»   » ಅಂತರ್ಜಾಲದಲ್ಲಿ ಬಾಗಿಲು ತೆರೆದ ಪ್ರಿಯಾಂಕಾ

ಅಂತರ್ಜಾಲದಲ್ಲಿ ಬಾಗಿಲು ತೆರೆದ ಪ್ರಿಯಾಂಕಾ

Posted By:
Subscribe to Filmibeat Kannada

ಮೈಕ್ರೋ ಬ್ಲಾಗಿಂಗ್ ವೆಬ್ ಸೈಟ್ ಟ್ವಿಟ್ಟರ್ ನಲ್ಲಿ ಈಗಾಗಲೆ ಸಕ್ರಿಯವಾಗಿರುವ ಮಾಜಿ ವಿಶ್ವಸುಂದರಿ ಹಾಗೂ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ತಮ್ಮ ಅಧಿಕೃತ ವೆಬ್ ಸೈಟನ್ನು ಲೋಕಾರ್ಪಣೆ ಮಾಡಿದ್ದಾರೆ. ತೆರೆದಿದೆ ವೆಬ್ ಸೈಟ್ ಓ ಬಾ ಅತಿಥಿ, ಇಂತಾದರು ಬಾ ಅಂತಾದರು ಬಾ ಎಂತಾದರು ಬಾ ಬಾ ಬಾ...ಎಂದು ಅಭಿಮಾನಿಗಳು ಕೈಬೀಸಿ ಕರೆಯುತ್ತಿದ್ದಾರೆ.

"ಕಡೆಗೂ ನಾನು ನನ್ನ ಅಂತರ್ಜಾಲ ತಾಣವನ್ನು ತೆರೆದಿದ್ದೇನೆ. ನನ್ನ ಬಗ್ಗೆ ಸಂಪೂರ್ಣ ಮಾಹಿತಿಗಳು ಇಲ್ಲಿ ಲಭ್ಯ " ಎಂದು ಟ್ವಿಟ್ಟರ್ ನಲ್ಲಿ ಪ್ರಿಯಾಂಕಾ ಹೇಳಿದ್ದಾರೆ. ಈ ಅಂತರ್ಜಾಲ ತಾಣದಲ್ಲಿ ತಮ್ಮ ನೆಚ್ಚಿ ನಟಿಯನ್ನು ದರ್ಶಿಸಿಕೊಳ್ಳಬಹುದು.

"ನನ್ನ ವೆಬ್ ತಾಣ ನನ್ನ ವ್ಯಕ್ತಿತ್ವಕ್ಕೆ ಕನ್ನಡಿ ಹಿಡಿಯುತ್ತದೆ. ನನ್ನ ಬೇಕು ಬೇಡಗಳು...ನನ್ನ ಅಭಿಪ್ರಾಯಗಳನ್ನು ಇಲ್ಲಿ ದಾಖಲಿಸಿದ್ದೇನೆ. ಈ ಅಂತರ್ಜಾಲ ತಾಣಕ್ಕಾಗಿ ನಾನು ತಿಂಗಳುಗಟ್ಟಲೆ ಶ್ರಮಿಸಿದ್ದೇನೆ" ಎಂದು ಪ್ರಿಯಾಂಕಾ ಚೋಪ್ರಾ ಹೇಳಿಕೊಂಡಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada