»   » ನಟಿ ಐಶ್ವರ್ಯ ರೈ ಬಚ್ಚನ್ ಹೆರಿಗೆ ಟಿವಿ ಪ್ರಸಾರಕ್ಕೆ ಬ್ರೇಕ್

ನಟಿ ಐಶ್ವರ್ಯ ರೈ ಬಚ್ಚನ್ ಹೆರಿಗೆ ಟಿವಿ ಪ್ರಸಾರಕ್ಕೆ ಬ್ರೇಕ್

Posted By:
Subscribe to Filmibeat Kannada

ಸಿನಿಮಾ ತಾರೆ ಐಶ್ವರ್ಯ ರೈ ಹೆರಿಗೆಗೆ ದಿನಗಣನೆ ಶುರುವಾಗಿದ್ದು ಬಾಲಿವುಡ್‌ನಲ್ಲಿ ಪ್ರಸವ ವೇದನೆ ಶುರುವಾಗಿದೆ. ಟಿವಿ ಮಾಧ್ಯಮಗಳು ತಮ್ಮ ಕ್ಯಾಮೆರಾಗಳನ್ನು ಸಿದ್ಧವಾಗಿಟ್ಟುಕೊಂಡು ಆಸ್ಪತ್ರೆ ಕಡೆಗೆ ದೌಡಾಯಿಸಿವೆ. ಆದರೆ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಐಶ್ವರ್ಯ ರೈ ಹೆರಿಗೆ ಸುದ್ದಿ ಪ್ರಸಾರಕ್ಕೆ ಬ್ರೇಕ್ ಹಾಕಿದೆ.

ಈ ಸಂಬಂಧ ಟಿವಿ ವಾಹಿನಿಗಳಿಗೆ ಕಠಿಣವಾದ ಷರತ್ತುಗಳನ್ನು ಮಾಹಿತಿ ಮತ್ತು ಪ್ರಸಾರ ಸಚಿವಾಲಯ ರವಾನಿಸಿದೆ. ಹಾಗಂತ ಐಶ್ವರ್ಯ ರೈ ಅವರ ಮಾವ ಅಮಿತಾಬ್ ಬಚ್ಚನ್ ಅವರು ಟ್ವೀಟಿಸಿದ್ದಾರೆ. ಟಿವಿ ವಾಹಿನಿಗಳಿಗೆ ಸಚಿವಾಲಯ ಕಳುಹಿಸಿರುವ ಕೆಲವು ಷರತ್ತುಗಳು ಹೀಗಿವೆ.

ಅಸ್ಪತ್ರೆಯ ಹೊರಗೆ, ಒಳಗೆ ಅಥವಾ ಸುತ್ತಮುತ್ತ ಎಲ್ಲೂ ಓಬಿ ವ್ಯಾನ್ ನಿಲ್ಲಿಸುವಂತಿಲ್ಲ. ಎಂಎಂಎಸ್ ಕಳುಹಿಸುವಂತಿಲ್ಲ. ಬಚ್ಚನ್ ಕುಟುಂಬದ ಅನುಮತಿ ಪಡೆಯದೆ ಮಗುವಿನ ಫೋಟೋ ತೆಗೆಯುವಂತಿಲ್ಲ. ಈ ಮೂಲಕ ಕ್ಷಣಕ್ಷಣದ ಸುದ್ದಿಯನ್ನು ಬಿತ್ತರಿಸಲು ಹೊರಟ ಮಾಧ್ಯಮಗಳ ಉತ್ಸಾಹಕ್ಕೆ ತಣ್ಣೀರೆರಚಿದಂತಾಗಿದೆ. (ಏಜೆನ್ಸೀಸ್)

English summary
The Ministry of Information and Broadcasting (I&B) has sent some guidelines barring the channels from reporting about Aishwarya Rai's impending delivery.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada