For Quick Alerts
  ALLOW NOTIFICATIONS  
  For Daily Alerts

  ಅಮಿತಾಬ್, ವಿದ್ಯಾ ಜೊತೆ ಸುಜಯ್ ಹೊಸ ಕಹಾನಿ

  |

  ವಿದ್ಯಾ ಬಾಲನ್ ನಟನೆ ಹಾಗೂ ಸುಜಯ್ ಘೋಶ್ ನಿರ್ದೇಶನದ 'ಕಹಾನಿ' ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಗೆದ್ದಿದೆ. ವಿದ್ಯಾ ಬಾಲನ್ ನಂಬಿ ಮೋಸ ಹೋಗದ ಸುಜಯ್, ಇದೀಗ ಮತ್ತೆ ವಿದ್ಯಾ ಬಾಲನ್ ಹಾಕಿಕೊಂಡು ಚಿತ್ರ ನಿರ್ದೇಶಿಸಲಿದ್ದಾರೆ. ಜೊತೆಗೆ ಬಾಲಿವುಡ್ ಬಿಗ ಬಿ ಅಮಿತಾಬ್ ಕೂಡ ನಟಿಸಲಿದ್ದಾರೆ.

  ವಿದ್ಯಾ ಬಾಲನ್ ಈಗ ಬಾಲಿವುಡ್ಡಿನ ಹಾಟ್ ಫೇವರೆಟ್. ನಟಿಸಿದ ಎರಡೂ ಚಿತ್ರಗಳು ಗಲ್ಲಾ ಪೆಟ್ಟಿಗೆಯನ್ನು ತುಂಬಿಸಿರುವುದಲ್ಲದೇ ದಿ ಡರ್ಟಿ ಪಿಕ್ಚರ್ ಚಿತ್ರ ವಿದ್ಯಾಗೆ 2011 ರ ರಾಷ್ಟ್ರೀಯ ಶ್ರೇಷ್ಠ ನಟಿ ಪ್ರಶಸ್ತಿಯನ್ನೂ ಗಳಿಸಿಕೊಟ್ಟಿದೆ. ಡರ್ಟಿ ನಂತರ ಬಿಡುಗಡೆಯಾದ ಕಹಾನಿ ಕೂಡ ಯಶಸ್ವಿಯಾಗಿ ಪ್ರದರ್ಶವಾಗುತ್ತಿದೆ.

  ಸುನಿಲ್ ಗಂಗೋಪಾಧ್ಯಾಯರ 'ಅರ್ನ್ಯರ್ ದಿನ್ ರಾತ್ರಿ' ಕಾದಂಬರಿಯನ್ನು ತಮ್ಮ ಮುಂದಿನ ಚಿತ್ರಕ್ಕಾಗಿ ಬಳಸಿಕೊಳ್ಳಲಿರುವ ಸುಜಯ್, " ಇದನ್ನು ಕಹಾನಿಗಿಂತಲೂ ಯಶಸ್ವಿಯಾಗುವಂತೆ ಮಾಡಲಿದ್ದೇನೆ. ಈಗ ನನ್ನ ಯೋಚನೆಗಳೆಲ್ಲವೂ ಕಹಾನಿಯನ್ನು ಮೇರಲೇಬೇಕು, ಮೀರುವುದು ಖಚಿತ" ಎಂದಿದ್ದಾರೆ.

  ಕಹಾನಿಯಲ್ಲಿನ ವಿದ್ಯಾ ನಟನೆ ಕೂಡ ವಿಮರ್ಶಕರು ಹಾಗೂ ಪ್ರೇಕ್ಷಕರ ಮೆಚ್ಚುಗೆ ಗಳಿಸಿದೆ. ಈ ಎಲ್ಲಾ ಕಾರಣಗಳಿಂದ ಕಹಾನಿ ನಿರ್ದೇಶಕ ವಿದ್ಯಾರನ್ನೇ ಮುಂದಿನ ಚಿತ್ರಕ್ಕೆ ಆಯ್ಕೆ ಮಾಡಿದ್ದಾರೆ. ಜೊತೆಗೆ ಅಮಿತಾಬ್ ಇರುತ್ತಾರೆಂದ ಮೇಲೆ ಸಿನಿಪ್ರೇಕ್ಷಕರಿಗೆ ಹಬ್ಬ ಗ್ಯಾರಂಟಿ. ಬಿಬ್ ಬಿ ಮತ್ತು ವಿದ್ಯಾ ಮೇಲೆ ಇನ್ನಿಲ್ಲದ ಭರವಸೆಯನ್ನು ಸುಜಯ್ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್)

  English summary
  Movie Kahaani director Sujoy Ghosh wants to cast Amitabh Bachchan and Vidya Balan for his next movie.
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X