ಬಾಲಿವುಡ್ ನಟರಿಬ್ಬರ ಮಧ್ಯೆ ಮತ್ತೆ ಬಂತು ಮನಸ್ತಾಪ
ಬಾಲಿವುಡ್ ನಲ್ಲಿ ನಟಿಯರ ವೈಮನಸ್ಯಕ್ಕೆ, ಹುಸಿಮುನಿಸಿಗೆ 'ಕೋಳಿ' ಜಗಳ ಎಂಬ ಹೆಸರಿನಿಂದ ಕರೆಯುವುದು ಮಾಮೂಲು. ಈಗ ಇದು ನಟರಿಬ್ಬರ ಜಗಳ. ಹಾಗಾಗಿ ಇದನ್ನು ಹೋರಿಗಳ ಜಗಳ ಎನ್ನುವುದೇ ಸೂಕ್ತ. ಯುದ್ಧರಂಗದಲ್ಲಿರುವ ಇಬ್ಬರು ಹೋರಿಗಳು ಹೃತಿಕ್ ರೋಶನ್ ಮತ್ತು ಸಲ್ಮಾನ್ ಖಾನ್.
ಇದು ಹೊಸ ವೆಷಯವೇನಲ್ಲ. ಆದರೆ ಸಂದರ್ಭ ಹೊಸದಷ್ಟೇ. ಬಿಗ್ ಬಾಸ್ 5 ಗ್ರಾಂಡ್ ಫೈನಲ್ ವೇಳೆ ಹೃತಿಕ್ ನಟನೆಯ ಚಿತ್ರ 'ಅಗ್ನಿಪಥ್' ಪ್ರಮೋಟ್ ಮಾಡಲು ಸಲ್ಮಾನ್ ನಿರಾಕರಿಸಿದ್ದಾರೆ. ಇದರಿಂದ ಅವಮಾನಿತರಾಗಿರುವ ಹೃತಿಕ್ ಸೇಡು ತೀರಿಸಿಕೊಳ್ಳಲು ನಿರ್ಧಿರಿಸಿ NDTVಯ ಸಲ್ಮಾನ್ ಪರ ಕಾರ್ಯಕ್ರಮದಲ್ಲಿ ಭಾಗಿಯಾಗಲು ನಿರಾಕರಿಸಿದ್ದಾರೆ.
ಈ ಮೊದಲು ಗುಜಾರಿಶ್ ಸಿನಿಮಾದ ವೇಳೆ ಕೂಡ ಹೃತಿಕ್ ಸಲ್ಮಾನ್ ಮಧ್ಯೆ ಮನಸ್ತಾಪವಾಗಿತ್ತು. ಮತ್ತೆ ಮತ್ತೆ ಅದು ಸಂಭವಿಸಿದ್ದರಿಂದ ಹೃತಿಕ್ ಗೂ ಸಾಕಾಗಿದೆ. ಬಾಲಿವುಡ್ 'ಅಣ್ಣ'ನ ಪಟ್ಟ ಸಲ್ಮಾನ್ ಖಾನ್ ಗೆ ಹೋಗುವುದು ಅವರಿಗಿಟಷ್ಟವಿಲ್ಲ. ಒಟ್ಟಿನಲ್ಲಿ ಈ ನಟರ ಜಗಳ ಮನಸ್ತಾಪ ಸದ್ಯಕ್ಕಂತೂ ಮುಂದುವರಿದಿದೆ, ಕೊನೆ ಎಂದೋ ಬಲ್ಲವರಾರು? (ಏಜೆನ್ಸೀಸ್)


Click it and Unblock the Notifications











