For Quick Alerts
  ALLOW NOTIFICATIONS  
  For Daily Alerts

  ಭೂಮಿಕಾ ಚಾವ್ಲಾ ದಾಂಪತ್ಯ ಜೀವನದಲ್ಲಿ ಬಿರುಕು

  By Rajendra
  |

  ಬಾಲಿವುಡ್ ತಾರೆ ಭೂಮಿಕಾ ಚಾವ್ಲಾ ಅವರ ದಾಂಪತ್ಯ ಜೀವನ ವಿವಾಹ ವಿಚ್ಛೇದನದಲ್ಲಿ ಅಂತ್ಯವಾಗಲಿದೆ. ಭರತ್ ಠಾಕೂರ್ ಮತ್ತು ಭೂಮಿಕಾ ಮೂರು ವರ್ಷಗಳ ಹಿಂದೆ ಮದುವೆಯಾಗಿದ್ದರು. ಈಗ ಆಕೆಯ ದಾಂಪತ್ಯ ಜೀವನದಲ್ಲಿ ಬಿರುಕು ಉಂಟಾಗಿದ್ದು ವಿವಾಹ ವಿಚ್ಛೇದನಕ್ಕೆ ಆಕೆ ಅರ್ಜಿ ಸಲ್ಲಿಸಿದ್ದಾರೆ ಎನ್ನಲಾಗಿದೆ.

  ಭರತ್ ಠಾಕೂರ್ ಮತ್ತೊಬ್ಬರೊಂದಿಗೆ ಸಂಬಂಧ ಹೊಂದಿದ್ದಾರೆ ಎಂದು ಆಪಾದಿಸಿರುವ ಭೂಮಿಕಾ ಈಗ ವಿವಾಹ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಆದರೆ ಭರತ್ ಮಾತ್ರ ಆಕೆಯ ಆರೋಪವನ್ನು ಒಪ್ಪಲು ಸಿದ್ಧರಿಲ್ಲ. ನಾನು ಯಾವುದೇ ತಪ್ಪು ಮಾಡಿಲ್ಲ ಎಂದಿದ್ದಾರೆ.

  ಭೂಮಿಕಾ ಅವರೊಂದಿಗೇ ಕೂಡಿಬಾಳಬೇಕು ಎಂಬುದು ಭರತ್ ಅವರ ಆಸೆ. ಆದರೆ ಭೂಮಿಕಾ ಮಾತ್ರ ಇದ್ಯಾವುದನ್ನೂ ಕೇಳುವ ಸ್ಥಿತಿಯಲ್ಲಿಲ್ಲ. ವಿವಾಹ ವಿಚ್ಛೇದನವೊಂದೇ ನಮ್ಮ ಸಮಸ್ಯೆಗೆ ಪರಿಹಾರ ಎಂದು ಆಕೆ ಪಟ್ಟುಹಿಡಿದಿರುವುದಾಗಿ ಮೂಲಗಳು. ಅಕ್ಟೋಬರ್ 21, 2007ರಲ್ಲಿ ಭೂಮಿಕಾ ಮದುವೆ ಭರತ್ ಜತೆ ನಡೆದಿತ್ತು.

  English summary
  Actress Bhumika Chawla and hubby Bharat Thakur three years marriage will reportedly end with a divorce. If reports are to be believed the actress has filed for divorce.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X