»   » ಐಶ್ವರ್ಯ ರೈ ಡೆಲಿವರಿ ಡೇಟ್ ಮೇಲೆ 150 ಕೋಟಿ ಬೆಟ್

ಐಶ್ವರ್ಯ ರೈ ಡೆಲಿವರಿ ಡೇಟ್ ಮೇಲೆ 150 ಕೋಟಿ ಬೆಟ್

Posted By:
Subscribe to Filmibeat Kannada

ಬೆಟ್ಟಿಂಗ್ ಬಾಬುಗಳು ವರಸೆ ಬದಲಾಯಿಸಿದ್ದಾರೆ. ಇಷ್ಟು ದಿನ ಬಾಲಿವುಡ್ ತಾರೆ ಐಶ್ವರ್ಯ ರೈಗೆ ಹುಟ್ಟಲಿರುವ ಮಗು ಹೆಣ್ಣಾ ಗಂಡಾ ಎಂದು ಬಾಜಿ ಕಟ್ಟಿದ್ದರು. ಈಗ ಐಶ್ವರ್ಯ ಡೆಲಿವರಿ ಡೇಟ್ ಮೇಲೆ ಬೆಟ್ಟಿಂಗ್ ಕಟ್ಟಿದ್ದಾರೆ. ಅದೂ ರು.150 ಕೋಟಿ ಎನ್ನುತ್ತವೆ ಮೂಲಗಳು.

ಬೆಟ್ಟಿಂಗ್ ಏನಪ್ಪಾ ಅಂದ್ರೆ 11.11.11ರಂದು ಐಶ್ವರ್ಯ ರೈಗೆ ಹೆರಿಗೆ ಆಗುತ್ತದೆಯೇ ಇಲ್ಲವೇ? ಎಂಬುದು. ಈ ಫ್ಯಾನ್ಸಿ ದಿನಾಂಕದಂದೇ ಐಶ್ವರ್ಯ ಪ್ರಸವಿಸಬೇಕು ಎಂದೇನು ಇಲ್ಲ. ಒಟ್ಟಿನಲ್ಲಿ ಡೆಲಿವರಿ ಡೇಟ್ ನವೆಂಬರ್ ತಿಂಗಳು ಎಂಬುದು ಕನ್ಪರ್ಮ್ ಆಗಿದೆ ಅಷ್ಟೆ.

ಬೆಟ್ಟಿಂಗ್ ಬಾಬುಗಳ ಪ್ರಕಾರ ಐಶ್ವರ್ಯ ರೈ ನವೆಂಬರ್ 9 ಅಥವಾ 14ಕ್ಕೆ ಪ್ರಸವಿಸಲಿದ್ದಾರೆ. ನವೆಂಬರ್ 14ರಂದು ಮಕ್ಕಳ ದಿನಾಚರಣೆ. ಹಾಗಾಗಿ ಸರಿಸುಮಾರು ರು.150 ಕೋಟಿ ಬೆಟ್ಟಿಂಗ್ ಮಾಡಲಾಗಿದೆ ಎಂಬ ಮಹತ್ವದ ಸಂಗತಿಯೊಂದು ಬೆಳಕಿಗೆ ಬಂದಿದೆ. ಆದರೆ ಸಂಖ್ಯಾಶಾಸ್ತ್ರಜ್ಞರ ಪ್ರಕಾರ 11.11.11ರಂದೇ ಐಶ್ವರ್ಯ ರೈ ಮಗುವಿಗೆ ಜನ್ಮ ನೀಡಲಿದ್ದಾರೆ ಎನ್ನುತ್ತಾರೆ.

ಉಚಿತ ಸಲಹೆ: ಐಶ್ವರ್ಯ ರೈ ಡೆಲಿವರಿ ಡೇಟ್ ಮೇಲೆ ನೀವು ಬೆಟ್ ಮಾಡಿ ಕೋಟಿಗಟ್ಟಲೆ ಹಣ ಗೆಲ್ಲಲೇ ಬೇಕೆ!? ಹಾಗಿದ್ದರೆ ಹೀಗೆ ಮಾಡಿ ನೋಡಿ. ಆದರೆ ದಯವಿಟ್ಟು ಯಾರಿಗೂ ಹೇಳಬೇಡಿ ಪ್ಲೀಸ್. ಐಶ್ವರ್ಯ ರೈರನ್ನು ಪರೀಕ್ಷಿಸುತ್ತಿರುವ ವೈದ್ಯ ಯಾವ ಡೇಟ್ ಮೇಲೆ ಬೆಟ್ ಕಟ್ಟಿದ್ದಾನೆ ಎಂಬುದನ್ನು ಮೊದಲು ಕನ್ಫರ್ಮ್ ಮಾಡಿಕೊಳ್ಳಿ. ಬಳಿಕ ಕಣ್ಮುಚ್ಚಿಕೊಂಡು ನೀವು ಅದೇ ಡೇಟ್‌ಗೆ ಫಿಕ್ಸ್ ಆಗಿ. (ಏಜೆನ್ಸೀಸ್)

English summary
A whopping Rs 150 crore has been bet on which date Aishwarya Rai is going to deliver her baby. And interestingly, 11.11.11 seems to be bookies favorite date.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada