For Quick Alerts
  ALLOW NOTIFICATIONS  
  For Daily Alerts

  ಜಾನ್ ಮೂಗಿಗೆ ಕೊಟ್ಟ ಅವನು ಸಕತ್ ಪಂಚ್!

  By Mahesh
  |

  ಮಂಗಳೂರಿಗೆ ಬಂದು ಅಭಿಮಾನಿಯಿಂದ ಕೈ ಕಚ್ಚಿಸಿಕೊಂಡಿದ್ದ ಸುರಸುಂದರಾಗ ಜಾನ್ ಅಬ್ರಹಾಂ, ಈಗ ಜ್ಯೂನಿಯರ್ ಕಲಾವಿದನಿಂದ ಗೂಸಾ ತಿಂದಿದ್ದಾನೆ.

  ಚಿತ್ರೀಕರಣದ ವೇಳೆಯಲ್ಲಿ ಈ ರೀತಿ ಗೂಸಾ ತಿನ್ನುವುದು ಜಾನ್ ಗೆ ಮಾಮೂಲಿ ಎನ್ನಬಹುದು. ಫೋರ್ಸ್ ಚಿತ್ರದ ವೇಳೆಯಲ್ಲಿ ಕೂಡಾ ಜಾನ್ ಗೆ ಸಕತ್ ಪೆಟ್ಟು ಬಿದ್ದಿತ್ತು. ಆದರೆ, ಈ ಬಾರಿ ಬಿದ್ದ ಗೂಸಾ ಕೊಂಚ ಹೆಚ್ಚಿನ ನೋವು ನೀಡುತ್ತಿದೆ.

  ವರದಿಗಳ ಪ್ರಕಾರ ಸಂಜಯ್ ಗುಪ್ತ ಅವರ ಶೂಟೌಟ್ ಅಟ್ ವಡಾಲ ಚಿತ್ರದ ಫೈಟಿಂಗ್ ಸೀನ್ ನಲ್ಲಿ ಜ್ಯೂ. ಕಲಾವಿದನೊಬ್ಬ ಜಾನ್ ಮೂಗಿಗೆ ಸಕತ್ ಪಂಚ್ ಕೊಟ್ಟಿದ್ದಾನೆ. ಜಾನ್ ಮೂಗಿನಿಂದ ರಕ್ತ ಬಳಬಳನೆ ಹರಿದಿದೆ. ರಕ್ತ ಕಂಡು ಟಫ್ ಹುಡುಗ ಜಾನ್ ಕೂಡ ಒಂದು ಕ್ಷಣ ಅವಾಕ್ಕಾಗಿದ್ದಾನೆ.

  ಮೆದವಾಗಿ ಬಾರಿಸಬೇಕಿದ್ದ ಜ್ಯೂ.ಕಲಾವಿದ ಯಾಕೆ ರೀತಿ ಮಾಡಿದ ಎಂದು ಚಿತ್ರತಂಡ ಚಿಂತೆಗೀಡಾಗಿದೆ. ಆದರೆ, ಇದೊಂದು ಆಕಸ್ಮಿಕ ಘಟನೆ ಎಂದು ನಿರ್ಧರಿಸಲಾಗಿದೆ. ಜಾನ್ ಗೆ ಚಿಕಿತ್ಸೆ ನೀಡಲಾಗಿದ್ದು, ಆತಂಕಕ್ಕೆ ಕಾರಣವಿಲ್ಲ ಎನ್ನಲಾಗಿದೆ.

  ಆದರೆ, ಜಾನ್ ಏಕೆ ಈ ರೀತಿ ಪದೇ ಪದೇ ಒದೆ ತಿನ್ನುತ್ತಾನೆ ಎಂಬುದು ಕುತೂಹಲಕಾರಿಯಾಗಿದೆ. ಈ ಚಿತ್ರದಲ್ಲಿ 1982ರಲ್ಲಿ ಮುಂಬೈ ಪೊಲೀಸ್ ಗುಂಡಿಗೆ ಬಲಿಯಾದ ಮಾನ್ಯ ಸುರ್ವೆ ಎಂಬ ಗ್ಯಾಂಗ್ ಸ್ಟರ್ ಪಾತ್ರದಲ್ಲಿ ಜಾನ್ ಕಾಣಿಸಿಕೊಂಡಿದ್ದಾನೆ.

  English summary
  Actor John Abraham, who had earlier faced a lot of cuts and bruises during his rigorous workouts for the film Force, has yet again undergone the same pain, but this time it has turned out to be a serious one.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X