»   » ವಿವೇಕ್ ಒಬೆರಾಯ್ ಗೆ ಹೈಕೋರ್ಟ್ ನೋಟೀಸ್

ವಿವೇಕ್ ಒಬೆರಾಯ್ ಗೆ ಹೈಕೋರ್ಟ್ ನೋಟೀಸ್

Posted By:
Subscribe to Filmibeat Kannada

ಕನ್ನಡತಿ ಪ್ರಿಯಾಂಕಾ ಆಳ್ವ ಕೈಹಿಡಿಯಲಿರುವ ಬಾಲಿವುಡ್ ನಟ ವಿವೇಕ್ ಒಬೆರಾಯ್ ಈಗ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ದೆಹಲಿ ಹೈಕೋರ್ಟ್ ವಿವೇಕ್ ಗೆ ನೊಟೀಸ್ ಜಾರಿ ಮಾಡಿದೆ. ವಿವೇಕ್ ಒಡೆತನದ ದೆಹಲಿ ಮೂಲದ ಯಶಿ ಮಲ್ಟಿಮೀಡಿಯಾ ಪ್ರೈವೇಟ್ ಲಿಮಿಟೆಡ್ ಕಂಪನಿ ವಿರುದ್ಧ ಮುಂಬೈ ಮೂಲದ ಮೆಹ್ತಾ ಎಂಟರ್ ಟೈನ್ ಮೆಂಟ್ ಸಂಸ್ಥೆ ನ್ಯಾಯಾಲಯದಲ್ಲಿ ತಕರಾರುಅರ್ಜಿ ಸಲ್ಲಿಸಿತ್ತು.

ವಿವೇಕ್ ಸೇರಿದಂತೆ ಆತನ ತಂದೆ ಸುರೇಶ್ ಒಬೆರಾಯ್ ಹಾಗೂ ತಂಗಿ ಮೇಘನಾ ಒಬೆರಾಯ್ ಅವರಿಗೂ ನ್ಯಾಯಮೂರ್ತಿ ಎಸ್ ರವೀಂದ್ರ ಭಟ್ ನೋಟೀಸ್ ಜಾರಿ ಮಾಡಿದ್ದಾರೆ. ಕೋರ್ಟ್ ಗೆ ಮೆಹ್ತಾ ಸಂಸ್ಥೆ ಸಲ್ಲಿಸಿರುವ ಅರ್ಜಿಯಲ್ಲಿ ರು.4.86 ಕೋಟಿ ನಷ್ಟವಾಗಿದೆ ಎಂದು ದೂರಿತ್ತು.

ಕೆನಡಾ ಮತ್ತು ಯುಎಸ್ ನಲ್ಲಿ ಪ್ರದರ್ಶನ ಒಂದನ್ನು ನಡೆಸಲು ಮೆಹ್ತಾ ಎಂಟರ್ ಟೈನ್ ಮೆಂಟ್ ಸಂಸ್ಥೆ 2003ರಲ್ಲಿ ಯಶಿ ಕಂಪನಿಗೆ ರು.1 ಲಕ್ಷ ಮುಂಗಡ ಹಣ ನೀಡಿತ್ತು. ಆದರೆ ಅನಾರೋಗ್ಯದ ಕಾರಣ ಒಬೆರಾಯ್ ಈ ಪ್ರದರ್ಶನ ನಡೆಸಲು ವಿಫಲರಾಗಿರುತ್ತಾರೆ. ಇದರಿಂದ ತಮಗೆ ತೀವ್ರ ನಷ್ಟವಾಗಿದೆ ಎಂದು ಆರೋಪಿಸಿ ಮೆಹ್ತಾ ಸಂಸ್ಥೆ ಕೋರ್ಟ್ ಮೆಟ್ಟಿಲೇರಿತ್ತು.

ಈ ಸಂಬಂಧ ಹಲವಾರು ಲೀಗಲ್ ನೋಟೀಸ್ ಗಳನ್ನು ಯಶಿ ಸಂಸ್ಥೆಗೆ ಮೆಹ್ತಾ ಸಂಸ್ಥೆ ಕಳುಹಿಸಿದರೂ ಪ್ರಯೋಜನವಾಗಿರುವುದಿಲ್ಲ. ಇದರಿಂದ ಬೇಸತ್ತ ಮೆಹ್ತಾ ಸಂಸ್ಥೆ ಕಡೆಗೆ ದೆಹಲಿ ಹೈಕೋರ್ಟ್ ಮೊರೆಹೋಗಿತ್ತು. ನವೆಂಬರ್ 1ರೊಳಗೆ ಪ್ರತಿಕ್ರಿಯಿಸುವಂತೆ ವಿವೇಕ್ ಒಬೆರಾಯ್ ಗೆ ಕೋರ್ಟ್ ಸೂಚಿಸಿದೆ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada