ್ಕೆ ಐಶ್ ಅಭಿ ಸಹಿ ಹಾಕಿದ್ದಾರೆ.

3 ಈಡಿಯಟ್ಸ್ ಚಿತ್ರ ಕಥೆಗೆ ಸಂಬಂಧಿಸಿದಂತೆ ಹಾದಿ ರಂಪ ಬೀದಿ ರಂಪಾ ಮಾಡಿದ್ದ ಚೇತನ್ ಕಾದಂಬರಿಗಳೆಂದರೆ, ಯುವ ಪೀಳಿಗೆಗೆ ಅಚ್ಚುಮೆಚ್ಚು. 3 Mistakes Of My Life ಎಂಬ ಕೃತಿಯನ್ನು ತೆರೆಗೆ ತರಲು ಯತ್ನಿಸುತ್ತಿದ್ದು, ಪ್ರಧಾನ ಭೂಮಿಕೆಯಲ್ಲಿ ಅಭಿಷೇಕ್, ಐಶ್ವರ್ಯಾ ಕಾಣಿಸಲಿದ್ದಾರೆ.

'3 Mistakes Of My Life' ಚಿತ್ರದ ಕಥೆ ಹೀಗಿದೆ: ಚಿತ್ರದ ನಾಯಕ ಗೋವಿಂದ, ಓಮಿ ಹಾಗೂ ಇಷಾನ್ ತಮ್ಮ ಕನಸಿನ ಬದುಕನ್ನು ಬದುಕಲಾಗದೆ ಒದ್ದಾಡುತ್ತಿರುತ್ತಾರೆ. ಕೊನೆಗೊಂದು ದಿನ ಕ್ರೀಡೆಗೆ ಸಂಬಂಧಿಸಿದ ಸಣ್ಣ ಮಟ್ಟದ ವ್ಯಾಪಾರದಲ್ಲಿ ಹಣ ತೊಡಗಿಸುತ್ತಾರೆ.

ಮೂವರಲ್ಲಿ ಸ್ವಲ್ಪ ಬುದ್ಧಿವಂತನಾದ ಗೋವಿಂದ ಇಷಾನ್ ನ ತಂಗಿ ವಿದ್ಯಾ(ನಾಯಕಿ)ಳಿಗೆ ಗಣಿತ ಪಾಠ ಮಾಡುತ್ತಾ, ಮಾಡುತ್ತಾ ಲವ್ ಮಾಡುತ್ತಾನೆ. ಇವರೀರ್ವರ ಪ್ರೇಮ ಪ್ರಕರಣ ಬಯಲಾದ ನಂತರ ಸ್ನೇಹಿತರಲ್ಲಿ ಏನೇನು ಬದಲಾವಣೆಗಳಗುತ್ತದೆ.

ವ್ಯಾಪಾರದ ಏರುಪೇರು ಹೇಗೆ ಜೀವನದ ದಿಕ್ಕು ಬದಲಿಸುತ್ತದೆ ಎಂಬುದನ್ನು ತೆರೆಯ ಮೇಲೆ ನೋಡಿ ತಿಳಿಯಬೇಕು. ಅಂದ ಹಾಗೆ,ಅಭಿಷೇಕ್ ಬಚ್ಚನ್ ನ ಮುಂದಿನ ಚಿತ್ರಕ್ಕೆ 7 ಕೋಟಿ ರು ಸಂಭಾವನೆ ಪಡೆಯುತ್ತಿದ್ದು, ರಾಜ್ ಕುಮಾರ್ ಸಂತೋಷಿ, ಸಂತೋಷದಿಂದ ಜೂ.ಬಚ್ಚನ್ ಅನ್ನು ತಮ್ಮ ಚಿತ್ರಕ್ಕೆ ಬರಮಾಡಿಕೊಂಡಿದ್ದರಂತೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada