ಅಜ್ಞಾತವಾಸದಲ್ಲಿದ್ದ ನಟ ರಾಜ್ ಕಿರಣ್ ಹುಚ್ಚಾಸ್ಪತ್ರೆಯಲ್ಲಿ ಪತ್ತೆ

ರಾಜ್ ಕಿರಣ್ ಈಗಿನ ಸ್ಥಿತಿಯಲ್ಲಿ ಪತ್ತೆಯಾಗಿದ್ದಾದರೂ ಹೇಗೆ ಎಂದರೆ ... ಹಟಕ್ಕೆ ಬಿದ್ದವಳಂತೆ ಅದೊಮ್ಮೆ ದೀಪ್ತಿ ನಾವೆಲ್ ತನ್ನ ಫೇಸ್ ಬುಕ್ ನಲ್ಲಿ ಹೀಗೆ ಬರೆದುಕೊಡಿದ್ದಳು: ಚಿತ್ರ ರಂಗದ ನನ್ನ ಸ್ನೇಹಿತನಿಗಾಗಿ ಹುಡುಕುತ್ತಿದ್ದೇನೆ. ಆತನ ಹೆಸರು ರಾಜ್ ಕಿರಣ್. ಆದರೆ ಈತನ ಬಗ್ಗೆ ಸುಮಾರು ವರ್ಷಗಳಿಂದ ಯಾವುದೇ ಸುದ್ದಿಯಿಲ್ಲ. ಆತ ನ್ಯೂಯಾರ್ಕ್ ನಲ್ಲಿ ಟ್ಯಾಕ್ಸಿ ಡ್ರೈವರ್ ಆಗಿದ್ದಾನೆ ಎಂಬ ಆಘಾತಕಾರಿ ಸುದ್ದಿ ಬಹಳ ಹಿಂದೆ ಕಿವಿಗೆ ಬಿದ್ದಿತ್ತು. ಈ ಪ್ರತಿಭಾವಂತ ನಟನ ಬಗ್ಗೆ ನಿಮಗೇನಾದರೂ ವಿಷಯ ತಿಳಿದರೆ ಮಾಹಿತಿ ನೀಡಿ, ಪ್ಲೀಸ್.
'10 ವರ್ಷಗಳ ಅಜ್ಞಾತ ವಾಸದ ಬಳಿಕ ರಾಜ್ ಕಿರಣ್ ಪತ್ತೆಯಾಗಿದ್ದಾರೆ ಎಂಬ ಸಂತಸ ಒಂದು ಕಡೆಯಾಗಿದ್ದರೆ ಪ್ರತಿಭಾವಂತ ನಟ ಮಾನಸಿಕ ರೋಗಿಯಾಗಿ ಅಮೆರಿಕದಲ್ಲಿದ್ದಾನೆ ಎಂಬುದು ಅಷ್ಟೇ ದುಃಖಕರ ವಿಚಾರ' ಎಂದು ಬಿಜೆಪಿ ನಾಯಕಿ ಸುಷ್ಮಾ ಸ್ವರಾಜ್ ಟ್ರಿಟ್ಟರ್ ನಲ್ಲಿ ಇತ್ತೀಚೆಗೆ ಬರೆದುಕೊಂಡಿದ್ದಾರೆ.
'ಆತನ ಅನಾರೋಗ್ಯದ ಬಗ್ಗೆ ತಕ್ಷಣಕ್ಕೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಆದರೆ ಇಡೀ ಬಾಲಿವುಡ್ ಆ ಅಪ್ಪಟ ಪ್ರತಿಭೆಯ ನೆರವಿಗೆ ನಿಲ್ಲುತ್ತದೆ. ಹಣಕಾಸು ನೆರವಷ್ಟೇ ಅಲ್ಲ. ಸಕಲ ನೆರವು ಅರಿಗೆ ಲಭಿಸುವಂತೆ ಮಾಡುವ ಜವಾಬ್ದಾರಿ ನನ್ನದು' ಎಂದು ಶಾರುಖ್ ಹೇಳಿದ್ದಾರೆ.
'ರಿಶಿಕಪೂರ್ (ಕರ್ಜ್ ಚಿತ್ರದಲ್ಲಿ ಕಿರಣ್ ಜತೆ ನಟಿಸಿದ್ದರು) ಮತ್ತು ದೀಪ್ತಿ ಕೊನೆಗೂ ಆ ಮಹಾಣ್ ನಟನನ್ನು ಪತ್ತೆ ಹಚ್ಚಿದ್ದಾರೆ. ಹೇಗೇ ಇರಲಿ. ಆತನನ್ನು ಮುಂಬೈ ಕರೆತಂದು ಒಳ್ಳೆಯ ಚಿಕಿತ್ಸೆ ಕೊಡಿಸುತ್ತೇವೆ' ಎಂದು ಶಾರುಖ್ ಮಾತು ನೀಡಿದ್ದಾರೆ.
70ರ ದಶಕದಲ್ಲಿ ಸಾಂಸಾರಿಕ ಚಿತ್ರಗಳಲ್ಲಿ ಮಿಂಚಿದ್ದ ರಾಜ್ ಕಿರಣ್ 100ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಹಿಪ್ ಹಿಪ್ ಹುರ್ರೆ, ಅರ್ಥ್ ಅಂತಹ ಚಿತ್ರಗಳಲ್ಲಿ ಮನೋಜ್ಞ ಅಭಿನಯ ನೀಡಿದ್ದ ರಾಜ್ ಕಿರಣ್ ಅಟ್ಲಾಂಟಾದಲ್ಲಿ ಹಲವಾರು ವರ್ಷಗಳಿಂದ ಮಾನಸಿಕ ರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದುರ್ದೈವದ ಸಂಗತಿಯೆಂದರೆ ಇಂತಹ ಕಷ್ಟ ಕಾಲದಲ್ಲಿ ಅವರ ಕುಟುಂಬ ರಾಜ್ ಕಿರಣ್ ಅವರನ್ನು ತೊರೆದಿದೆ.


Click it and Unblock the Notifications











