For Quick Alerts
  ALLOW NOTIFICATIONS  
  For Daily Alerts

  ಸಚಿನ್ ತೆಂಡೂಲ್ಕರ್ ಬಾಲಿವುಡ್ ಚಿತ್ರದಲ್ಲಿ ನಟನೆ?

  |

  ಬಾಲಿವುಡ್ ಗೂ ಕ್ರಿಕೆಟ್ ಆಟಕ್ಕೂ ದಶಕಗಳಿಗಿಂತಲೂ ಹೆಚ್ಚಿನ ನಂಟಿದೆ. ಈಗಾಗಲೇ ಕ್ರಿಕೆಟರ್ ಅಜಯ್ ಜಡೇಜಾ ಬಾಲಿವುಡ್ ಚಿತ್ರದಲ್ಲಿ ನಟಿಸಿ ಅದೃಷ್ಟ ಪರೀಕ್ಷೆ ಮಾಡಿದ್ದಾಗಿದೆ. ಇದೀಗ ಬಾಲಿವುಡ್ ಬಾಗಿಲು ತಟ್ಟಲು ಸಿದ್ಧವಾಗಿದ್ದಾರೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಎಂಬ ಸುದ್ದಿ ಎಲ್ಲಡೆ ಹರಿದಾಡುತ್ತಿದೆ.

  ಸುದ್ದಿಮೂಲಗಳಿಂದ ಬಂದ ಸುದ್ದಿಯನ್ನು ನಂಬಬಹುದಾದರೆ, ಸಚಿನ್ ತೆಂಡೂಲ್ಕರ್ ಸದ್ಯದಲ್ಲೇ ವಿಧು ವಿನೋದ್ ಚೋಪ್ರಾರ 'ಫೇರಾರಿ ಕೀ ಸವಾರಿ' ಚಿತ್ರದ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸುದ್ದಿ ನಿಜವೇ ಸುಳ್ಳೇ ಎಂಬುದು ಸದ್ಯಕ್ಕೆ ಗೊತ್ತಿಲ್ಲ. ಆದರೆ ಇತ್ತೀಚಿಗೆ ಸಚಿನ್ ಮಾಡಿದ 'ನೂರರ ನೂರು ಶತಕ' ಸಾಧನೆಗೆ ಇಡೀ ಬಾಲಿವುಡ್ ಬೆರಗಾಗಿ ಚಪ್ಪಾಳೆ ತಟ್ಟಿದೆ.

  ಅಷ್ಟೇ ಅಲ್ಲ, ರಾಷ್ಟ್ರದ ರಾಜಕಾರಣಿಗಳು, ಉದ್ಯಮಿಗಳು, ಪ್ರಮುಖವಾಗಿ ಮುಖೇಶ್ ಮತ್ತು ಅವರ ಪತ್ನಿ ನೀತಾ ಅಂಬಾನಿ ಸಚಿನ್ ಸಾಧನೆಯನ್ನು ಹೊಗಳಿದ್ದಲ್ಲದೇ ಸಂತೋಷಕೂಟವನ್ನು ಸಹ ಆಯೋಜಿಸಿದ್ದರು. ಈ ಎಲ್ಲಾ ಬೆಳವಣಿಗೆಗಳ ನಂತರ ಸಚಿನ್ ಬಾಲಿವುಡ್ ಚಿತ್ರಗಳಲ್ಲಿ ನಟಿಸಲಾರರು ಎಂದು ಹೇಳುವುದು ಹೇಗೆ ಎನ್ನಲಾಗುತ್ತಿದೆ. ಸುದ್ದಿ ನಿಜವಾಗಿರಲಿ ಎಂಬುದು ಸಚಿನ್ ಆರಾಧಕರ ಹಾರೈಕೆ...(ಏಜೆನ್ಸೀಸ್)

  English summary
  Cricketer Sachin Tendulkar might make his Bollywood debut in Vidhu Vinod Chopra’s Ferrari Ki Sawari.
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X