twitter
    For Quick Alerts
    ALLOW NOTIFICATIONS  
    For Daily Alerts

    15 ದಿನಗಳ ಜೈಲು ಶಿಕ್ಷೆ ರದ್ದು, ಜಾನ್‌ಗೆ ಜಾಮೀನು

    By Prasad
    |

    ಮುಂಬೈ, ಮಾ. 9 : ಆರು ವರ್ಷಗಳ ಹಿಂದೆ ಅತಿ ವೇಗವಾಗಿ ಮತ್ತು ನಿರ್ಲಕ್ಷ್ಯದಿಂದ ಬೈಕ್ ಓಡಿಸಿ ಇಬ್ಬರು ಯುವಕರನ್ನು ಗಾಯಗೊಳಿಸಿದ್ದ ಪ್ರಕರಣದಲ್ಲಿ ಖ್ಯಾತ ಬಾಲಿವುಡ್ ನಟ ಜಾನ್ ಅಬ್ರಹಾಂ ಅವರಿಗೆ ವಿಧಿಸಲಾಗಿದ್ದ 15 ದಿನಗಳ ಸಾದಾ ಜೈಲು ಶಿಕ್ಷೆಯನ್ನು ಮುಂಬೈನ ನೆಷನ್ಸ್ ಕೋರ್ಟ್ ಎತ್ತಿಹಿಡಿದಿದೆ.

    ತನ್ನ ಪ್ರೇಯಸಿಯರಿಗಿಂತ ಬೈಕನ್ನು ಹೆಚ್ಚಾಗಿ ಪ್ರೀತಿಸುವ ಜಾನ್ ಅಬ್ರಹಾಂ ಅವರು 2006ರಲ್ಲಿ ಮುಂಬೈನ ಖರದಂಡಾ ಪ್ರದೇಶದಲ್ಲಿ ಇಬ್ಬರು ಯುವಕರ ಮೇಲೆ ಬೈಕ್ ನುಗ್ಗಿಸಿ ಗಾಯಗೊಳಿಸಿದ್ದರು. ಅವರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಾಗಿ 2010ರಲ್ಲಿ ಬಾಂದ್ರಾ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಅವರಿಗೆ 15 ದಿನಗಳ ಜೈಲು ಶಿಕ್ಷೆ ವಿಧಿಸಿತ್ತು.

    ಅಪಘಾತ ಸಂಭವಿಸಿದ ಸಂದರ್ಭದಲ್ಲಿ ಜಾನ್ ಅವರು ಕುಡಿತ ಮತ್ತಿನಲ್ಲಿ ಇರಲಿಲ್ಲ ಹಾಗು ಅವರೂ ಗಾಯಗೊಂಡಿದ್ದ ಕಾರಣದಿಂದ ಶಿಕ್ಷೆಯ ಪ್ರಮಾಣವನ್ನು ಕೇವಲ 15 ದಿನಗಳ ಜೈಲು ಶಿಕ್ಷೆಗೆ ಸೀಮಿತಪಡಿಸಲಾಸಿತ್ತು. ಆ ತೀರ್ಪನ್ನು ಪ್ರಶ್ನಿಸಿ ಜಾನ್ ಅಬ್ರಹಾಂ ಸೆಷನ್ಸ್ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ಈಗ ಸೆಷನ್ಸ್ ನ್ಯಾಯಾಲಯದ ತೀರ್ಪನ್ನು ಕೂಡ ಅವರು ಹೈಕೋರ್ಟಿನಲ್ಲಿ ಪ್ರಶ್ನಿಸುವ ಸಂಭವನೀಯತೆಯಿದೆ.

    ಜೈಲ್ ಶಿಕ್ಷೆ ರದ್ದು, ಜಾನ್‌ಗೆ ಜಾಮೀನು : 15 ದಿನಗಳ ಜೈಲು ಶಿಕ್ಷೆ ಎದುರಿಸುತ್ತಿದ್ದ ಜಾನ್ ಅಬ್ರಹಾಂಗೆ ಮುಂಬೈ ಹೈಕೋರ್ಟ್ 20,000 ರು. ಬಾಂಡ್ ಸ್ವೀಕರಿಸಿ ಜಾಮೀನು ಮಂಜೂರು ಮಾಡಿದೆ ಮತ್ತು 15 ದಿನಗಳ ಜೈಲು ಶಿಕ್ಷೆಯನ್ನು ರದ್ದು ಮಾಡಿದೆ.

    English summary
    Session court in Mumbai has sentenced bollywood actor John Abraham 15 days jail sentence, upholding the order of Bandra Magistrate court, for rash and negligent driving. John Abraham had rammed his bike into two youth injuring them.
    Saturday, March 10, 2012, 7:22
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X